ಬೆಂಗಳೂರು : ಇಷ್ಟು ದಿನ ಅನನ್ಯ ಭಟ್ ಅಂತ ಹೇಳಿರೋ ಕಥೆನೇ ಸುಳ್ಳು ಅಂತ ಇನ್ಸೈಟ್‌ರಶ್ ನ್ಯೂಸ್ ಜೊತೆ ನೇರವಾಗಿ ಮಾತನಾಡಿದ ಸುಜಾತ ಭಟ್ ತಾನು ಹೇಳಿದ್ದೆಲ್ಲಾ ಸುಳ್ಳು ಎಂಬ ತಪ್ಪೊಪ್ಪಿಗೆಯನ್ನ ಮಾಡಿದ್ದಾರೆ.ಇದನ್ನೂ ಓದಿ: ತಪ್ಪು ಒಪ್ಪಿಕೊಂಡ ಸುಜಾತ ಭಟ್ - ನನಗೆ ಮಗಳೇ ಇಲ್ಲ – ಸುಳ್ಳು ದೂರು ಕೊಟ್ಟಿದು ತಪ್ಪು – ನನ್ನ ವಯಸ್ಸು ಆಧರಿಸಿ ಶಿಕ್ಷೆಯಿಂದ ವಿನಾಯಿತಿ ಕೊಡಿ – ಸುಜಾತ ಭಟ್ EXCLUSIVE INTERVIEW
ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸುಜಾತಾ ಭಟ್ ಎಂಬಾಕೆ ತಾನು ಹೇಳಿದ್ದೆಲ್ಲವೂ ಸುಳ್ಳು ಎಂದು ಒಪ್ಪಿಕೊಂಡಿದ್ದಾರೆ. ಅನನ್ಯಾ ಭಟ್ ಎಂಬ ಮಗಳೇ ಇರಲಿಲ್ಲ, ಆಸ್ತಿಗಾಗಿ ಸುಳ್ಳು ಕಥೆ ಕಟ್ಟಿದೆ, ಎಂದು ಸುಜಾತಾ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ವಿವಾದದ ಹಿಂದೆ ಗಿರೀಶ್ ಮಟ್ಟಣ್ಣನವರ್ ಮತ್ತು ಜಯಂತ್ ಟಿ. ಎಂಬವರ ಮಾತುಗಳಿಂದ ಪ್ರೇರಿತರಾಗಿ ಈ ಸುಳ್ಳನ್ನು ಹೇಳಿದ್ದಾಗಿ ಆಕೆ ತಿಳಿಸಿದ್ದಾರೆ. ಸುಜಾತಾ ಭಟ್ ತಮ್ಮ ಹೇಳಿಕೆಯಲ್ಲಿ, ನಾನು ಟೆನ್ಷನ್ನಲ್ಲಿದ್ದೆ, ಬಲವಂತದಿಂದ ಸುಳ್ಳು ಹೇಳಿಕೆ ನೀಡಿದ್ದೇನೆ. ಆಸ್ತಿಗಾಗಿ ಅನನ್ಯಾ ಭಟ್ ಎಂಬ ಕಥೆಯನ್ನು ಕಟ್ಟಿದೆ. ಇದಕ್ಕೆ ಧರ್ಮಸ್ಥಳದ ಭಕ್ತರ ಕ್ಷಮೆ ಕೇಳುತ್ತೇನೆ, ಎಂದು ತಿಳಿಸಿದ್ದಾರೆ. ನಾನು ಹೇಳಿದ್ದು ಸುಳ್ಳು - ತಪ್ಪು ಒಪ್ಪಿಕೊಂಡ - ಸುಜಾತ ಭಟ್ INSIGHTRUSH MEGA EXCLUSIVE ... | Sujatha Bhat |
ಈ ವಿಷಯದ ಕುರಿತು ಎಸ್ಐಟಿ ಮುಂದೆ ಎಲ್ಲಾ ಸತ್ಯವನ್ನು ಬಹಿರಂಗಪಡಿಸುವುದಾಗಿಯೂ ಆಕೆ ಭರವಸೆ ನೀಡಿದ್ದಾರೆ. ಈ ವಿವಾದವು ಆಸ್ತಿ ಸಂಬಂಧಿತ ತೊಡಕುಗಳಿಂದ ಉಂಟಾಗಿದ್ದು, ಸುಜಾತಾ ಭಟ್ರ ಹೇಳಿಕೆಯಿಂದ ಧರ್ಮಸ್ಥಳದ ಭಕ್ತರಲ್ಲಿ ಆಘಾತ ಮೂಡಿದೆ. ನನ್ನನ್ನು ಕಾರಲ್ಲಿ ಕೂಡಿಹಾಕಿ ಹೇಳಿಕೆ ಪಡೆದಿದ್ದಾರೆ ಎಂಬುದು ಸಹ ಸತ್ಯವಲ್ಲ, ಎಂದು ಆಕೆ ಸ್ಪಷ್ಟಪಡಿಸಿದ್ದಾರೆ. ಈ ವಿಷಯದ ಕುರಿತು ಮುಂದಿನ ತನಿಖೆಯನ್ನು ಎಸ್ಐಟಿ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ. ಧರ್ಮಸ್ಥಳದ ಭಕ್ತರು ಮತ್ತು ಸ್ಥಳೀಯರು ಈ ಘಟನೆಯಿಂದ ಕೆಲವು ಕಾಲ ಗೊಂದಲಕ್ಕೊಳಗಾಗಿದ್ದರೂ, ಸುಜಾತಾ ಭಟ್ರ ಕ್ಷಮಾಪಣೆಯನ್ನು ಕೆಲವರು ಸಕಾರಾತ್ಮಕವಾಗಿ ಸ್ವೀಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ವಿವಾದಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಸ್ಪಷ್ಟತೆ ದೊರೆಯುವ ನಿರೀಕ್ಷೆಯಿದೆ.
ಆದರೆ ಮತ್ತೆ ಯೂಟರ್ನ್ ಹೊಡೆದಿರೋ ಸುಜಾತಾ ಭಟ್ ನ್ಯೂಸ್ ಚಾನಲ್ ಮುಂದೆ ಹೋಗಿ ನಾನನ್ನೂ ಒತ್ತಾಯ ಪೂರ್ವಕವಾಗಿ ಇಷ್ಟೆಲ್ಲಾ ಹೇಳಿಸಿದ್ದಾರೆ. ಯೂಟ್ಯೂಬ್ ಚಾನೆಲ್ ಅವರು ಒತ್ತಾಯ ಪೂರ್ವಕವಾಗಿ ಉದ್ಧೇಶ ಪೂರ್ವಕವಾಗಿ ಇದೆಲ್ಲಾ ಮಾಡಿಸಿದ್ದು ಅಂತ ಸ್ಫೋಟಕ ಮಾಹಿತಿಯನ್ನು ನೀಡಿದ್ದಾರೆ.
ಒತ್ತಾಯ ಮಾಡಿ ಬಂದು ಕಾರಿನಲ್ಲಿ ಕೂರಿಸಿ ಕೆಲವರ ಹೆಸರನ್ನು ಹೇಳಿ ಎಂದು ಹೇಳಿ ಹೇಳಿ ಕೊಟ್ಟಿದ್ದಾರೆ ಅದಕ್ಕೆ ನಾನು ಅವರ ಹೆಸರನ್ನ ಹೇಳಿದೆ ಅಂತ ನ್ಯೂಸ್ ಚಾನೆಲ್ ಮುಂದೆ ಸ್ಫೋಟಕ ಹೇಳಿಕೆಯನ್ನ ನೀಡಿದ್ದಾರೆ.