ಧರ್ಮಸ್ಥಳದಲ್ಲಿ ನಡೆದ ಸಾಮೂಹಿಕ ಅಂತ್ಯಕ್ರಿಯೆಗಳ ಪ್ರಕರಣದಲ್ಲಿ ತನಿಖೆ ಹೊಸ ಹಂತಕ್ಕೇರಿದೆ. ಈ ಪ್ರಕರಣವನ್ನು ಪರಿಶೀಲಿಸಲು ರಚಿಸಲಾದ ವಿಶೇಷ ತನಿಖಾ ತಂಡ (ಎಸ್‌ಐಟಿ) ಧರ್ಮಸ್ಥಳ ಮೂಲದ ಸುಜಾತಾ ಭಟ್ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಸುಜಾತಾ ಭಟ್ ಅವರಿಗೆ ಬೆಂಗಳೂರಿನ ನಿವಾಸದಲ್ಲೇ ನೋಟಿಸ್ ನೀಡಲಾಗಿದ್ದು, ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಹಾಜರಾಗಿ ತಮ್ಮ ಹೇಳಿಕೆ ನೀಡುವಂತೆ ಸೂಚಿಸಲಾಗಿದೆ. ಜೊತೆಗೆ, ತಮ್ಮ ಮಗಳು ಅನನ್ಯ ಭಟ್ ಸಂಬಂಧಿಸಿದ ಯಾವುದೇ ದಾಖಲೆಗಳಿದ್ದರೆ ಹಾಜರುಪಡಿಸುವಂತೆ ಸೂಚನೆ ನೀಡಲಾಗಿದೆ.
ಆದರೆ ನಿನ್ನೆ ಇನ್‌ಸೈಟ್ ರಶ್ ನ್ಯೂಸ್ ಜೊತೆ ಮಾತನಾಡಿದ ಸುಜಾತಾ ಭಟ್, “ಅನನ್ಯ ಭಟ್ ನನ್ನ ಮಗಳಲ್ಲ. ನಾನು ಇಷ್ಟು ದಿನ ಹೇಳಿದ್ದು ಸುಳ್ಳು" ಎಂದು ಅವರೇ ಸ್ಪಷ್ಟಪಡಿಸಿದ್ದಾರೆ.ನಾನು ಹೇಳಿದ್ದು ಸುಳ್ಳು - ತಪ್ಪು ಒಪ್ಪಿಕೊಂಡ - ಸುಜಾತ ಭಟ್ INSIGHTRUSH MEGA EXCLUSIVE ... | Sujatha Bhat |
ವರದಿಗಳ ಪ್ರಕಾರ, ಸುಜಾತಾ ಭಟ್ ಅವರು ಶೀಘ್ರದಲ್ಲೇ ವಿಚಾರಣೆಗೆ ಹಾಜರಾಗುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಎಸ್‌ಐಟಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಅಗತ್ಯವಿದ್ದರೆ ಇತರರಿಗೂ ನೋಟಿಸ್ ನೀಡುವ ಸಾಧ್ಯತೆ ಇದೆ.
Lavie Women's Tinkle Framed Clutch | Ladies Purse Handbag
ಈ ಪ್ರಕರಣವನ್ನು ಎಸ್‌ಐಟಿಗೆ ಹಸ್ತಾಂತರಿಸಿದ ನಂತರ ತನಿಖೆ ವೇಗವಾಗಿ ಮುಂದುವರಿಯುತ್ತಿದೆ. ಈಗಾಗಲೇ ಶಿವಮೊಗ್ಗ, ಬೆಂಗಳೂರು ಮತ್ತು ಉಡುಪಿನಲ್ಲಿ ಪೊಲೀಸರು ದಾಖಲೆಗಳನ್ನು ಸಂಗ್ರಹಿಸಿದ್ದಾರೆ.
ಸುಜಾತಾ ಭಟ್ ಅವರ ಹೇಳಿಕೆಯಂತೆ, 2003ರಲ್ಲಿ ಅನನ್ಯ ಭಟ್ ಎಂಬ ವಿದ್ಯಾರ್ಥಿನಿ ನಾಪತ್ತೆಯಾಗಿದ್ದಾಳೆ ಎಂದು ತಿಳಿದುಬಂದಿದ್ದರೂ, ಇದುವರೆಗೆ ನೀಡಿರುವ ಸಾಕ್ಷ್ಯ ಕೇವಲ ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರ ಮಾತ್ರ. ಆದರೆ ಆ ಸಮಯದಲ್ಲಿ ‘ಅನನ್ಯ ಭಟ್’ ಎಂಬ ಹೆಸರಿನ ವಿದ್ಯಾರ್ಥಿನಿ ಇದ್ದಾಳೆ ಎಂಬುದಕ್ಕೆ ಯಾವುದೇ ದೃಢ ದಾಖಲೆಗಳು ಸಿಕ್ಕಿಲ್ಲ.ತಪ್ಪು ಒಪ್ಪಿಕೊಂಡ ಸುಜಾತ ಭಟ್ - ನನಗೆ ಮಗಳೇ ಇಲ್ಲ – ಸುಳ್ಳು ದೂರು ಕೊಟ್ಟಿದು ತಪ್ಪು – ನನ್ನ ವಯಸ್ಸು ಆಧರಿಸಿ ಶಿಕ್ಷೆಯಿಂದ ವಿನಾಯಿತಿ ಕೊಡಿ – ಸುಜಾತ ಭಟ್ EXCLUSIVE INTERVIEW
ಮಂಗಳೂರು ಮತ್ತು ಮಣಿಪಾಲದ ವೈದ್ಯಕೀಯ ಕಾಲೇಜುಗಳಲ್ಲಿ ಪೊಲೀಸರು ಪರಿಶೀಲನೆ ನಡೆಸಿದರೂ, ಅವಳ ಹೆಸರಿನಲ್ಲಿ ಯಾವುದೇ ದಾಖಲೆ ಪತ್ತೆಯಾಗಿಲ್ಲ. ಈ ಪ್ರಕರಣ ಇನ್ನೂ ಹಲವು ಪ್ರಶ್ನೆಗಳನ್ನು ಎಬ್ಬಿಸುತ್ತಿದ್ದು, ಮುಂದಿನ ವಿಚಾರಣೆಯಲ್ಲಿ ಹೆಚ್ಚಿನ ಸ್ಪಷ್ಟತೆ ಸಿಗುವ ನಿರೀಕ್ಷೆಯಿದೆ.ಯೆಮೆನ್‌ನಲ್ಲಿ ನಿಮಿಷಾ ಪ್ರಿಯಾ ಮರಣದಂಡನೆ ಪ್ರಕರಣ: ಸುಪ್ರೀಂ ಕೋರ್ಟ್‌ನಲ್ಲಿ PIL ವಿಚಾರಣೆ..!