2006-2011ರ ಅಕ್ರಮ ಗಣಿಗಾರಿಕೆ: ₹78,245 ಕೋಟಿ ನಷ್ಟ, ಎಚ್.ಕೆ.ಪಾಟೀಲ್ ಉಪಸಮಿತಿ ವರದಿ.
ರಾಜ್ಯದಲ್ಲಿ 2006 ರಿಂದ 2011ರವರೆಗೆ ನಡೆದ ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ಸುಮಾರು ₹78,245 ಕೋಟಿಯಷ್ಟು ಆರ್ಥಿಕ ನಷ್ಟವಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ್ ಅವರ ಅಧ್ಯಕ್ಷತೆಯ ಸಂಪುಟ ಉಪಸಮಿತಿಯ ವರದಿ ತಿಳಿಸಿದೆ. ಈ ವರದಿಯನ್ನು ಆಗಸ್ಟ್ 19, 2025ರಂದು ನಡೆದ ವಿಶೇಷ ಸಂಪುಟ ಸಭೆಯಲ್ಲಿ ಚರ್ಚಿಸಿ ಅಂಗೀಕರಿಸಲಾಗಿದೆ. ಆಗಸ್ಟ್ 22, 2025ರಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಕುರಿತು ಮಾಹಿತಿ ನೀಡಿದ್ದಾರೆ.
ವರದಿಯ ಪ್ರಮುಖ ಅಂಶಗಳು:-
ನಷ್ಟದ ವಿವರ: ಲೋಕಾಯುಕ್ತರ ವರದಿಯ ಪ್ರಕಾರ, ‘ಬಿ’ ವರ್ಗದ 60 ಕಬ್ಬಿಣದ ಅದಿರಿನ ಗಣಿಗಳಿಂದ 9.37 ಕೋಟಿ ಟನ್ ಮತ್ತು ‘ಸಿ’ ವರ್ಗದ 51 ಗಣಿಗಳಿಂದ 9.70 ಕೋಟಿ ಟನ್ ಕಬ್ಬಿಣದ ಅದಿರು ಅಕ್ರಮವಾಗಿ ತೆಗೆಯಲಾಗಿದೆ. ಒಟ್ಟಾರೆ 19.07 ಕೋಟಿ ಮೆಟ್ರಿಕ್ ಟನ್ ಅದಿರು ಅಕ್ರಮವಾಗಿ ರಫ್ತಾಗಿದ್ದು, ಇದರಿಂದ ₹78,245 ಕೋಟಿಯಷ್ಟು ನಷ್ಟವಾಗಿದೆ.
ಅಕ್ರಮದ ಸ್ವರೂಪ: ಈ ಅವಧಿಯಲ್ಲಿ ರಾಜಕಾರಣಿಗಳು, ವ್ಯಾಪಾರಸ್ಥರು, ಅಧಿಕಾರಿಗಳು ಮತ್ತು ಮಧ್ಯವರ್ತಿಗಳು ಒಳಗೊಂಡು ರಾಜ್ಯದ ಸಂಪತ್ತನ್ನು ಲೂಟಿ ಮಾಡಿದ್ದಾರೆ ಎಂದು ಲೋಕಾಯುಕ್ತ ತನಿಖೆ ದೃಢಪಡಿಸಿದೆ.
- ಸರ್ಕಾರದ ಕ್ರಮಗಳು:
-ಅಕ್ರಮ ಗಣಿಗಾರಿಕೆಯಿಂದ ಉಂಟಾದ ನಷ್ಟವನ್ನು ವಸೂಲಿಗಾಗಿ ‘ಕರ್ನಾಟಕ ಅಕ್ರಮ ಗಣಿಗಾರಿಕೆ ಮತ್ತು ಅಪರಾಧದ ಉತ್ಪತ್ತಿಗಳಿಂದಾದ ಸ್ವತ್ತನ್ನು ವಶಪಡಿಸಿಕೊಳ್ಳುವ ಕಾಯ್ದೆಯ ಕರಡು ಮಸೂದೆಯನ್ನು ಸಂಪುಟವು ಅನುಮೋದಿಸಿದೆ.
