ಇಂದು ಭಾರತದಲ್ಲಿ ಎರಡನೇ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ನವದೆಹಲಿಯ ಭಾರತ್‌ಮಂಟಪ್ ನಲ್ಲಿ ಅತ್ಯಂತ ಯಶಸ್ವಿಯಾಗಿ ಆಚರಿಸಲಾಯಿತು. ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ನೆಹರು ತಾರಾಲಯದಲ್ಲಿ ಆರ್ಯಭಟ ಗ್ಯಾಲರಿಯನ್ನು ಉದ್ಘಾಟಿಸುವ ಮೂಲಕ ಇವತ್ತಿನ ವಿಶೇಷ ದಿನವನ್ನು ಆಚರಿಸಿದರು.
2023 ರ ಆಗಸ್ಟ್, 23 ರಂದು ಚಂದ್ರಯಾನ-3 ವಿಕ್ರಂ ಲ್ಯಾಂಡರ್, ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿದ ಐತಿಹಾಸಿಕ ದಿನವನ್ನು ಸ್ಮರಿಸುವ ಸಲುವಾಗಿ ಈ ಸಾಧನೆಯು ಭಾರತದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನವೆಂದು ಆಚರಿಸಲಾಗಿದೆ. ಪ್ರಜ್ಞಾ ರೋವರ್ ಚಂದ್ರನ ಮೇಲ್ಮೈಯಲ್ಲಿ ಪ್ರವೇಶಿಸಿದ ಆ ಸ್ಥಳಕ್ಕೆ “ಶಿವಶಕ್ತಿ ಬಿಂದು” ಎಂದು ಹೆಸರಿಸಲಾಗಿತ್ತು. ಈ ಬಗ್ಗೆ ದೇಶದಲ್ಲಿ ವೈಜ್ಞಾನಿಕ ಚಿಂತನೆ ಮತ್ತು ಸಾಂಸ್ಕೃತಿಕ ಗುರುತಿನ ಸಂಕೇತವಾಗಿ ರಾಷ್ಟ್ರೀಯ ಬಾಹ್ಯಾಕಾಶ ದಿನ ಎಂದು ಘೋಷಿಸಿತು.
ಈ ಮಹತ್ವದ ಸಂದರ್ಭದಲ್ಲಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಜಿತೇಂದ್ರ ಸಿಂಗ್ ಮತ್ತು ಇಸ್ರೋ ಅಧ್ಯಕ್ಷ ವಿ. ನಾರಾಯಣನ್ ಸೇರಿದಂತೆ ಮುಖ್ಯಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವರ್ಷದ ಥೀಮ್ “ಆರ್ಯಭಟದಿಂದ ಗಗನಯಾನಕ್ಕೆ: ಪ್ರಾಚೀನ ಜ್ಞಾನದಿಂದ ಅಪರಿಮಿತ ಸಾಧ್ಯತೆಗಳೆಡೆಗೆ” ಎಂದು ತಿಳಿಸಲಾಗಿದೆ. ಈ ಮೂಲಕ ಭಾರತವು ಖಗೋಳ ಪರಂಪರೆಯಿಂದ ಆಧುನಿಕ ಬಾಹ್ಯಾಕಾಶ ಕಾರ್ಯಾಚರಣೆಗಳವರೆಗೆ ನಡೆಸಿರುವ ದೀರ್ಘ ಪ್ರಯಾಣವನ್ನು ಸ್ಮರಿಸಿಕೊಂಡಿದೆ.
ಇದು ನಮಗೆ ಸುವರ್ಣಯುಗವೆಂದ ಶುಭಾಂಶು:
ಕಾರ್ಯಕ್ರಮದಲ್ಲಿ ಮಾತನಾಡಿದ ಗಗನಯಾನಿ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಮಾತನಾಡಿದ, ಭಾರತದ ಬಾಹ್ಯಕಾಶಯಾನದ ಬಗ್ಗೆ ಇಡೀ ವಿಶ್ವ ತಿರುಗಿನೋಡುವಂತಾಗಿದೆ. ಇದು ಭಾರತಕ್ಕೇ ಮಾತ್ರ ಸೀಮಿತವಲ್ಲ. ಜಾಗತೀಕ ಬಾಹ್ಯಕಾಶ ಸಂಸ್ಥೆಗಳು ನಮ್ಮತ್ತ ಉತ್ಸುಕರಾಗಿದ್ದಾವೆ, ನಮ್ಮ ದೇಶಕ್ಕೆ ಇದು ಸುವರ್ಣಯುಗ ಎಂದಿದ್ದಾರೆ.
ಪ್ರಧಾನಿಗಳ ಸಂದೇಶ:
ಈ ಸಂದರ್ಭದಲ್ಲಿ ಮಹತ್ವದ ಹೇಳಿಕೆ ಕೊಟ್ಟಿರುವ ಸನ್ಮಾನ್ಯ ನರೇಂದ್ರ ಮೋದಿ, ನಮ್ಮದೇ ಬಾಹ್ಯಾಕಾಶ ನಿಲ್ದಾಣ ಸ್ಥಾಪನೆಯಾಗಲಿದೆ. ಭಾರತವು ಸೆಮಿ-ಕ್ರಯೋಜೆನಿಕ್ ಎಂಜಿನ್‌ಗಳು ಮತ್ತು ಎಲೆಕ್ಟ್ರಿಕ್ ಪ್ರೊಪಲ್ಷನ್‌ನಂತಹ ಅದ್ಭುತ ತಂತ್ರಜ್ಞಾನಗಳಲ್ಲಿ ಇಂದು ವೇಗವಾಗಿ ಮುಂದುವರಿಯುತ್ತಿದೆ. ಶೀಘ್ರದಲ್ಲೇ, ನಮ್ಮೆಲ್ಲ ವಿಜ್ಞಾನಿಗಳ ಕಠಿಣ ಪರಿಶ್ರಮದಿಂದ, ಭಾರತವು ಗಗನಯಾನದೊಂದಿಗೆ ಉತ್ತುಂಗಕ್ಕೇರಲಿದೆ ಮತ್ತು ಮುಂಬರುವ ದಿನಗಳಲ್ಲಿ, ಭಾರತವು ತನ್ನದೇ ಆದ ಬಾಹ್ಯಾಕಾಶ ನಿಲ್ದಾಣವನ್ನು ನಿರ್ಮಿಸಲಿದೆ ಎಂದಿದ್ದಾರೆ.