Skip to main content
ವಿಡಿಯೋ
1/2
general

ED ದಾಳಿ ವೇಳೆ ಕಂತೆ ಕಂತೆ ಹಣ, ಚಿನ್ನ ಪತ್ತೆ – ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಬಂಧನ

By Pavitra Ganapathi Baradavalli
ED ದಾಳಿ ವೇಳೆ ಕಂತೆ ಕಂತೆ ಹಣ, ಚಿನ್ನ ಪತ್ತೆ – ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಬಂಧನ

ಕರ್ನಾಟಕದ ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ (ಪಪ್ಪಿ) ಅವರನ್ನು ಜಾರಿ ನಿರ್ದೇಶನಾಲಯ (ED) ಶನಿವಾರ ಸಿಕ್ಕಿಂನ ಗ್ಯಾಂಗ್‌ಟಾಕ್‌ನಲ್ಲಿ ಅಕ್ರಮ ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದೆ.

ಬೆಂಗಳೂರು: ಕರ್ನಾಟಕದ ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ (ಪಪ್ಪಿ) ಅವರನ್ನು ಜಾರಿ ನಿರ್ದೇಶನಾಲಯ (ED) ಶನಿವಾರ ಸಿಕ್ಕಿಂನ ಗ್ಯಾಂಗ್‌ಟಾಕ್‌ನಲ್ಲಿ ಅಕ್ರಮ ಆನ್‌ಲೈನ್ ಮತ್ತು ಆಫ್‌ಲೈನ್ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದೆ. ಶುಕ್ರವಾರ ಮತ್ತು ಶನಿವಾರ ರಾಜ್ಯಾದ್ಯಂತ 31 ಸ್ಥಳಗಳಲ್ಲಿ ನಡೆದ ದಾಳಿಯಲ್ಲಿ 12 ಕೋಟಿ ರೂ. ನಗದು, 1 ಕೋಟಿ ರೂ. ವಿದೇಶಿ ಕರೆನ್ಸಿ, 6 ಕೋಟಿ ರೂ. ಮೌಲ್ಯದ ಚಿನ್ನದ ಆಭರಣಗಳು, 10 ಕೆಜಿ ಬೆಳ್ಳಿ, ನಾಲ್ಕು ಐಷಾರಾಮಿ ವಾಹನಗಳು ಮತ್ತು ಹಲವು ಆಸ್ತಿ ದಾಖಲೆಗಳನ್ನು ED ವಶಪಡಿಸಿಕೊಂಡಿದೆ.ಇದನ್ನೂ ಓದಿ: ಭಾರೀ ಮಳೆಯಿಂದ ದೆಹಲಿ ಜಲಾವೃತ: ಟ್ರಾಫಿಕ್ ಜಾಮ್ ಮತ್ತು ಜನಜೀವನ ಅಸ್ತವ್ಯಸ್ತ..!


ED ತಂಡವು ಕರ್ನಾಟಕದ ಬೆಂಗಳೂರು, ಚಿತ್ರದುರ್ಗ, ಹುಬ್ಬಳ್ಳಿ, ಗೋವಾ, ಮುಂಬೈ, ರಾಜಸ್ಥಾನದ ಜೋಧ್‌ಪುರ ಮತ್ತು ಸಿಕ್ಕಿಂನ ಗ್ಯಾಂಗ್‌ಟಾಕ್‌ನಲ್ಲಿ ಶಾಸಕ ವೀರೇಂದ್ರ ಮತ್ತು ಅವರ ಸಹಚರರಿಗೆ ಸಂಬಂಧಿಸಿದ 31 ಸ್ಥಳಗಳಲ್ಲಿ ದಾಳಿ ನಡೆಸಿತು. ಗೋವಾದಲ್ಲಿ ವೀರೇಂದ್ರಗೆ ಸಂಬಂಧಿಸಿದ ಐದು ಕ್ಯಾಸಿನೋಗಳಾದ ಪಪ್ಪೀಸ್ ಕ್ಯಾಸಿನೋ ಗೋಲ್ಡ್, ಓಷನ್ ರಿವರ್ಸ್ ಕ್ಯಾಸಿನೋ, ಪಪ್ಪೀಸ್ ಕ್ಯಾಸಿನೋ ಪ್ರೈಡ್, ಓಷನ್ 7 ಕ್ಯಾಸಿನೋ ಮತ್ತು ಬಿಗ್ ಡ್ಯಾಡಿ ಕ್ಯಾಸಿನೋದ ಮೇಲೆ ದಾಳಿ ನಡೆಸಲಾಯಿತು. ಈ ದಾಳಿಗಳಲ್ಲಿ ವಿದೇಶಿ ಕ್ಯಾಸಿನೋಗಳಾದ MGM, ಬೆಲ್ಲಾಜಿಯೋ, ಮೆಟ್ರೋಪಾಲಿಟನ್, ಮರೀನಾ ಮತ್ತು ಕ್ಯಾಸಿನೋ ಜ್ಯುವೆಲ್‌ನ ಸದಸ್ಯತ್ವ ಕಾರ್ಡ್‌ಗಳು, ತಾಜ್, ಹಯಾಟ್ ಮತ್ತು ಲೀಲಾ ಹೊಟೇಲ್‌ಗಳ ಐಷಾರಾಮಿ ಸದಸ್ಯತ್ವ ಕಾರ್ಡ್‌ಗಳು ಮತ್ತು ಹಲವು ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್‌ಗಳು ಪತ್ತೆಯಾಗಿವೆ.
ಇದನ್ನೂ ಓದಿ: ಬೆಳಗಾವಿಗೆ ಗಾಂಜಾ, ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಕಿಂಗ್‌ಪಿನ್‌ಗಳ ಬಂಧನ: ಪೊಲೀಸರಿಗೆ ಮೆಚ್ಚುಗೆ