- ಈ ಕಾಯ್ದೆಯಡಿ ವಸೂಲಾತಿ ಆಯುಕ್ತರನ್ನು ನೇಮಿಸಲಾಗುವುದು, ಇವರು ಚರ ಮತ್ತು ಸ್ಥಿರಾಸ್ತಿಗಳ ಜಪ್ತಿ ಮತ್ತು ವಸೂಲಾತಿ ಕಾರ್ಯಾಚರಣೆಯನ್ನು ಮೇಲ್ವಿಚಾರಣೆ ಮಾಡಲಿದ್ದಾರೆ.
- ವಿಶೇಷ ತನಿಖಾ ತಂಡ (SIT) ಸಲ್ಲಿಸಿದ 29 ‘ಬಿ’ ರಿಪೋರ್ಟ್ಗಳನ್ನು ಮರುಪರಿಶೀಲಿಸಲಾಗುವುದು ಮತ್ತು 8 ಪ್ರಕರಣಗಳ ‘ಬಿ’ ರಿಪೋರ್ಟ್ಗಳನ್ನು ನ್ಯಾಯಾಲಯದಿಂದ ಹಿಂಪಡೆಯಲಾಗುವುದು.ಧರ್ಮಸ್ಥಳದ ವಿರುದ್ಧ ಸುಳ್ಳು ಹೇಳಲು ₹2 ಲಕ್ಷ ಪಡೆದ "ಅನಾಮಧೇಯ ವ್ಯಕ್ತಿ" ಬಂಧನ: ಆತನ ಫೋಟೋ ಬಿಡುಗಡೆ
- ಪ್ರಕರಣಗಳ ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು.
- ಅರಣ್ಯ ಇಲಾಖೆಗೆ ಉಂಟಾದ ನಷ್ಟವನ್ನು ಅಂದಾಜಿಸಲು ಪ್ರತ್ಯೇಕ ತನಿಖಾ ತಂಡ ರಚಿಸಲಾಗುವುದು.
- ಸಿಬಿಐನಲ್ಲಿ 10 ವರ್ಷಗಳಿಂದ ಬಾಕಿಯಿರುವ ಪ್ರಕರಣಗಳ ತನಿಖೆಯನ್ನು ತ್ವರಿತಗೊಳಿಸಲು ಅಥವಾ ರಾಜ್ಯದ SITಗೆ ವರ್ಗಾಯಿಸಲು ಕೇಂದ್ರ ಸರ್ಕಾರವನ್ನು ಕೋರಲಾಗುವುದು.Fflirtygo Men Graphic Print Cotton T-Shirt & Short Set for Men/Boys
ಎಚ್.ಕೆ. ಪಾಟೀಲ್ರ ಒತ್ತಾಯ:
ಸಚಿವ ಎಚ್.ಕೆ. ಪಾಟೀಲ್ ಅವರು 2010ರಲ್ಲಿ ಕಾಂಗ್ರೆಸ್ ವಿರೋಧ ಪಕ್ಷವಾಗಿದ್ದಾಗ ಸಿದ್ದರಾಮಯ್ಯ ನೇತೃತ್ವದಲ್ಲಿ ಬಳ್ಳಾರಿಯಿಂದ 320 ಕಿ.ಮೀ. ಪಾದಯಾತ್ರೆ ನಡೆಸಿ ಅಕ್ರಮ ಗಣಿಗಾರಿಕೆಯ ವಿರುದ್ಧ ಧ್ವನಿ ಎತ್ತಿದ್ದನ್ನು ನೆನಪಿಸಿದ್ದಾರೆ. ಜೂನ್ 2025ರಲ್ಲಿ ಸಿಎಂಗೆ ಬರೆದ ಪತ್ರದಲ್ಲಿ, ಕೇವಲ 7.6% ಪ್ರಕರಣಗಳಲ್ಲಿ ಮಾತ್ರ ತನಿಖೆ ನಡೆದಿರುವುದಕ್ಕೆ ಕಳವಳ ವ್ಯಕ್ತಪಡಿಸಿ, ತಪ್ಪಿತಸ್ಥರಿಗೆ ಶಿಕ್ಷೆ ಮತ್ತು ಕಳೆದ ಸಂಪತ್ತಿನ ವಸೂಲಿಗೆ ಗಂಭೀರ ಕ್ರಮಗಳನ್ನು ಒತ್ತಾಯಿಸಿದ್ದಾರೆ.