ಬೆಳಗಾವಿ: ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ಗಡಿಯಲ್ಲಿರುವ ಕುಂದಾನಗರಿ ಬೆಳಗಾವಿಯನ್ನು ಡ್ರಗ್ಸ್ ದಂಧೆಯಿಂದ ಮುಕ್ತಗೊಳಿಸುವ ದಿಶೆಯಲ್ಲಿ ಬೆಳಗಾವಿ ಸೈಬರ್ ಕ್ರೈಮ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕಾಲೇಜು ವಿದ್ಯಾರ್ಥಿಗಳನ್ನೇ ಗುರಿಯಾಗಿಸಿ ಗಾಂಜಾ, ಫೆನ್ನಿ ಮತ್ತು ಹೆರಾಯಿನ್ ಸಪ್ಲೈ ಮಾಡುತ್ತಿದ್ದ ಕಿಂಗ್ಪಿನ್ ಸೇರಿದಂತೆ ಒಂಬತ್ತು ಜನರನ್ನು ಬಂಧಿಸಲಾಗಿದೆ. ಈ ಕಾರ್ಯಾಚರಣೆಯಲ್ಲಿ 30 ಲಕ್ಷ ರೂ. ಮೌಲ್ಯದ 50 ಕೆಜಿ ಗಾಂಜಾ, ಎರಡು ಕಾರುಗಳು ಮತ್ತು 13 ಮೊಬೈಲ್ಗಳನ್ನು ಜಪ್ತಿ ಮಾಡಲಾಗಿದೆ.ಇದನ್ನೂ ಓದಿ: ಮಹೇಶ್ ಶೆಟ್ಟಿ ತಿಮರೋಡಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ ನ್ಯಾಯಾಲಯ!
ಸಿಇಎನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಬಿ.ಆರ್. ಗಡ್ಡೇಕರ್ ನೇತೃತ್ವದ ತಂಡವು ಈ ದೊಡ್ಡ ಕಾರ್ಯಾಚರಣೆಯನ್ನು ನಡೆಸಿತು. ಈ ಹಿಂದೆ ಸಣ್ಣ ಕೇಸ್ನಲ್ಲಿ ಬಂಧಿತನಾಗಿದ್ದ ಓರ್ವ ಆರೋಪಿಯ ವಿಚಾರಣೆಯಿಂದ ಪೊಲೀಸರಿಗೆ ಕಿಂಗ್ಪಿನ್ನ ಬಗ್ಗೆ ಮಾಹಿತಿ ದೊರೆತಿತು. ಈ ಮಾಹಿತಿಯ ಆಧಾರದ ಮೇಲೆ ಮುಂಬೈನಲ್ಲಿ ಕಿಂಗ್ಪಿನ್ನನ್ನು ರೆಡ್ಹ್ಯಾಂಡ್ನಲ್ಲಿ ಬಂಧಿಸಲಾಯಿತು. ಹಿಂಡಲಗಾ ಜೈಲಿನಲ್ಲಿದ್ದ ಈ ಕಿಂಗ್ಪಿನ್ನನ್ನು ಭೇಟಿಯಾಗಲು ಬಂದಿದ್ದ ಗಾಂಜಾ ಮಾಸ್ಟರ್ಮೈಂಡ್ ಇಸ್ಮಾಯಿಲ್ ಸದ್ದಾಂ ಸಯ್ಯದ್ನನ್ನು ಬೆಳಗಾವಿ ನಗರದ ಹೊರವಲಯದಲ್ಲಿ ಪೊಲೀಸರು ಬಂಧಿಸಿದರು.ಇದನ್ನೂ ಓದಿ: ಚಿನ್ನಯ್ಯ 10 ದಿನಗಳ ಕಾಲ SIT ವಶದಲ್ಲಿ...ಪ್ರಕರಣದ ಬಗ್ಗೆ ವಿಸ್ತೃತ ವಿಚಾರಣೆಗೆ ತಯಾರಿ!
