ಬೆಂಗಳೂರು; ಆಗಸ್ಟ್ 22 ನೇ ತಾರೀಕು ಸಂಜೆ ಇನ್ಸೈಟ್ ರಷ್ ನ್ಯೂಸ್ ತಂಡ ಧರ್ಮಸ್ಥಳದ ಬಗ್ಗೆ ತನ್ನ ಸುಳ್ಳು ಆರೋಪಗಳನ್ನು ಮಾಡಿದ್ದ ಸುಜಾತಾ ಭಟ್ ಅವರನ್ನ ಸಂದರ್ಶನ ಮಾಡಿದ್ದು ಆ ಸಂದರ್ಶನದಲ್ಲಿ ಸುಜಾತ ಭಟ್ ಸತ್ಯವನ್ನೆಲ್ಲ ಆಚೆ ಕಕ್ಕಿದ್ದಾರೆ.
ಧರ್ಮಸ್ಥಳಕ್ಕೆ ಹೋಗಿದ್ದ ನನ್ನ ಮಗಳು ಕಾಣೆಯಾಗಿದ್ದಳು ಪುನಃ ಬರಲೇ ಇಲ್ಲ ಅವಳನ್ನು ಅಲ್ಲೇ ಕೊಲೆ ಮಾಡಿ ಹೂತು ಹಾಕಿದ್ದಾರೆ ಹೀಗಾಗಿ ಅವಳ ಅಸ್ಥಿಯನ್ನಾದರೂ ಕೊಡಿ ಎಂದು ಸುಂದರವಾದ ಕಥೆ ಕಟ್ಟಿದ ಸುಜಾತ ಭಟ್ ಪೊಲೀಸರ ಅತಿಥಿಯಾಗುವ ಸಮಯ ಬಂದಿದೆ ಅನಿಸುತ್ತಿದೆ.
ಆದರೆ ಇಲ್ಲಿ ಯೋಚನೆ ಮಾಡಬೇಕಿರುವುದು ಯಾರದ್ದೋ ಮಾತನ್ನು ಕೇಳಿ ಇಷ್ಟು ವಯಸ್ಸಾದ ಮೇಲೆ ಇಂಥ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳುವ ಅವಶ್ಯಕತೆಯಾದರೂ ಸುಜಾತ ಭಟ್ ಅವರಿಗೆ ಏನಿತ್ತು ಎನ್ನುವುದು ಇಲ್ಲಿ ದೊಡ್ಡ ಪ್ರಶ್ನೆಯಾಗಿದೆ, ಎಲ್ಲ ವಿಚಾರಗಳ ಬಗ್ಗೆ ಯೂಟ್ಯೂಬ್ ಚಾನೆಲ್ ಆದ ಇನ್‌ಸೈಟ್ ರಷ್ ನ್ಯೂಸ್ ಮೀಡಿಯಾ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಸತ್ಯತೆಯನ್ನು ಹೊರಹಾಕಿದ್ದಾರೆ, ಅವರ ಕುಟುಂಬದ ಜಮೀನು ವಿಚಾರವಾಗಿ ಮನಸ್ತಾಪ ಉಂಟಾಗಿ ಆ ಕಾರಣದಿಂದ ಧರ್ಮಸ್ಥಳದ ಮೇಲೆ ಸುಳ್ಳು ಆರೋಪಗಳನ್ನು ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಸುಜಾತ ಭಟ್ಟ್ ಅವರು.also read:ಧರ್ಮಸ್ಥಳದ ವಿರುದ್ಧ ಸುಳ್ಳು ಹೇಳಲು ₹2 ಲಕ್ಷ ಪಡೆದ "ಅನಾಮಧೇಯ ವ್ಯಕ್ತಿ" ಬಂಧನ: ಆತನ ಫೋಟೋ ಬಿಡುಗಡೆ
ಆದರೆ ಇಲ್ಲಿ ಯೋಚನೆ ಮಾಡಬೇಕಿರುವುದು ಏನೆಂದರೆ, ಈ ರೀತಿಯ ಚಿಕ್ಕಪುಟ್ಟ ಕುಟುಂಬದ ವಿಚಾರಗಳಿಗೆ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಭಕ್ತರಿಗೆ ಅವರ ಭಕ್ತಿಯ ಮೇಲೆ ಅನುಮಾನ ಬರುವಂತೆ ಸುಜಾತ ಭಟ್ಟ್ ಅವರು ಈ ರೀತಿಯ ಹೇಳಿಕೆಗಳನ್ನು ನೀಡಿದ್ದು ಎಷ್ಟು ಸರಿ ಎಂಬುದು. ಹೀಗಾಗಿ ಅವರೇ ಹೇಳಿದಂತೆ ಗಿರೀಶ್ ಮಟ್ಟಣ್ಣನವರ್ ಮತ್ತು ಜಯಂತ್ ಅವರ ಮಾತನ್ನು ಕೇಳಿ ನಾನು ಈ ರೀತಿಯ ಹೇಳಿಕೆ ನೀಡಿದ್ದೇನೆ ಎಂದು ಒಪ್ಪಿದ್ದಾರೆ. ಆದರೆ ವಯಸ್ಸಾದ ಈ ಸಮಯದಲ್ಲಿ ಎಂತಹ ಕೆಲಸವನ್ನು ಸುಜಾತ ಮಾಡುತ್ತಿದ್ದೀನಿ ಎಂಬುದು ಅವರ ಅರಿವಿಗೆ ಬಂದಿಲ್ಲವೇ ಎಂಬುದು ಸಹ ಇಲ್ಲಿ ಪ್ರಶ್ನೆಯಾಗಿದೆ. ಆದರೆ ಕಾನೂನಿನ ಮುಂದೆ ಎಲ್ಲರೂ ಒಂದೇ ಅವರ ತಪ್ಪು ಕಾನೂನಾತ್ಮಕವಾಗಿ ಸಾಬೀತಾಗಬೇಕಿದೆ ಸಾಬೀತಾದರೆ ಶಿಕ್ಷೆ ಖಂಡಿತವಾಗಿಯೂ ಪ್ರಾಪ್ತಿಯಾಗಲಿದೆ.