ಬೆಂಗಳೂರು: ಧರ್ಮಸ್ಥಳದ ವಿರುದ್ಧ "ಸಾವಿರಾರು ಶವಗಳನ್ನು ಹೂತು ಹಾಕಲಾಗಿದೆ" ಎಂಬ ಸುಳ್ಳು ಆರೋಪ ಮಾಡಿದ್ದ "ಅನಾಮಧೇಯ ವ್ಯಕ್ತಿ"ಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ತಾನು ಈ ಸುಳ್ಳು ಹರಡಲು ಗುಂಪುಗಳಿಂದ ₹2 ಲಕ್ಷ ಹಣ ಪಡೆದಿದ್ದೇನೆ ಎಂದು ಒಪ್ಪಿಕೊಂಡಿದ್ದಾನೆ ಎಂದು ತನಿಖಾ ಮೂಲಗಳು ತಿಳಿಸಿವೆ.
ಈ ಆರೋಪಿಯ ಸುಳ್ಳು ಹೇಳಿಕೆಯನ್ನು ಈಗ ಸಂಪೂರ್ಣವಾಗಿ ತಳ್ಳಿಹಾಕಲಾಗಿದೆ ಮತ್ತು ಆತನ ಗುರುತನ್ನು ಗೌಪ್ಯವಾಗಿಡದೆ, ಆತನ ಫೋಟೋವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಈತನ ಕೃತ್ಯವು ಧರ್ಮಸ್ಥಳದ ಭಕ್ತರ ಮನಸ್ಸಿನಲ್ಲಿ ಗೊಂದಲವನ್ನುಂಟುಮಾಡಿ, ಸಾರ್ವಜನಿಕರಲ್ಲಿ ಅಶಾಂತಿ ಉಂಟುಮಾಡುವ ಉದ್ದೇಶವನ್ನು ಹೊಂದಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ.ಇದನ್ನು ಓದಿ-ಧರ್ಮಸ್ಥಳ ವಿರುದ್ಧದ ಸುಳ್ಳು ಆರೋಪಗಳ ಮಹಿಳೆ ಸುಜಾತಾ ಭಟ್: ಅಸಲಿ ಮುಖವಾಡ ಭೇದಿಸಿದ ಇನ್‌ಸೈಟ್ ರಷ್ ನ್ಯೂಸ್ ಯೌಟ್ಯೂಬ್ ಚಾನೆಲ್
ಈ ಆರೋಪಿಯನ್ನು ಯಾರು ಈ ಕೃತ್ಯಕ್ಕೆ ಪ್ರೇರೇಪಿಸಿದರು ಮತ್ತು ಹಣವನ್ನು ಒದಗಿಸಿದವರ ಬಗ್ಗೆ ಮಾಹಿತಿ ಸಂಗ್ರಹಿಸಲು ಪೊಲೀಸರು ತನಿಖೆಯನ್ನು ಶುರುಮಾಡಿದ್ದಾರೆ . ಈ ಘಟನೆಯಿಂದ ಧರ್ಮಸ್ಥಳದ ಗೌರವ ಮತ್ತು ಭಕ್ತರ ಭಾವನೆಗಳಿಗೆ ಧಕ್ಕೆಯಾಗಿದ್ದು, ಕಾನೂನಿನಡಿಯಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.