Skip to main content
ವಿಡಿಯೋ
1/2
crime

ಶಿವಮೊಗ್ಗ: ಪ್ರಿಯಕರನೊಂದಿಗೆ ಸೇರಿ ಪತಿ ಕೊಂದ ಶಿಕ್ಷಕಿಗೆ ಮರಣದಂಡನೆ

By Pavitra Ganapathi Baradavalli
ಶಿವಮೊಗ್ಗ: ಪ್ರಿಯಕರನೊಂದಿಗೆ ಸೇರಿ ಪತಿ ಕೊಂದ ಶಿಕ್ಷಕಿಗೆ ಮರಣದಂಡನೆ

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಪತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಶಿಕ್ಷಕಿಯಾದ ಲಕ್ಷ್ಮೀ ಸೇರಿದಂತೆ ಇಬ್ಬರಿಗೆ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮರಣದಂಡನೆ ವಿಧಿಸಿದೆ. ಮತ್ತೋರ್ವ ಆರೋಪಿಗೆ ಏಳು ವರ್ಷಗಳ ಕಾರಾಗೃಹವಾಸ ಶಿಕ್ಷೆಯನ್ನು ನೀಡಿ ತೀರ್ಪು ಪ್ರಕಟಿಸಿದೆ.

ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ಪತಿಯನ್ನು ಕೊಲೆ ಮಾಡಿದ ಆರೋಪದ ಮೇಲೆ ಶಿಕ್ಷಕಿಯಾದ ಲಕ್ಷ್ಮೀ ಸೇರಿದಂತೆ ಇಬ್ಬರಿಗೆ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮರಣದಂಡನೆ ವಿಧಿಸಿದೆ. ಮತ್ತೋರ್ವ ಆರೋಪಿಗೆ ಏಳು ವರ್ಷಗಳ ಕಾರಾಗೃಹವಾಸ ಶಿಕ್ಷೆಯನ್ನು ನೀಡಿ ತೀರ್ಪು ಪ್ರಕಟಿಸಿದೆ. 2016ರಲ್ಲಿ ಭದ್ರಾವತಿಯ ಜನ್ನಾಪುರದಲ್ಲಿ ಘಟನೆ ನಡೆದಿತ್ತು. ಶಿಕ್ಷಕಿಯಾದ ಲಕ್ಷ್ಮೀಗೆ ತನ್ನ ಬಾಲ್ಯದ ಗೆಳೆಯ ಕೃಷ್ಣಮೂರ್ತಿಯೊಂದಿಗೆ ಅಕ್ರಮ ಸಂಬಂಧವಿತ್ತು. ವಿಷಯವನ್ನು ಲಕ್ಷ್ಮೀಯ ಪತಿ ಇಮ್ತಿಯಾಜ್ ವಿರೋಧಿಸಿದ್ದರು. ಇಮ್ತಿಯಾಜ್ ತನ್ನ ಪತ್ನಿಗೆ ಸಂಬಂಧವನ್ನು ಮುರಿಯುವಂತೆ ಸಲಹೆ ನೀಡಿದ್ದರು, ಆದರೆ ಲಕ್ಷ್ಮೀ ಮತ್ತು ಕೃಷ್ಣಮೂರ್ತಿ ಇದಕ್ಕೆ ಕಿವಿಗೊಡಲಿಲ್ಲ.ಇದನ್ನೂ ಓದಿ: ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಬಳಿ ಇದೆ 5 ದೇಶದ ಕರೆನ್ಸಿ ನೋಟುಗಳು: ED ಅರೆಸ್ಟ್‌: ಎಲ್ಲಿಂದ ಬಂತು ಸ್ವಾಮಿ ಇಷ್ಟೊಂದು ಹಣ?


