Skip to main content
ವಿಡಿಯೋ
1/2
politics

ಹಿಂದೂ ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಹಿಂದುಗಳ ಮತಾಂತರ ಮಾಡುವ ಉದ್ಧೇಶವನ್ನ ಕಾಂಗ್ರೆಸ್‌ ಹೊಂದಿದೆ: ಹೈಕೋರ್ಟ್‌ ವಕೀಲ ಆರ್‌ ಎಲ್‌ ಎನ್‌ ಮೂರ್ತಿ

By Pavitra Ganapathi Baradavalli
ಹಿಂದೂ ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಹಿಂದುಗಳ ಮತಾಂತರ ಮಾಡುವ ಉದ್ಧೇಶವನ್ನ ಕಾಂಗ್ರೆಸ್‌ ಹೊಂದಿದೆ: ಹೈಕೋರ್ಟ್‌ ವಕೀಲ  ಆರ್‌ ಎಲ್‌ ಎನ್‌ ಮೂರ್ತಿ

ಧರ್ಮಸ್ಥಳ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ, ಅದಕ್ಕೆ ಸಂಬಂಧಿಸಿದಂತೆ ಹಲವಾರು ಪಕ್ಷಗಳು ಧರ್ಮಸ್ಥಳ ಚಲೋವನ್ನು ಹಮ್ಮಿಕೊಂಡು ಧರ್ಮಸ್ಥಳಕ್ಕೆ ಯಾತ್ರೆ ನಡೆಸುತ್ತಿವೆ.ಈಗ ನಿಖಿಲ್‌ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್‌ ಪಕ್ಷ ಧರ್ಮಸ್ಥಳ ಯಾತ್ರೆಯನ್ನು  ಹಮ್ಮಿಕೊಂಡು ಬೇಲೂರಿಗೆ ಆಗಮಿಸಿದ ಜೆಡಿಎಸ್‌ ಪಕ್ಷದವರಾದ  ಹೈಕೋರ್ಟ್‌ ಅಡ್ವಕೇಟ್‌ ಮತ್ತು ಗಾಂಧೀ ನಗರ ಜೆಡಿಎಸ್‌ ಪಕ್ಷದ ಅಧ್ಯಕ್ಷರಾದ ಆರ್‌ ಎಲ್‌ ಎನ್‌ ಮೂರ್ತಿಯವರು ನಮ್ಮ ಇನ್ಸೈಟ್‌ರಶ್‌ ಮಾಧ್ಯಮದೊಂದಿಗೆ ಮಾತನಾಡಿ ಕರ್ನಾಟಕ ಭಾರತ ಇತಿಹಾಸದಲ್ಲಿ ಧರ್ಮಸ್ಥಳ ತುಂಬಾ ಪವಿತ್ರವಾದ ಕ್ಷೇತ್ರ ಅಂತಹ ಕ್ಷೇತ್ರದ ಮೇಲೆ ಯಾವುದೇ ಸಾಕ್ಷೀ ಆಧಾರಗಳು ಇಲ್ಲದೆಯೇ ಹಲವಾರು ಆರೋಪಗಳು ಕೇಳಿ ಬರುತ್ತಿವೆ.

