Skip to main content
ವಿಡಿಯೋ
politics

ಧರ್ಮಸ್ಥಳ ಪ್ರಕರಣ: ಬಂಧನ ದೃಢಪಡಿಸಿದ ಗೃಹ ಸಚಿವರು, ತನಿಖೆ ಮುಂದುವರಿಕೆ ಬಗ್ಗೆ ಸ್ಪಷ್ಟನೆ!

By Shravanthi R
ಧರ್ಮಸ್ಥಳ ಪ್ರಕರಣ: ಬಂಧನ ದೃಢಪಡಿಸಿದ ಗೃಹ ಸಚಿವರು, ತನಿಖೆ ಮುಂದುವರಿಕೆ ಬಗ್ಗೆ ಸ್ಪಷ್ಟನೆ!

ಸುಜಾತ ದೂರಿನ ಮೊದಲು ನನಗೆ ಹೆದರಿಕೆಯಿತ್ತು ಆನಂತರ ನನಗೆ ಧೈರ್ಯ ಮಾಡಿದೆ ಎಂದಿರುವ ಅನಾಮಿಕ ತಪ್ಪೊಪ್ಪೊಕೊಂಡು ಹೇಳಿಕೆ ನೀಡಿರುವ ಸತ್ಯದ ಬಗ್ಗೆ ಎಲ್ಲಕಡೆ ಚರ್ಚೆ ಆಗುತ್ತಿರುವ ಸಂದರ್ಭದಲ್ಲಿ ಇದೀಗ ಪ್ರಕರಣಕ್ಕೆ ಹೊಸದಾದ ದೊಡ್ಡ ಮಟ್ಟದ ತಿರುವು ಸಿಕ್ಕಿದೆ, ಈ ಬಗ್ಗೆ ರಾಜ್ಯದ ಗೃಹ ಸಚಿವರು ಪ್ರತಿಕ್ರಿಯಿಸಿದ್ದಾರೆ.

ಗೃಹ ಸಚಿವರಾದ ಜಿ. ಪರಮೇಶ್ವರ್‌ ಅವರು ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ಬೆಳವಣಿಗೆ, ತನಿಖೆ ಕುರಿತು ಪ್ರತಿಕ್ರಿಯಿಸಿದ್ದಾರೆ. ಬಂಧನವಾಗಿರುವುದು ನಿಜ ಎಂದು ದೃಢಪಡಿಸಿದ್ದು, ತನಿಖೆ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ. ಸುಜಾತ ದೂರಿನ ಮೊದಲು ನನಗೆ ಹೆದರಿಕೆಯಿತ್ತು ಆನಂತರ ನನಗೆ ಧೈರ್ಯ ಮಾಡಿದೆ ಎಂದಿರುವ ಅನಾಮಿಕ ತಪ್ಪೊಪ್ಪೊಕೊಂಡು ಹೇಳಿಕೆ ನೀಡಿರುವ ಸತ್ಯದ ಬಗ್ಗೆ ಎಲ್ಲಕಡೆ ಚರ್ಚೆ ಆಗುತ್ತಿರುವ ಸಂದರ್ಭದಲ್ಲಿ ಇದೀಗ ಪ್ರಕರಣಕ್ಕೆ ಹೊಸದಾದ ದೊಡ್ಡ ಮಟ್ಟದ ತಿರುವು ಸಿಕ್ಕಿದೆ, ಈ ಬಗ್ಗೆ ರಾಜ್ಯದ ಗೃಹ ಸಚಿವರು ಪ್ರತಿಕ್ರಿಯಿಸಿದ್ದಾರೆ.

ಪ್ರಮುಖ ಮಾಹಿತಿ ಮತ್ತು ವಿಚಾರಣೆ: ಗೃಹ ಸಚಿವರು ಬಂಧಿತ ವ್ಯಕ್ತಿಯಿಂದ ಕೆಲವು ಸ್ಫೋಟಕ ಮಾಹಿತಿಗಳನ್ನು ಅನಾಮಿಕ ಎನಿಸಿಕೊಂಡಿರುವ ಸಿ.ಎನ್‌ ಚಿನ್ನಯ್ಯ ಬಿಚ್ಚಿಟ್ಟಿರುವ ಬಗ್ಗೆ ಎಸ್‌ಐಟಿ ಮಾಹಿತಿ ಪಡೆದಿರುವುದಾಗಿ ಹೇಳಿದ್ದು, ಈ ಮಾಹಿತಿಯ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಬಂಧಿತನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ ಮತ್ತು ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ.


TheGiftKart Hybrid Shockproof Back Cover Case for OnePlus Nord CE 5 5G Compatible with MagSafe | Hard Back Cover Case for OnePlus Nord CE 5 5G (PC & TPU, Translucent Smoke Matte Back, Black Sides)

ಪರೀಕ್ಷೆ ಮತ್ತು ವಿಚಾರಣೆ: ತನಿಖೆಯ ಭಾಗವಾಗಿ ಬಂಧಿತನಿಗೆ ಮಂಪರು ಪರೀಕ್ಷೆ (narco test) ನಡೆಸುವ ಬಗ್ಗೆ ಎಸ್‌ಐಟಿ ನಿರ್ಧಾರ ಕೈಗೊಳ್ಳಲಿದೆ. ಬೆಳ್ತಂಗಡಿ ಕೋರ್ಟ್‌ನಲ್ಲಿ ಈ ಪ್ರಕರಣವನ್ನು ನ್ಯಾಯಾಧೀಶ ಸಂದೇಶ್ ಅವರ ಮುಂದೆ ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ. ಕಾನೂನು ಮತ್ತು ನ್ಯಾಯದ ಪ್ರಕ್ರಿಯೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.


ಇದನ್ನೂ ಓದಿ: ಅನನ್ಯಾ ಭಟ್ ಪ್ರಕರಣ: ಸುಜಾತಾ ಭಟ್ ಮನೆ ಮುಂದೆ ಹೈಡ್ರಾಮಾ...ಯೂಟ್ಯೂಬರ್ ಲೈವ್ ಡ್ರಾಮಾ!