 50 ವರ್ಷದ ಶಾಸಕ ಕೆ.ಸಿ. ವೀರೇಂದ್ರ ಅವರು ಕಿಂಗ್567, ರಾಜಾ567, ಪಪ್ಪೀಸ್003 ಮತ್ತು ರತ್ನ ಗೇಮಿಂಗ್‌ನಂತಹ ಆನ್‌ಲೈನ್ ಬೆಟ್ಟಿಂಗ್ ಸೈಟ್‌ಗಳನ್ನು ನಡೆಸುತ್ತಿದ್ದರು ಎಂದು ED ಆರೋಪಿಸಿದೆ. ಇವರ ಸಹೋದರ ಕೆ.ಸಿ. ತಿಪ್ಪೇಸ್ವಾಮಿ ದುಬೈನಿಂದ ಡೈಮಂಡ್ ಸಾಫ್ಟ್‌ಟೆಕ್, TRS ಟೆಕ್ನಾಲಜೀಸ್ ಮತ್ತು ಪ್ರೈಮ್9 ಟೆಕ್ನಾಲಜೀಸ್ ಎಂಬ ಮೂರು ವ್ಯವಹಾರಿಕ ಸಂಸ್ಥೆಗಳ ಮೂಲಕ ಕಾಲ್ ಸೆಂಟರ್ ಮತ್ತು ಗೇಮಿಂಗ್ ವ್ಯವಹಾರವನ್ನು ನಿರ್ವಹಿಸುತ್ತಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ವೀರೇಂದ್ರ ಅವರ ಇನ್ನೊಬ್ಬ ಸಹೋದರ ಕೆ.ಸಿ. ನಾಗರಾಜ್ ಮತ್ತು ಅವರ ಪುತ್ರ ಪೃಥ್ವಿ ಎನ್. ರಾಜ್‌ರ ಸ್ಥಳಗಳಿಂದ ಆಸ್ತಿ ಸಂಬಂಧಿತ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.ಇದನ್ನೂ ಓದಿ: ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳ ಪಟ್ಟಿ ರಿಲೀಸ್ – ಸಿಎಂ ಸಿದ್ದರಾಮಯ್ಯಗೆ ಮೂರನೇ ಸ್ಥಾನ


ವೀರೇಂದ್ರ ಅವರನ್ನು ಗ್ಯಾಂಗ್‌ಟಾಕ್‌ನಲ್ಲಿ ಬಂಧಿಸಲಾಗಿದ್ದು, ಶನಿವಾರ ಗ್ಯಾಂಗ್‌ಟಾಕ್‌ನ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಯಿತು. ಬೆಂಗಳೂರಿನ ಇಡಿ ಕಚೇರಿಯಲ್ಲಿ ಮುಂದಿನ ವಿಚಾರಣೆಗಾಗಿ ಟ್ರಾನ್ಸಿಟ್ ರಿಮಾಂಡ್ ಪಡೆಯಲಾಗಿದೆ. ಈ ಪ್ರಕರಣವನ್ನು ದಿ ಪ್ರಿವೆನ್ಷನ್ ಆಫ್ ಮನಿ ಲಾಂಡರಿಂಗ್ ಆಕ್ಟ್ (PMLA), 2002ರ ಅಡಿಯಲ್ಲಿ ತನಿಖೆ ಮಾಡಲಾಗುತ್ತಿದೆ. ಇದರ ಜೊತೆಗೆ, 17 ಬ್ಯಾಂಕ್ ಖಾತೆಗಳು ಮತ್ತು ಎರಡು ಬ್ಯಾಂಕ್ ಲಾಕರ್‌ಗಳನ್ನು ಫ್ರೀಜ್ ಮಾಡಲಾಗಿದೆ. 2016ರಲ್ಲಿ ವೀರೇಂದ್ರ ಅವರು ಜೆಡಿಎಸ್ ಪಕ್ಷದಲ್ಲಿದ್ದಾಗ, ಚಿತ್ರದುರ್ಗದ ಚಳ್ಳಕೆರೆಯಲ್ಲಿರುವ ಅವರ ಮನೆಯ ಸ್ನಾನಗೃಹದ ಗುಪ್ತ ಕೋಣೆಯಲ್ಲಿ 5.7 ಕೋಟಿ ರೂ. ನಗದು, 28 ಕೆಜಿ ಚಿನ್ನದ ಬಿಸ್ಕತ್ತುಗಳು ಮತ್ತು 4 ಕೆಜಿ ಚಿನ್ನದ ಆಭರಣಗಳನ್ನು ಆಅನಧಿಕೃತವಾಗಿ ವಿನಿಮಯ ಮಾಡಿಕೊಂಡಿದ್ದಾರೆ ಎಂದು CBI ಆರೋಪಿಸಿತ್ತು. ಈ ಬಂಧನವು ಕರ್ನಾಟಕದ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷವು ಇದಕ್ಕೆ ಇನ್ನೂ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿಲ್ಲ.
JUNEBERRY® Oversize Loose Baggy Fit Drop Shoulder Cool and Stylish Latest Pocket Print Print Design Multicolor Half Sleeve T-Shirt for Women & Girls