ಧರ್ಮಸ್ಥಳ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ, ಅದಕ್ಕೆ ಸಂಬಂಧಿಸಿದಂತೆ ಬಿಜೆಪಿ ಪಕ್ಷಗಳು ಧರ್ಮಸ್ಥಳ ಚಲೋವನ್ನು ಹಮ್ಮಿಕೊಂಡು ಧರ್ಮಸ್ಥಳಕ್ಕೆ ಯಾತ್ರೆ ನಡೆಸುತ್ತಿವೆ.ಈಗ ನಿಖಿಲ್‌ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಜೆಡಿಎಸ್‌ ಪಕ್ಷ ಧರ್ಮಸ್ಥಳ ಯಾತ್ರೆಯನ್ನು  ಹಮ್ಮಿಕೊಂಡು ಧರ್ಮಸ್ಥಳಕ್ಕೆ ಆಗಮಿಸಿದ ಜೆಡಿಎಸ್‌ ಪಕ್ಷದವರಾದ  ಹೈಕೋರ್ಟ್‌ ವಕೀಲ ಮತ್ತು ಗಾಂಧೀ ನಗರ ಜೆಡಿಎಸ್‌ ಪಕ್ಷದ ಅಧ್ಯಕ್ಷರಾದ ಆರ್‌ ಎಲ್‌ ಎನ್‌ ಮೂರ್ತಿಯವರು ನಮ್ಮ ಇನ್ಸೈಟ್‌ರಶ್‌ ಮಾಧ್ಯಮದೊಂದಿಗೆ ಮಾತನಾಡಿ ಕರ್ನಾಟಕ ಭಾರತ ಇತಿಹಾಸದಲ್ಲಿ ಧರ್ಮಸ್ಥಳ ತುಂಬಾ ಪವಿತ್ರವಾದ ಕ್ಷೇತ್ರ ಅಂತಹ ಕ್ಷೇತ್ರದ ಮೇಲೆ ಯಾವುದೇ ಸಾಕ್ಷೀ ಆಧಾರಗಳು ಇಲ್ಲದೆಯೇ ಹಲವಾರು ಆರೋಪಗಳು ಕೇಳಿ ಬರುತ್ತಿವೆ. ಅದಕ್ಕೆ ಸರ್ಕಾರ ತನಿಖೆಗೆ ಆದೇಶಿಸಿದರೂ ಸಹ ಅದರಲ್ಲಿ ಯಾವುದೇ ಸಾಕ್ಷಿಗಳು ಲಭ್ಯವಾಗಿಲ್ಲ.ಇದನ್ನೂ ಓದಿ: ಮೋದಿ–ಪುಟಿನ್–ಕ್ಸಿ ಭೇಟಿಗೆ ಅಮೆರಿಕ ಟೀಕೆ...'ನಮೋ' ನಡೆ ಬಗ್ಗೆಯೇ ನಾಲಗೆ ಹರಿಬಿಟ್ಟ ಟ್ರಂಪ್ ಸಲಹೆಗಾರ ನವರೋ!


ಈ ರೀತಿಯಾದ ಸುಳ್ಳು ಆರೋಪ ಮಾಡಿ ಹಿಂದೂ ಸಂಸ್ಥೆಗಳನ್ನು ಹಿಂದೂ ಧಾರ್ಮಿಕ ನಂಬಿಕೆಯನ್ನು ಹಾಗೂ ಹಿಂದುತ್ವದ ಕುರಿತಾದ ನಂಬಿಕೆಯನ್ನು ಒಡೆಯುವ ಕೆಲಸಗಳು ಆಗ್ತಾ ಇದೆ. ಈ ಕೆಲಸವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅದರ ಪರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು. ಕಾಂಗ್ರೆಸ್‌ ಸರ್ಕಾರದ ಈ ಕೆಲಸವನ್ನು ವಿರೋಧಿಸಿ ಜೆಡಿಎಸ್‌ ಪಕ್ಷದ ಎಲ್ಲಾ ಕಾರ್ಯಕರ್ತರು ಸೇರಿಕೊಂಡು ಈ ಒಂದು ಧರ್ಮಸ್ಥಳ ಚಲೋ ಅಥವಾ ಧರ್ಮಸ್ಥಳ ಯಾತ್ರೆಯನ್ನು ಹಮ್ಮಿಕೊಂಡಿರುವುದಕ್ಕೆ ನಮ್ಮ ಪಕ್ಷದ ನಾಯಕರಾದ ನಿಖಿಲ್‌ ಕುಮಾರ ಸ್ವಾಮಿಯವರಿಗೆ, ಕುಮಾರಸ್ವಾಮಿಯವರಿಗೆ ಹಾಗೂ ದೇವೇಗೌಡರಿಗೆ ಧನ್ಯವಾದ ಅರ್ಪಿಸುತ್ತೇವೆ. ಹಾಗೂ ಇಂದಿನ ದಿನ ಪಕ್ಷದ ಕಾರ್ಯಕರ್ತರು ಮತ್ತು ಸದಸ್ಯರೆಲ್ಲರೂ ಒಟ್ಟಾಗಿ ಸೇರಿಕೊಂಡು ಈ ಧರ್ಮಸ್ಥಳ ಚಲೋವನ್ನು ಹಮ್ಮಿಕೊಳ್ಳುವ ಮೂಲಕ ಧರ್ಮಸ್ಥಳ ಕ್ಷೇತ್ರದ ಧಾರ್ಮಿಕ ನಂಬಿಕೆಗಳು ಇನ್ನಷ್ಟು ಇಮ್ಮಡಿಗೊಳ್ಳುವಂತಾಗಬೇಕು ಎಂದು ಹೇಳಿದರು.
ಇದನ್ನೂ ಓದಿ: ರಷ್ಯಾದ ತೈಲ ಆರೋಪ ತಿರಸ್ಕರಿಸಿದ ಸಚಿವ ಹರ್ದೀಪ್ ಸಿಂಗ್ ಪುರಿ..!

