Skip to main content
ವಿಡಿಯೋ
cinema

ಈ ನಟಿಯ ಜೀವ ಉಳಿಸಲು ಲಕ್ಷ ಲಕ್ಷ ಬೇಕು. ಅಷ್ಟಕ್ಕೂ ನಟಿ ಲೀಲಾ ಸಹಾಯದ ಮೊರೆ ಹೋಗಿದ್ದು ಯಾಕೆ?

By Ram Chethan
ಈ ನಟಿಯ ಜೀವ ಉಳಿಸಲು ಲಕ್ಷ ಲಕ್ಷ ಬೇಕು. ಅಷ್ಟಕ್ಕೂ ನಟಿ ಲೀಲಾ ಸಹಾಯದ ಮೊರೆ ಹೋಗಿದ್ದು ಯಾಕೆ?

ಪಲ್ಮನರಿ ಫೈಬ್ರೋಸಿಸ್ ಕಾಯಿಲೆಯಿಂದ ಬಳಲುತ್ತಿರುವ ಕಿರುತೆರೆ ನಟಿ ರಶ್ಮಿ ಲೀಲಾ, 19 ಲಕ್ಷ ರೂ. ವೆಚ್ಚದ ಶ್ವಾಸಕೋಶ ಕಸಿಗಾಗಿ ಜನರಿಂದ ಆರ್ಥಿಕ ನೆರವು ಕೋರಿದ್ದಾರೆ. “ನಿಮ್ಮ ಸಹಾಯ ನನ್ನಿಗೆ ಎರಡನೇ ಜೀವನ” ಎಂದು ಭಾವನಾತ್ಮಕ ಮನವಿ ಮಾಡಿದ್ದಾರೆ.

ಕಿರುತೆರೆ ನಟಿ ರಶ್ಮಿ ಲೀಲಾ, ಗಂಭೀರ ಶ್ವಾಸಕೋಶದ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಸಾರ್ವಜನಿಕರ ಸಹಾಯ ಯಾಚಿಸಿದ್ದಾರೆ. ʻಪಲ್ಮನರಿ ಫೈಬ್ರೋಸಿಸ್ʼ ಎಂಬ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿರುವ ಅವರಿಗೆ, ಶ್ವಾಸಕೋಶ ಕಸಿ (ಲಂಗ್ ಟ್ರಾನ್ಸ್‌ಪ್ಲಾಂಟ್) ಏಕೈಕ ಜೀವ ಉಳಿಸುವ ಮಾರ್ಗವಾಗಿದೆ. ಈ ಶಸ್ತ್ರಚಿಕಿತ್ಸೆಗೆ ಅಂದಾಜು 19 ಲಕ್ಷ ರೂ. ವೆಚ್ಚವಾಗಲಿದ್ದು, ಈ ಬೃಹತ್ ಮೊತ್ತವನ್ನು ಭರಿಸಲು ಆರ್ಥಿಕ ನೆರವು ಕೋರಿದ್ದಾರೆ.

ರಶ್ಮಿ ಲೀಲಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ವಿಸ್ತೃತವಾಗಿ ಬರೆದುಕೊಂಡಿದ್ದಾರೆ. "ನಾನು ಗಂಭೀರ ಶ್ವಾಸಕೋಶದ ಕಾಯಿಲೆಯೊಂದಿಗೆ ಹೋರಾಡುತ್ತಿದ್ದೇನೆ. ಬದುಕುಳಿಯಲು ಶ್ವಾಸಕೋಶ ಕಸಿ ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಇದು ಜೀವ ಉಳಿಸುವ ದುಬಾರಿ ವಿಧಾನವಾಗಿದ್ದು, ಇದನ್ನು ನಾನಾಗಲಿ ಅಥವಾ ನನ್ನ ಕುಟುಂಬವಾಗಲಿ ಭರಿಸಲು ಸಾಧ್ಯವಿಲ್ಲ," ಎಂದು ತಿಳಿಸಿದ್ದಾರೆ. ಚಲನಚಿತ್ರ ನಟ ರಾಘವ ಲಾರೆನ್ಸ್ ಮತ್ತು ಕಿಚ್ಚ ಸುದೀಪ್‌ಗೂ ತಮ್ಮ ಕಷ್ಟವನ್ನು ತಿಳಿಸಿರುವುದಾಗಿ ಉಲ್ಲೇಖಿಸಿದ್ದಾರೆ.

