ಬೆಂಗಳೂರು: ನನಗೆ ಮಗಳಿದ್ದಳು, ತಮ್ಮ ಮಗಳ ಅಸ್ತಿತ್ವದ ಬಗ್ಗೆ ಗಂಟೆಗೊಂದು ಹೇಳಿಕೆ ನೀಡಿ ಗೊಂದಲ ಮೂಡಿಸುತ್ತಿದ್ದ ಸುಜಾತಾ ಭಟ್ ಅವರ ಮನೆ ಮುಂದೆ ಶುಕ್ರವಾರ ತಡ ರಾತ್ರಿ ಇತರರಿಂದ ಭಾರೀ ಹೈಡ್ರಾಮಾ ನಡೆದು ಕೊನೆಗೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ತಮಗೆ ಮಗಳೇ ಇಲ್ಲ ಎಂದು ನಮ್ಮ ಚಾನೆಲ್ ಇನ್ಸೈಟ್ ರಶ್ ಮಾಡಿದ ಎಕ್ಸ್ಕ್ಲೂಸಿವ್ ಇಂಟರ್ವ್ಯೂ ನಲ್ಲಿ ಹೇಳಿದ್ದರು. ಬೇರೆ ಚಾನಲ್ ವೇದಿಕೆಗಳಲ್ಲಿ ಕೆಲ ಹೊತ್ತಿನಲ್ಲೇ ವರಸೆ ಬದಲಿಸಿ ತಮಗೆ ಮಗಳಿದ್ದದ್ದು ನಿಜ ಎಂದಿದ್ದರು. ಈ ಹಿನ್ನೆಲೆಯಲ್ಲಿ ಅನನ್ಯ ಭಟ್ ನಾಪತ್ತೆ ಸಂಬಂಧ ಸುಜಾತಾ ಅವರಿಂದ ಸ್ಪಷ್ಟೀಕರಣ ಪಡೆಯಲು ಪದ್ಮನಾಭನಗರ ಸಮೀಪದಲ್ಲಿರುವ ಅವರ ಮನೆಗೆ ಸಾಕಷ್ಟು ಮಾಧ್ಯಮಗಳು ತೆರಳಿದ್ದವು.YUISI Sun Hat for Men Women, Breathable Summer Hat for Travel, Hiking, Gardening, Sun Hats for Men & Round Sun Cap for Hiking, Hats for Women Indoor Outdoor Activities
ಆ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ವ್ಯಕ್ತಿಯೊಬ್ಬರ ಯೂಟ್ಯೂಬ್ ಚಾನೆಲ್ ಹಾಗೂ ಖಾಸಗಿ ಸುದ್ದಿವಾಹಿನಿ ವ್ಯವಸ್ಥಾಪಕ ನಿರ್ದೇಶಕರ ನಡುವೆ ತಿಕ್ಕಾಟ ನಡೆದಿತ್ತು. ಇನ್ನೊಂದೆಡೆ ತಾನು ಮಾಧ್ಯಮಗಳ ಒತ್ತಡ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸುಜಾತಾ ಬರೆದಿದ್ದಾರೆ ಎನ್ನಲಾದ ಪತ್ರ ಬಹಿರಂಗವಾಗಿ ಮತ್ತಷ್ಟು ಗೊಂದಲ ಮೂಡಿಸಿತ್ತು.ಇದನ್ನು ಓದಿ-ಡಿಆರ್‌ಡಿಒ ಇಂಟಿಗ್ರೇಟೆಡ್ ಏರ್ ಡಿಫೆನ್ಸ್ ವೆಪನ್ ಸಿಸ್ಟಮ್‌ನ ಮೊದಲ ಪರೀಕ್ಷಾ ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ
ಈ ನಾಟಕೀಯ ಬೆಳವಣಿಗೆ ಬಳಿಕ ಮುಂಜಾಗ್ರತಾ ಕ್ರಮವಾಗಿ ಪೊಲೀಸರು, ಸುಜಾತ ಅವರ ಮನೆಗೆ ಬಿಗಿ ಭದ್ರತೆ ಕಲ್ಪಿಸಿದ್ದು. ಅವರ ಒಪ್ಪಿಗೆ ಇಲ್ಲದ ಸಾರ್ವಜನಿಕರು ಹಾಗೂ ಮಾಧ್ಯಮಗಳ ಭೇಟಿಗೆ ಪೊಲೀಸರು ನಿರ್ಬಂಧಿಸಿದರು.