ಬಂಧಿತರಾದ ಇಸ್ಮಾಯಿಲ್ ಸದ್ದಾಂ ಸಯ್ಯದ್, ತಾಜೀರ್ ಬಸ್ತವಾಡೆ, ಪ್ರಥಮೇಶ ಲಾಡ್, ತೇಜಸ್ ವಾಜರೆ, ಶಿವಕುಮಾರ್ ಆಸಬೆ, ರಮಜಾನ್ ಜಮಾದಾರ, ಮತ್ತು ತಾಜೀಬತ ಮುಲ್ಲಾ ಕರ್ನಾಟಕ, ಮಹಾರಾಷ್ಟ್ರ, ಮತ್ತು ಗೋವಾದಾದ್ಯಂತ ಡ್ರಗ್ ಸರಬರಾಜು ಜಾಲವನ್ನು ನಿರ್ವಹಿಸುತ್ತಿದ್ದರು. ಇಸ್ಮಾಯಿಲ್ ಕಳೆದ ನಾಲ್ಕು ವರ್ಷಗಳಿಂದ ಈ ದಂಧೆಯಲ್ಲಿ ಸಕ್ರಿಯನಾಗಿದ್ದು, ಮಧ್ಯಪ್ರದೇಶ ಮತ್ತು ಮುಂಬೈನಿಂದ ಬೆಳಗಾವಿಗೆ ಗಾಂಜಾ ಸಪ್ಲೈ ಮಾಡುತ್ತಿದ್ದ. ಈತನ ವಿರುದ್ಧ ಹಲವು ರಾಜ್ಯಗಳಲ್ಲಿ ಕೇಸ್ಗಳಿದ್ದರೂ, ಈತ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ. ಆದರೆ, ಸಿಇಎನ್ ಠಾಣೆಯ ಸಿಪಿಐ ಗಡ್ಡೇಕರ್ ತಂಡ ಈ ನಟೋರಿಯಸ್ ಕ್ರಿಮಿನಲ್ನನ್ನು ಯಶಸ್ವಿಯಾಗಿ ಬಂಧಿಸಿತು.ಇದನ್ನೂ ಓದಿ: ಅಮೆರಿಕದ ಸುಂಕ ನ್ಯಾಯಸಮ್ಮತವಲ್ಲ, ಅಸಮಂಜಸ...ವಿದೇಶಾಂಗ ಸಚಿವ ಜೈಶಂಕರ್ ಹೇಳಿಕೆ!
ಕಳೆದ ಎಂಟು ತಿಂಗಳಲ್ಲಿ ಬೆಳಗಾವಿ ಪೊಲೀಸರು 129 ಎನ್ಡಿಪಿಎಸ್ (NDPS) ಕೇಸ್ಗಳನ್ನು ದಾಖಲಿಸಿದ್ದು, 97 ಆರೋಪಿಗಳನ್ನು ಬಂಧಿಸಿದ್ದಾರೆ. ಇದೇ ಅವಧಿಯಲ್ಲಿ 85 ಕೇಸ್ಗಳಲ್ಲಿ 104 ಡ್ರಗ್ ಸೇವಕರನ್ನು ಬಂಧಿಸಲಾಗಿದೆ. ಒಟ್ಟಾರೆ 34 ಲಕ್ಷ ರೂ. ಮೌಲ್ಯದ 102 ಕೆಜಿ ಗಾಂಜಾ ಮತ್ತು ಇತರ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಬೆಳಗಾವಿಯನ್ನು ಡ್ರಗ್ಸ್ನಿಂದ ಮುಕ್ತಗೊಳಿಸಲು ಪೊಲೀಸರು ಕಂಕಣಬದ್ಧರಾಗಿದ್ದಾರೆ. ಈ ಭರ್ಜರಿ ಕಾರ್ಯಾಚರಣೆಗೆ ಬೆಳಗಾವಿ ಪೊಲೀಸ್ ಆಯುಕ್ತರು ಸಿಇಎನ್ ಠಾಣೆಯ ತಂಡಕ್ಕೆ ನಗದು ಬಹುಮಾನ ಘೋಷಿಸಿದ್ದಾರೆ. ಸಾರ್ವಜನಿಕರಿಂದಲೂ ಈ ಕಾರ್ಯಾಚರಣೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.ಇದನ್ನೂ ಓದಿ: ಒಬ್ಬ ಮುಸುಕುಧಾರಿ, ಒಂದು ರಾಜ್ಯ ಯಂತ್ರಾಂಗವನ್ನು ಮೂರ್ಖರನ್ನಾಗಿ ಮಾಡಿದನು: ಕೆ. ಅಣ್ಣಾಮಲೈ
ಪಬ್ ಸಂಸ್ಕೃತಿಯ ಜೊತೆಗೆ ಡ್ರಗ್ ದಂಧೆಯೂ ಜೋರಾಗುತ್ತಿದ್ದ ಸಂದರ್ಭದಲ್ಲಿ, ಈ ಕಾರ್ಯಾಚರಣೆಯು ದೊಡ್ಡ ಯಶಸ್ಸನ್ನು ಕಂಡಿದೆ. ಬೆಳಗಾವಿಯನ್ನು ಡ್ರಗ್ಸ್ ಮುಕ್ತ ನಗರವನ್ನಾಗಿ ಮಾಡಲು ಪೊಲೀಸರು ದೃಢಸಂಕಲ್ಪ ತೊಟ್ಟಿದ್ದಾರೆ.JUNEBERRY® Oversize Loose Baggy Fit Drop Shoulder Cool and Stylish Latest Pocket Print Print Design Multicolor Half Sleeve T-Shirt for Women & Girls