ಪಲ್ಮನರಿ ಫೈಬ್ರೋಸಿಸ್ ಕುರಿತು ವಿವರಣೆ ನೀಡಿದ ರಶ್ಮಿ, "2019ರಲ್ಲಿ ನನಗೆ ಪಲ್ಮನರಿ ಫೈಬ್ರೋಸಿಸ್ ಇರುವುದು ಪತ್ತೆಯಾಯಿತು. ಇದು ಶ್ವಾಸಕೋಶಗಳನ್ನು ನಿಧಾನವಾಗಿ ಹಾನಿಗೊಳಿಸುವ ದೀರ್ಘಕಾಲದ ಕಾಯಿಲೆಯಾಗಿದ್ದು, ಉಸಿರಾಟವನ್ನು ಕಷ್ಟಕರವಾಗಿಸುತ್ತದೆ. ಯಾವುದೇ ಔಷಧಿಗಳು ಹಾನಿಯನ್ನು ಹಿಮ್ಮೆಟ್ಟಿಸಲು ಸಾಧ್ಯವಾಗಿಲ್ಲ. ಶ್ವಾಸಕೋಶ ಕಸಿ ಮಾತ್ರ ಈಗಿರುವ ಏಕೈಕ ಭರವಸೆ," ಎಂದು ಹೇಳಿದ್ದಾರೆ.

Titan Smart 3 Premium Smart Watch|1.96" Super AMOLED Display with 410x502 Pixel Resolution|SingleSync BT Calling|NitroFast Charging|110+ Sports Modes|200+ Watchfaces|Upto 7 Days Battery (Copper)

ಪ್ರಸ್ತುತ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅವರು, ವೈದ್ಯಕೀಯ ಆರೈಕೆ, ಪರೀಕ್ಷೆಗಳು, ಆಮ್ಲಜನಕ ಬೆಂಬಲ ಮತ್ತು ಆಸ್ಪತ್ರೆ ವಾಸ್ತವ್ಯಕ್ಕಾಗಿ ಈಗಾಗಲೇ ಸುಮಾರು 12 ಲಕ್ಷ ರೂ. ಖರ್ಚು ಮಾಡಿದ್ದಾರೆ. ಶಸ್ತ್ರಚಿಕಿತ್ಸೆ ಮತ್ತು ನಂತರದ ಆರೈಕೆಗೆ ಒಟ್ಟು 19 ಲಕ್ಷ ರೂ. ಬೇಕಾಗಿದ್ದು, ಕುಟುಂಬದ ಬಳಿ ಅಷ್ಟು ದೊಡ್ಡ ಮೊತ್ತ ಇಲ್ಲ ಎಂದು ತಿಳಿಸಿದ್ದಾರೆ.

ಸುಧಾರಾಣಿ ಮಗಳು ಸಿನಿಮಾ ರಂಗಕ್ಕೆ ಬರೋದು ಫಿಕ್ಸಾ? ಅವರ ಚಾಯ್ಸ್ ಹೇಗಿದೆ ಗೊತ್ತಾ?

"ನಮ್ಮದು ಮೂರು ಜನರ ಚಿಕ್ಕ ಕುಟುಂಬ. ನನ್ನ ಚಿಕಿತ್ಸೆಗೆ ಬೇಕಾದ ಹಣವನ್ನು ಒಬ್ಬರೇ ಸಂಪಾದಿಸುವ ಸದಸ್ಯರು ಭರಿಸಲು ಕಷ್ಟಪಡುತ್ತಿದ್ದಾರೆ. ನನಗೆ ಸ್ವತಂತ್ರವಾಗಿ ಉಸಿರಾಡುವುದು ಒಂದೇ ಕನಸು. ಆದರೆ, ಬಾಹ್ಯ ಸಹಾಯವಿಲ್ಲದೆ ಇದು ಸಾಧ್ಯವಿಲ್ಲ," ಎಂದು ರಶ್ಮಿ ಲೀಲಾ ಮನವಿ ಮಾಡಿಕೊಂಡಿದ್ದಾರೆ.

"ಇಂದು ನಿಮ್ಮ ಬೆಂಬಲ ನನಗೆ ಎರಡನೇ ಜೀವನವನ್ನು ನೀಡುತ್ತದೆ. ನೀವು ನೀಡುವ ಪ್ರತಿ ರೂಪಾಯಿಯೂ ನನ್ನ ಜೀವನದಲ್ಲಿ ದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತದೆ. ದಯವಿಟ್ಟು ಉದಾರವಾಗಿ ದೇಣಿಗೆ ನೀಡಿ, ಇದು ನನ್ನ ವೈದ್ಯಕೀಯ ಅಗತ್ಯಗಳಿಗೆ ಮಾತ್ರ ಬಳಕೆಯಾಗಲಿದೆ. ನನ್ನ ಚಿಕಿತ್ಸೆಗೆ ಸಾಕಷ್ಟು ಹಣ ಸಂಗ್ರಹಿಸಲು ನಿಮ್ಮೆಲ್ಲರ ಸಹಾಯವನ್ನು ನಾನು ನಿರೀಕ್ಷಿಸುತ್ತೇನೆ," ಎಂದು ಸಾರ್ವಜನಿಕರಲ್ಲಿ ಕೇಳಿಕೊಂಡಿದ್ದಾರೆ