ಧರ್ಮಸ್ಥಳ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಎಂ.ಡಿ. ಸಮೀರ್ (ಧೂತ ಸಮೀರ್) ಅವರಿಗೆ ಧರ್ಮಸ್ಥಳ ಪೊಲೀಸರು ಆಗಸ್ಟ್ 21, 2025 ರಂದು ಮಂಗಳೂರು ಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಮಂಜೂರಾದ ನಂತರ, ಆಗಸ್ಟ್ 24, 2025 ರಂದು ತನಿಖಾ ಅಧಿಕಾರಿಯ ಮುಂದೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಈ ನೋಟಿಸ್ ಅವರ ಬಳ್ಳಾರಿಯ ನಿವಾಸದಲ್ಲಿ ಅಂಟಿಸಲಾಗಿದೆ. ಸಮೀರ್ ಅವರು ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದ ವಿಡಿಯೋದಲ್ಲಿ ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 192 (ಗಲಭೆಗೆ ಉದ್ದೇಶಪೂರ್ವಕವಾಗಿ ಪ್ರಚೋದನೆ), 240 (ತಪ್ಪು ಮಾಹಿತಿ ನೀಡುವಿಕೆ), ಮತ್ತು 353 (ಸಾರ್ವಜನಿಕ ಕಿಡಿಗೇಡಿತನಕ್ಕೆ ಕಾರಣವಾಗುವ ಹೇಳಿಕೆಗಳು) ಅಡಿಯಲ್ಲಿ ಆರೋಪಗಳನ್ನು ಎದುರಿಸುತ್ತಿದ್ದಾರೆ.
ವಿಶೇಷ ತನಿಖಾ ತಂಡ (SIT) ಸಮೀರ್ ಅವರ ಪಾತ್ರವನ್ನು ತನಿಖೆ ಮಾಡುತ್ತಿದ್ದು, ಅವರ ವಿಡಿಯೋಗಳು ಸಾರ್ವಜನಿಕರಲ್ಲಿ ಅಶಾಂತಿಗೆ ಕಾರಣವಾಗಬಹುದಾದ ಪ್ರಚೋದನೆ ಮತ್ತು ತಪ್ಪು ಮಾಹಿತಿಯನ್ನು ಹರಡಿವೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ. ಜಾಮೀನು ಮಂಜೂರು ಮಾಡುವಾಗ, ಕೋರ್ಟ್ ಸಮೀರ್ ಅವರಿಗೆ ತನಿಖೆಗೆ ಸಹಕರಿಸುವಂತೆ ಮತ್ತು "ಪ್ರಚೋದನಕಾರಿ ಹೇಳಿಕೆಗಳನ್ನು" ಮಾಡದಂತೆ ಸೂಚಿಸಿದೆ.ಸುಜಾತಾ ಭಟ್ ತಪ್ಪೊಪ್ಪಿಗೆ ನಂತರ ಮತ್ತು ಬುರುಡೆ ಚಿನ್ನಯ್ಯ ಅರೆಸ್ಟ್ ನಂತರ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಮೊದಲ ಮಾತು ಹೀಗಿದೆ
ಇಗಾಗಲೆ ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಹಲವು ಕೃತ್ಯಗಳ ವಿರುದ್ದ ಹಲವರು ಆರೋಪಗಳನ್ನು ಮಾಡಿದ್ದಾರೆ ಅದರಲ್ಲಿ ಮುಖ್ಯವಾಗಿ ಸಮೀರ್, ಗಿರೀಶ್ ಮಟ್ಟಣ್ಣನವರ್, ಸುಜಾತ ಭಟ್, ತಿಮರೋಡಿ, ಬುರುಡೆ ಚಿನ್ನಯ್ಯ, ಮುಖ್ಯವಾಗಿದ್ದಾರೆ, ಇಷ್ಟು ಜನರಲ್ಲಿ ಈಗಾಗಲೇ ಮಹೇಶ್ ಶೆಟ್ಟಿ ತಿಮರೋಡಿ, ಚಿನ್ನಯ್ಯ, ಅರೆಸ್ಟ್ ಆಗಿದ್ದಾರೆ, ಈಗ ಸಮೀರ್‌ಗೂ ಅರೆಸ್ಟ್ ಆಗುವ ಭಯ ಕಾಡುತ್ತಿದೆ ಎನ್ನಲಾಗಿದೆ.