Skip to main content
ವಿಡಿಯೋ
1/2
general

ಯೂಟ್ಯೂಬರ್ ಸಮೀರ್‌ ನಮ್ಮ ಮುಸ್ಲಿಂ ಸಮುದಾಯದ ಪ್ರತಿನಿಧಿ ಅಲ್ಲ...ಜಮಾತ್ ಎ ಇಸ್ಲಾಮಿ ಹಿಂದ್ ಸ್ಪಷ್ಟನೆ..!

By Sushmitha R
ಯೂಟ್ಯೂಬರ್ ಸಮೀರ್‌ ನಮ್ಮ ಮುಸ್ಲಿಂ ಸಮುದಾಯದ ಪ್ರತಿನಿಧಿ ಅಲ್ಲ...ಜಮಾತ್ ಎ ಇಸ್ಲಾಮಿ ಹಿಂದ್ ಸ್ಪಷ್ಟನೆ..!

ಜಮಾತ್ ಎ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮಹಮದ್ ಕುನ್ಞಿ, ಸಮೀರ್ ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸುವವರೇ ಅಲ್ಲ ಎಂದು ಸ್ಪಷ್ಟಪಡಿಸಿದರು. ಎಐ ವಿಡಿಯೋ ವಿವಾದದ ನಡುವೆ ಬೆಳ್ತಂಗಡಿಯಲ್ಲಿ ಸಮೀರ್ ವಿಚಾರಣೆ ಮುಂದುವರಿದಿದೆ.

ಯೂಟ್ಯೂಬರ್ ಸಮೀರ್ ಮುಸ್ಲಿಂ ಸಮುದಾಯದ ಪ್ರತಿನಿಧಿಯಲ್ಲ ಎಂದು ಜಮಾತ್ ಎ ಇಸ್ಲಾಮಿ ಹಿಂದ್‌ನ ರಾಜ್ಯ ಕಾರ್ಯದರ್ಶಿ ಮಹಮದ್ ಕುನ್ಞಿ ಸ್ಪಷ್ಟಪಡಿಸಿದ್ದಾರೆ. ಸಮೀರ್‌ ಕುರಿತಾದ ಎಐ ವಿಡಿಯೋಗಳ ಚರ್ಚೆಗಳ ನಡುವೆ, ಮಹಮದ್ ಕುನ್ಞಿ 'ಪಬ್ಲಿಕ್ ಟಿವಿ' ಜೊತೆ ಮಾತನಾಡಿದರು. ಮುಸ್ಲಿಂ ಸಮುದಾಯಕ್ಕೆ ಸಮೀರ್ ಯಾರೆಂಬುದೇ ತಿಳಿದಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.ಧರ್ಮಸ್ಥಳ ಪ್ರಕರಣ: ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ಸಂಕಷ್ಟ, ಪೊಲೀಸರಿಂದ ಮನೆಗೆ ನೋಟಿಸ್..!

ಸಮೀರ್ ಮುಸ್ಲಿಂ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ ಎಂದು ಮಹಮದ್ ಕುನ್ಞಿ ದೃಢಪಡಿಸಿದ್ದಾರೆ. ಕರ್ನಾಟಕದಲ್ಲಿ ಸುಮಾರು ಒಂದೂವರೆ ಕೋಟಿ ಮುಸ್ಲಿಮರಿದ್ದಾರೆ. ಇವರಲ್ಲಿ ಎಷ್ಟು ಜನರಿಗೆ ಸಮೀರ್ ಪರಿಚಯವಿದ್ದಾರೆ ಎಂಬ ಪ್ರಶ್ನೆಯನ್ನು ಅವರು ಮುಂದಿಟ್ಟರು. "ನಾವು ದೊಡ್ಡ ಸಂಘಟನೆಗಳಲ್ಲಿ ಇರುವವರು, ನಮಗಂತೂ ಸಮೀರ್ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ" ಎಂದು ಅವರು ಹೇಳಿದರು.

Carlington Endurance Series Analog-Digital Wrist Watches for Men - CT_9145

ಸಮೀರ್ ಒಬ್ಬ ಯೂಟ್ಯೂಬರ್ ಅಷ್ಟೇ ಎಂಬುದು ಈಗ ತಿಳಿದಿದೆ. ಒಂದು ವೇಳೆ ಆತ ವಿಡಿಯೋಗಳಲ್ಲಿ ತಪ್ಪು ಮಾಹಿತಿ ನೀಡಿದ್ದರೆ, ಆತನಿಗೆ ಶಿಕ್ಷೆಯಾಗಲಿದೆ ಎಂದು ಮಹಮದ್ ಕುನ್ಞಿ ತಿಳಿಸಿದ್ದಾರೆ. ಯಾವುದೇ ಧಾರ್ಮಿಕ ಕ್ಷೇತ್ರಗಳ ಮೇಲೆ ಸುಳ್ಳು ಪ್ರಚಾರ ಮಾಡಬಾರದು ಎಂಬುದು ನಮ್ಮ ಮೂಲಭೂತ ನಂಬಿಕೆ ಎಂದು ಅವರು ಒತ್ತಿ ಹೇಳಿದರು.

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾಮಾಜಿಕ ಜಾಲತಾಣಗಳಲ್ಲಿ ಎಐ ವೀಡಿಯೊ ಹಂಚಿಕೊಂಡ ಆರೋಪದ ಮೇಲೆ ಸಮೀರ್, ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.SIT ಅಂಗಳಕ್ಕೆ ಇಂದೂ ವಿಚಾರಣೆಗೆ ಹೋಗಬೇಕು ಸಮೀರ್...ನಿನ್ನೆ ಸತತ 5 ಗಂಟೆ ಡ್ರಿಲ್! ಇಂದು ಹೇಗಿರುತ್ತೆ ವಿಚಾರಣೆ?