ಅನನ್ಯಾ ಭಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಜಾತಾ ಭಟ್ ಅವರ ಹೇಳಿಕೆಗಳು ಸಾಕಷ್ಟು ಗೊಂದಲಕ್ಕೆ ಕಾರಣವಾಗಿವೆ. ಈ ಪ್ರಕರಣದಲ್ಲಿ ದಿನಕ್ಕೊಂದು ಬದಲಾವಣೆಯಾಗುತ್ತಿವೆ. ನಿನ್ನೆ ಅವರ ಮನೆಯ ಮುಂದೆ ರಾತ್ರಿಯಿಡೀ ಹೈಡ್ರಾಮಾ ನಡೆದಿತ್ತು ಎಂಬುದು ತಿಳಿದು ಬಂದಿದೆ. ಆರಂಭದಲ್ಲಿ ಅನನ್ಯಾ ಭಟ್ ಪ್ರಕರಣ ಸುಳ್ಳು ಎಂದು ನಮ್ಮ ಇನ್‌ಸೈಟ್ ರಶ್ ನ್ಯೂಸ್, ಯೂಟ್ಯೂಬ್ ಚಾನೆಲ್‌ನಲ್ಲಿ ಸುಜಾತಾ ಭಟ್ ಹೇಳಿಕೆ ನೀಡಿದ್ದರು. ಆದರೆ, ಸುದ್ದಿ ಮಾಧ್ಯಮಗಳಲ್ಲಿ ಈ ವಿಚಾರ ಪ್ರಸಾರವಾಗುತ್ತಿದ್ದಂತೆ ಅವರು ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದರು.
ಇದನ್ನೂ ಓದಿ : ಧರ್ಮಸ್ಥಳ ಪ್ರಕರಣ: ಮಾಸ್ಕ್ ಮ್ಯಾನ್ ಚಿನ್ನಯ್ಯ (ಭೀಮ)ನ ಗುರುತು ಬಹಿರಂಗ..!
ಸುಜಾತಾ ಭಟ್ ಅವರು ಬೆದರಿಕೆ ಹಾಕಿ ನನ್ನಿಂದ ಈ ಹೇಳಿಕೆ ಕೊಡಿಸಿದ್ದಾರೆ, ಪ್ರಾಣಭಯದಿಂದ ಹಾಗೆ ಹೇಳಬೇಕಾಯಿತು ಎಂದು ಹೇಳಿಕೆ ನೀಡಿದ್ದರು. ನಂತರ, ಮಾಧ್ಯಮಗಳಿಂದ ತಪ್ಪಿಸಿಕೊಳ್ಳಲು ಪ್ರಜ್ಞೆ ತಪ್ಪಿದಂತೆ ನಟಿಸಿದ್ದರು. ಇದಾದ ನಂತರ, ಸ್ಥಳೀಯರು ಸುಜಾತಾ ಭಟ್ ಅವರ ಮನೆಯ ಮುಂದೆ ಜಮಾಯಿಸಿ, ಅವರನ್ನು ಹೊರಗೆ ಕೊಂಡೊಯ್ಯದಂತೆ ಮಾಧ್ಯಮದವರನ್ನು ತಡೆದರು. ಖಾಸಗಿ ಮಾಧ್ಯಮವೊಂದು ಸುಜಾತಾ ಭಟ್ ಅವರನ್ನು ಕರೆದುಕೊಂಡು ಹೋಗಲು ಪ್ರಯತ್ನಿಸಿತು.
ಇದೇ ವೇಳೆ, ಧರ್ಮಸ್ಥಳದ ಸ್ಥಳೀಯ ಯೂಟ್ಯೂಬರ್ 'ಸಂಚಾರಿ ಸ್ಟುಡಿಯೋ' ಸ್ಥಳಕ್ಕೆ ಆಗಮಿಸಿದರು. ಆದರೆ, ಸ್ಥಳೀಯರು ಅವರನ್ನು ಮನೆಯೊಳಗೆ ಬಿಡಲಿಲ್ಲ. ನಂತರ, ಯೂಟ್ಯೂಬರ್ ಸುಜಾತಾ ಭಟ್ ಅವರೊಂದಿಗೆ ದೂರವಾಣಿ ಮೂಲಕ ಸಂಪರ್ಕ ಸಾಧಿಸಿ, ಸುಜಾತಾ ಭಟ್‌ಗೆ ಪ್ರಾಣ ಬೆದರಿಕೆ ಇದೆ ಎಂದು ಯೂಟ್ಯೂಬ್‌ನಲ್ಲಿ ಲೈವ್ ಮಾಡುತ್ತಾ ಓಡಾಡಿದರು. ಪೊಲೀಸರು ಆಗಮಿಸುತ್ತಿದ್ದಂತೆ, ಯೂಟ್ಯೂಬರ್ ಮಾಧ್ಯಮಗಳಿಂದ ಸುಜಾತಾ ಭಟ್‌ಗೆ ಬೆದರಿಕೆ ಇದೆ, ನಾವು ಯಾರನ್ನೂ ಕರೆದಿಲ್ಲ ಎಂದು ಹೇಳಿದ್ದರು. ತಾನು ಸುಜಾತಾ ಭಟ್ ಪರ ವಕೀಲರ ಕಡೆಯವನು ಎಂದು ಪೊಲೀಸರಿಗೆ ಪರಿಚಯಿಸಿಕೊಂಡರು. ಇದೇ ಸಮಯದಲ್ಲಿ, ಮತ್ತೆ ಕೆಳಗಿಳಿದು ಬಂದ ಸುಜಾತಾ ಭಟ್ ಅವರು ಮಾಧ್ಯಮಗಳು ನನಗೆ ಬೆದರಿಕೆ ಹಾಕುತ್ತಿವೆ ಎಂದು ಆರೋಪಿಸಿದ್ದರು.
Toochki Top for Women | Lycra Crop Tops | Black White Beige Grey | Short | Western | Pack of 3 Combo
ನಂತರ, ಪೊಲೀಸರು ಎಲ್ಲರನ್ನೂ ಸ್ಥಳದಿಂದ ಕಳುಹಿಸಿದರು. ಇದಾದ ಬಳಿಕ, ಖಾಸಗಿ ಚಾನೆಲ್‌ನ ಮುಖ್ಯಸ್ಥರು ಸ್ಥಳಕ್ಕೆ ಆಗಮಿಸಿ, ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ಚಾನೆಲ್‌ನ ಹೆಸರು ಹೇಳಿದ್ದಕ್ಕಾಗಿ ಯೂಟ್ಯೂಬರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಅದೇ ಚಾನೆಲ್ ಮೂಲಕ ಲೈವ್ ಮಾಡಿಸಿ, ಯೂಟ್ಯೂಬರ್ ಅವರಿಗೆ ಕ್ಲಾಸ್ ತೆಗೆದುಕೊಂಡರು. ಬಳಿಕ, ಯೂಟ್ಯೂಬರ್ ಕ್ಷಮೆ ಕೇಳಿ ಸ್ಥಳದಿಂದ ತೆರಳಿದರು. ಸದ್ಯಕ್ಕೆ, ಸುಜಾತಾ ಭಟ್ ಅವರ ಮನೆಗೆ ಬನಶಂಕರಿ ಠಾಣೆಯಿಂದ ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿದೆ.