Skip to main content
ವಿಡಿಯೋ
politics

ಬುರುಡೆ ರಹಸ್ಯದ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ವಸಂತ್‌ ಗಿಳಿಯಾರ್: ನಿಜಕ್ಕೂ ಕಾಂಗ್ರೆಸ್ ಸಂಸದ ಶಶಿಕಾಂತ್ ಸೆಂಥಿಲ್‌ಗೂ- ಬುರುಡೆ ಚಿನ್ನಯ್ಯನಿಗೂ ಇರುವ ಸಂಬಂಧ ಏನು?

By Gireesh Vasishta
ಬುರುಡೆ ರಹಸ್ಯದ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ವಸಂತ್‌ ಗಿಳಿಯಾರ್: ನಿಜಕ್ಕೂ ಕಾಂಗ್ರೆಸ್ ಸಂಸದ ಶಶಿಕಾಂತ್ ಸೆಂಥಿಲ್‌ಗೂ- ಬುರುಡೆ ಚಿನ್ನಯ್ಯನಿಗೂ ಇರುವ ಸಂಬಂಧ ಏನು?

- 1983 ರ ಹೊತ್ತಿಗೆ ಕ್ರೈಸ್ತರ ಮಿಷನರಿಗಳ ಪ್ರಭಾವದಿಂದ ತುಳಸಿ ಕಟ್ಟೆ ಒಡೆದು ಶಿಲುಬೆ ನಿಲ್ಲಿಸಿದ್ರು, ಬಳಿಕ ಯಾರು ಅನ್ಯ ಧರ್ಮಕ್ಕೆ ಮತಾಂತರ ಆಗದಂತೆ ಮತ್ತೆ ಎಲ್ಲ ಮನೆಗಳ ಮನೆಮುಂದೆ ತುಳಸಿ ನೆಟ್ಟಿಸಿದ್ದು ಧರ್ಮಸ್ಥಳದ ಖಾವಂದರು.

ಬೆಂಗಳೂರು- ಬೆಂಗಳೂರಿನಲ್ಲಿ ನಡೆದ ಸಮಾವೇಶವೊಂದರಲ್ಲಿ ಮಾತನಾಡಿದ ವಸಂತ್ ಗಿಳಿಯಾರ್‌ ಧರ್ಮಸ್ಥಳಕ್ಕೆ ಸಂಬಂಧಿಸಿದ ಹಲವಾರು ವಿಚಾರಗಳನ್ನು ತೆರೆದಿಟ್ಟಿದ್ದಾರೆ. ಇದರಲ್ಲಿ ಮುಖ್ಯವಾಗಿ ಕಾಂಗ್ರೆಸ್ನ ಸಂಸದ ಶಶಿಕಾಂತ್ ಸೆಂಥಿಲ್ ಸಹ ಜತೆಗೂಡಿದ್ದಾರೆ ಎಂಬ ಆರೋಪವನ್ನು ಮಾಡಿದ್ದಾರೆ. ಆ ಕುರಿತಂತೆ ಹಲವು ಮಾಹಿತಿಗಳು ಕೆಳಕಂಡಂತಿವೆ.PALAY® Straw Hat Sun Hats for Women,Wide Brim Cap Beach Hat for Women Stylish UV Protection Cap,Summer Packable Travel Sun Visor Hat - UPF 50+

- ಮದುವೆಯಾಗುವಾಗ ಬಂಗಾರದ ತಾಳಿಯನ್ನ ಕೊಳ್ಳಲು ಸಾಧ್ಯವಾಗದೇ ಇದ್ದವರಿಗೆ, ಸಾಮೂಹಿಕ ವಿವಾಹ ಮಾಡಿಸುವಂತಹ ಕೆಲಸ ಮಾಡಿದವರು ಖಾವಂದರು.

- 1983 ರ ಹೊತ್ತಿಗೆ ಕ್ರೈಸ್ತರ ಮಿಷನರಿಗಳ ಪ್ರಭಾವದಿಂದ ತುಳಸಿ ಕಟ್ಟೆ ಒಡೆದು ಶಿಲುಬೆ ನಿಲ್ಲಿಸಿದ್ರು, ಬಳಿಕ ಯಾರು ಅನ್ಯ ಧರ್ಮಕ್ಕೆ ಮತಾಂತರ ಆಗದಂತೆ ಮತ್ತೆ ಎಲ್ಲ ಮನೆಗಳ ಮನೆಮುಂದೆ ತುಳಸಿ ನೆಟ್ಟಿಸಿದ್ದು ಧರ್ಮಸ್ಥಳದ ಖಾವಂದರು.

- ಸಾಕಷ್ಟು ಜನ ಆರ್ಥಿಕ ಪರಿಸ್ಥಿತಿಯನ್ನ ಸುಧಾರಿಸುವಂತೆ ಮಾಡಿದ್ದು, ಧರ್ಮಸ್ಥಳದ ಸಂಘ.

- ನಾವು ಕೂಡ ಸೌಜನ್ಯ ಪರವಾಗಿಯೇ ಹೋರಾಟ ಮಾಡಿದವರು. ಈಗಲೂ ಸೌಜನ್ಯ ಪರವಾಗಿಯೇ ಹೋರಾಟ ಮಾಡುತ್ತೇವೆ.

- ಸೌಜನ್ಯ ಹೆಸರಲ್ಲಿ ಧರ್ಮಸ್ಥಳನ್ನ ಗುರಿಯಾಗಿಸಿಕೊಂಡ ಪರಮಪಾಪಿಗಳು ಇವರು.Also read: ಸುಜಾತಾ ಭಟ್‌ ಮನೆ ಹೊರಗೆ ರಾತ್ರಿಯಿಡೀ ಹೈಡ್ರಾಮಾ! ಕಾರಣ ಹೀಗಿದೆ

- ಯಾರೋ ಹೆಣ್ಣು ಮಗಳು ತಮ್ಮ ಆಸ್ತಿಗಾಗಿ ಬಂದ್ರೆ, ಆ ಹೆಣ್ಣು ಮಗಳನ್ನ ದೆಹಲಿಗೆ ಕರೆದುಕೊಂಡು ಹೋಗಿದ್ರು‌. ಅಲ್ಲಿ ಕಾಂಗ್ರೆಸ್ ಸಂಸದ ಶಶಿಕಾಂತ್ ಸೆಂಥಿಲ್‌ ಜೊತೆ ಸಭೆ ಮಾಡಿ ಕಥೆ ರೆಡಿ ಮಾಡಿದ್ರು.

-ನಂತರ ಒಬ್ಬ ಬುರುಡೆ ಹಿಡಿದುಕೊಂಡು ಬಂದ.

- ಅವರ ಕೈಯಲ್ಲಿ ಬುರುಡೆ ಕೊಟ್ಟು ಕಳಿಸಿದ್ದೆ ಶಿವ. ಇವರ ನಾಟಕವನ್ನ ಬಿಚ್ಚಿಡಲು ಅವನನ್ನ ಕಳಿಸಿದ್ದು ಧೈವ.

- ಇನ್ಮುಂದೆ ರಾಜ್ಯದ ಹಳ್ಳಿ ಹಳ್ಳಿಯಲ್ಲೂ ಈ ಸಮಿತಿಯ ಮೂಲಕ ಜಾಗೃತಿ ಮೂಡಿಸುತ್ತೇವೆ. ಈ ಷಡ್ಯಂತ್ರದ ಹಿಂದೆ ಭಯೋತ್ಪಾದ ಸಂಘಟನೆ ಭಾಗಿಯಾಗಿದೆ. ವಿದೇಶಿ ದುಡ್ಡು ಬಂದಿದೆ.

- ಈ ಪ್ರಕರಣ NIA ತನಿಖೆಗೆ ಒಳಪಡಬೇಕು, ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಕಾನೂನು ಕೊಡುವ ಶಿಕ್ಷೆ ಕಡಿಮೆ ಇರಬಹುದು. ಆದ್ರೆ ಅಣ್ಣಪ್ಪ ಕೊಡುವ ಶಿಕ್ಷೆ  ಭಯಂಕರವಾಗಿರುತ್ತೆ.

ಈ ರೀತಿಯಾಗಿ ವಸಂತ್‌ ಗಿಳಿಯಾರ್‌ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.