ಇನ್ನು ನಮ್ಮ ಪ್ರತಿನಿಧಿಯ ಸುಜಾತ್‌ ಭಟ್‌  ಅನನ್ಯಾ ಭಟ್‌ ಎನ್ನುವ ಮಗಳೇ ಇಲ್ಲ ಎಲ್ಲಾ ಸುಳ್ಳು ಎಂದು ಎಸ್‌ಐಟಿ ಮುಂದೆ ಒಪ್ಪಿಕೊಂಡರು ಮತ್ತು ಮಾಸ್ಕ್‌ ಮ್ಯಾನ್‌ ಷಡ್ಯಂತ್ರದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು ಕಾನೂನು ಚೌಕಟ್ಟಿನಲ್ಲಿ ಮಾತನಾಡುವುದಾದರೆ ಕೆಲವು ಧಾರ್ಮಿಕ ಹಿನ್ನೆಲೆಯಿಂದ ಕಾನೂನುಗಳು ಬಂದಿರುತ್ತವೆ ಹಾಗೇ ಕೆಲವು ಪ್ರಾಕೃತಿಕ ನ್ಯಾಯದಿಂದ ಈ ರೀತಿಯಾದ ಕಾನೂನುಗಳು ಬಂದಿವೆ. ಯಾರೇ ಏನೇ ಆರೋಪ ಮಾಡಿದರೂ ಸಹಿತ ಸಂವಿಧಾನದಲ್ಲಿ ಆರೋಪ ಮಾಡಲು ಎಷ್ಟೆಲ್ಲಾ ಅವಕಾಶಗಳಿವೆ. ಹಾಗಾಗಿ ಈ ರೀತಿಯಾದ ಸಂವಿಧಾನದ ಹಕ್ಕನ್ನು ದುರುಪಯೋಗ ಪಡಿಸಿಕೊಂಡು ಆರೋಪ ಮಾಡಿದಾಗ ಒಂದು ಕ್ಷೇತ್ರದ ಮೇಲಿನ ಧಾರ್ಮಿಕ ನಂಬಿಕೆಯ ಮೇಲೆ ಪರಿಣಾಮ ಬೀರುತ್ತದೆ. ಈಗ ಸದ್ಯ ಧರ್ಮಸ್ಥಳ ಕ್ಷೇತ್ರವನ್ನೇ ತೆಗೆದುಕೊಳ್ಳಿ ಆ ಕ್ಷೇತ್ರದ ಪೂರ್ತಿ ರುವಾರಿ ಹೊತ್ತಿರುವ ಧರ್ಮದರ್ಶಿ ವಿರೇಂದ್ರ ಹೆಗಡೆಯವರು ಮತ್ತು ಅವರ ಮನೆಯವರ ಕುರಿತು ಧಕ್ಕೆ ಉಂಟಾಗುತ್ತದೆ.ಇದನ್ನೂ ಓದಿ: ಇಂದು ಬಿಎಸ್‌ವೈಗೆ ಮಹತ್ವದ ದಿನ...ಪೋಕ್ಸೋ ಕೇಸ್ ಸಂಬಂಧ ಅರ್ಜಿ ವಿಚಾರಣೆ!

