No Noise. Just News
By Ram Chethan • Aug 21, 2025, 07:26 PM
ಹೃತಿಕ್ ರೋಷನ್ ವಿರುದ್ಧ ‘ಕೋಯಿ ಮಿಲ್ ಗಯಾ’ದಲ್ಲಿ ಖಳನಾಯಕನಾಗಿ ಮೆರೆದ ರಜತ್ ಬೇಡಿ, ಈಗ ಆರ್ಯನ್ ಖಾನ್ ನಿರ್ದೇಶನದ ಸರಣಿಯಿಂದ ಹಿಂದಿ ಪರದೆಗೆ ವಾಪಸ್ಸಾಗುತ್ತಿದ್ದಾರೆ. ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಅವರ ಈ ಕಂಬ್ಯಾಕ್ಗೆ ಭರ್ಜರಿ ಸ್ವಾಗತ ನೀಡಿದ್ದಾರೆ.
ಡಾ. ರಾಜ್ಕುಮಾರ್ ಮೊಮ್ಮಗ ಷಣ್ಮುಖ ಗೋವಿಂದರಾಜ್ ನಾಯಕನಾಗಿ ನಟಿಸಿದ ಈ ಸಿನಿಮಾ ಅನೇಕ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡಿದೆ. ಛಾಯಾಗ್ರಹಣ, ನಿರ್ದೇಶನ ಮತ್ತು ಕಲಾವಿದರ ಅಭಿನಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಶಾರುಖ್ ಖಾನ್ ಧ್ವನಿಯಲ್ಲಿ ಪರಿಚಯವಾದ ಲಕ್ಷ್ಯ, ಟ್ರೇಲರ್ನಲ್ಲಿ ಜೈಲು ಸಂಭಾಷಣೆಯಿಂದ ನೆಟಿಜನ್ಗಳಲ್ಲಿ ಚರ್ಚೆಗೆ ಕಾರಣನಾದರು. 2021ರ ತನ್ನ ವಿವಾದಾತ್ಮಕ ಜೈಲುವಾಸವನ್ನು ಆರ್ಯನ್ ಹಾಸ್ಯ ರೂಪದಲ್ಲಿ ಬಳಸಿರುವುದು ವಿಶೇಷ.
40 ದಿನಗಳಲ್ಲಿ $342.4 ಮಿಲಿಯನ್ ಗಳಿಸಿದ ‘ಸೂಪರ್ಮ್ಯಾನ್’, ಉತ್ತರ ಅಮೆರಿಕಾದಲ್ಲಿ ಸರ್ವಕಾಲಿಕ ಟಾಪ್ 80 ಚಿತ್ರಗಳಲ್ಲಿ ಸ್ಥಾನ ಪಡೆದಿದೆ. ಕ್ರಿಸ್ ಹೆಮ್ಸ್ವರ್ತ್ನ ‘ಥಾರ್: ಲವ್ ಅಂಡ್ ಥಂಡರ್’ ಸಂಗ್ರಹವನ್ನು ಮೀರಲು ಕೇವಲ $2 ಮಿಲಿಯನ್ ದೂರದಲ್ಲಿದೆ.