ಕಾರಣಕ್ಕಾಗಿ ಇಬ್ಬರೂ ಸೇರಿ ಇಮ್ತಿಯಾಜ್ನನ್ನು ಕೊಲೆ ಮಾಡಲು ಯೋಜನೆ ರೂಪಿಸಿದರು. 2016ರಲ್ಲಿ ರಂಜಾನ್ ಹಬ್ಬದ ಸಂದರ್ಭದಲ್ಲಿ ಇಮ್ತಿಯಾಜ್ ತನ್ನ ಪತ್ನಿಯನ್ನು ಕರೆತರುವ ಸಲುವಾಗಿ ಜನ್ನಾಪುರಕ್ಕೆ ಬಂದಿದ್ದರು. ಸಂದರ್ಭವನ್ನೇ ಲಕ್ಷ್ಮೀ ಮತ್ತು ಕೃಷ್ಣಮೂರ್ತಿ ಬಳಸಿಕೊಂಡು, ಇಮ್ತಿಯಾಜ್ ತಲೆಗೆ ಕಬ್ಬಿಣದ ರಾಡ್ ಮತ್ತು ಸುತ್ತಿಗೆಯಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿದ್ದರು. ಕೊಲೆಯಾದ ಮಾರನೇ ದಿನ, ಲಕ್ಷ್ಮೀ ಇಮ್ತಿಯಾಜ್ ಸಹೋದರನಿಗೆ ಫೋನ್ ಮಾಡಿ, ರಾತ್ರಿ ಜಗಳದ ಸಂದರ್ಭದಲ್ಲಿ ತಾನು ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದ ಕಾರಣ ಇಮ್ತಿಯಾಜ್ ಸತ್ತಿದ್ದಾನೆ ಎಂದು ತಿಳಿಸಿದ್ದಳು. ತದನಂತರ, ಕೃಷ್ಣಮೂರ್ತಿ ಮತ್ತು ಶಿವರಾಜ್ ಎಂಬಾತನ ಸಹಾಯದಿಂದ ಇಮ್ತಿಯಾಜ್ ಶವವನ್ನು ಭದ್ರಾ ನಾಲೆಗೆ ಎಸೆದಿದ್ದರು. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಲಕ್ಷ್ಮೀ, ಕೃಷ್ಣಮೂರ್ತಿ ಮತ್ತು ಶಿವರಾಜ್ನನ್ನು ಬಂಧಿಸಿದ್ದರು.ಇದನ್ನೂ ಓದಿ: ಮಹೇಶ್ ಶೆಟ್ಟಿ ತಿಮರೋಡಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ ನ್ಯಾಯಾಲಯ!


 ತನಿಖೆಯ ಬಳಿಕ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ವಿಚಾರಣೆಯ ಸಂದರ್ಭದಲ್ಲಿ, ಪ್ರಮುಖ ಆರೋಪಿಗಳಾದ ಲಕ್ಷ್ಮೀ ಮತ್ತು ಕೃಷ್ಣಮೂರ್ತಿಗೆ ಕೊಲೆ ಆರೋಪದಡಿ ಮರಣದಂಡನೆಯನ್ನು ವಿಧಿಸಲಾಯಿತು. ಶಿವರಾಜ್ಗೆ ಸಾಕ್ಷ್ಯ ನಾಶಪಡಿಸಲು ಯತ್ನಿಸಿದ ಆರೋಪದಡಿ ಏಳು ವರ್ಷಗಳ ಜೈಲು ಶಿಕ್ಷೆಯನ್ನು ನ್ಯಾಯಾಲಯವು ವಿಧಿಸಿತು. ತೀರ್ಪು ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಕಾನೂನಿನ ಮೂಲಕ ನ್ಯಾಯ ಸಿಗುವುದರಿಂದ ಜನತೆಯಲ್ಲಿ ನಂಬಿಕೆ ಮೂಡಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.JUNEBERRY® Oversize Loose Baggy Fit Drop Shoulder Cool and Stylish Latest Pocket Print Print Design Multicolor Half Sleeve T-Shirt for Women & Girls