ಅದಲ್ಲದೇ ಹೀಗೆ ಸೌಜನ್ಯ ಕೇಸ್‌ ಅಥವಾ ಅನನ್ಯಾ ಭಟ್‌ ಕೇಸ್‌ ಕುರಿತು ಸುಜಾತ್‌ ಭಟ್‌ ಅವರು ಮಹೇಶ್‌ ತಿಮರೋಡಿ, ಹಾಗೇ ಮಾಸ್ಕ್‌ ಮ್ಯಾನ್‌ ಚಿನ್ನಯ್ಯ ಹೀಗೆ ಅನೇಕ ಜನ ಬಂದು ಸುಳ್ಳು ಆರೋಪಗಳನ್ನು ಮಾಡಿದರೂ ಆದರೆ ಅವರಿಗೆ ಏನು ಸಿಗ್ತು ಏನು ಸಿಕ್ಕಿಲ್ಲ. ಆದರೆ ಜನರು ಹೊಂದಿರುವ
 ಧಾರ್ಮಿಕ ನಂಬಿಕೆಯನ್ನು ಹಾಳುಕೆಡವುವಲ್ಲಿ ಯಶಸ್ವಿಯಾಯಿತು. ಇದರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು ಕೈಗೊಳ್ಳದಿದ್ದಲ್ಲಿ ನಾವೇ ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೇರಿ ಕಾನೂನಾತ್ಮಕ ಕ್ರಮ ಆಗುವವರೆಗೆ ಜೆಡಿಎಸ್‌ ಕಾನೂನು ಘಟಕ  ಸುಮ್ಮನೆ ಇರುವುದಿಲ್ಲ ಎಂದು ತಿಳಿಸಿದರು.ಇದನ್ನೂ ಓದಿ: ಧರ್ಮಸ್ಥಳದಲ್ಲಿ ಜೆಡಿಎಸ್ ಸಮಾವೇಶ ಹಿನ್ನೆಲೆ: ಧರ್ಮಸ್ಥಳ ಅಪಪ್ರಚಾರದ ವಿರುದ್ಧ ಶಿವಮೊಗ್ಗ ನಗರ ಜೆಡಿಎಸ್ ಅಧ್ಯಕ್ಷ ದೀಪಕ್ ಸಿಂಗ್ ಆಕ್ರೋಶ


ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂಬ ಆರೋಪ ಇದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಈ ಕಾಂಗ್ರೆಸ್‌ ಸರ್ಕಾರ ಅಲ್ಪಸಂಖ್ಯಾತರ ಓಲೈಕೆ ಮಾಡುವುದಕ್ಕೋಸ್ಕರ ಬಹುಸಂಖ್ಯಾತರಾದ ಹಿಂದುಗಳನ್ನು ಕಡೆಗಣಿಸುತ್ತಿದ್ದಾರೆ ಮತ್ತು ಅವರನ್ನು ಮತಾಂತರಗೊಳಿಸಲು ಎಲ್ಲಾ ನಿಟ್ಟಿನಲ್ಲಿ ಧರ್ಮಸ್ಥಳದ ಕುರಿತು ಮಾತನಾಡುವುದಾಗಲೀ ಅಥವಾ ಚಾಮುಂಡೇಶ್ವರಿ ಬಗ್ಗೆ ಮಾತನಾಡುತ್ತಾರೆ. ಹಿಂದೂ ಜನಸಂಖ್ಯೆಯನ್ನು ಮತಾಂತರ ಮಾಡಿಕೊಂಡು ಅವರ ಮೂಲಕ ಓಟ್‌ ಬ್ಯಾಂಕ್‌ ಅನ್ನು ಪಡೆದುಕೊಳ್ಳಲು ಭ್ರಷ್ಟ ಕಾಂಗ್ರೆಸ್‌ ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಈಗಾಗಲೇ ಗ್ಯಾರಂಟಿ ಯೋಜನೆಗಳೆಂಬ ಆಮಿಷ ಒಡ್ಡಿ ಅಧಿಕಾರಕ್ಕೆ ಬಂದಿದೆ. ಈಗ ಧಾರ್ಮಿಕ ನಂಬಿಕೆಗಳ ಮೇಲೆ ಧಕ್ಕೆ ತಂದು ಓಟ್‌ ಬ್ಯಾಂಕ್‌ ಅನ್ನು ವಶಪಡಿಸಿಕೊಳ್ಳುವಲ್ಲಿ ಸಜ್ಜಾಗಿದೆ. ಇಂದು ಜೆಡಿಎಸ್ ಪಕ್ಷ ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಹಾನಿ ಮಾಡುತ್ತಾರೆ ಮತ್ತು ಅವಕ್ಕೆ ಧಕ್ಕೆ ತರುತ್ತಾರೆ ಅವರುಗಳ ಕುರಿತು ಸರಿಯಾದ ಕ್ರಮ ತೆಗೆದುಕೊಳ್ಳುವ ತನಕ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.TQH Women's Casual Printed Round Neck, Oversized Longline Drop Shoulder Boho Style T-Shirt