ಖ್ಯಾತ ಕಿರುತೆರೆ ಕಲಾವಿದ ದಂಪತಿಯಾದ ನಟ ಸತ್ಯ ಮತ್ತು ನಟಿ ನಿರ್ಮಲಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ‘ಲಕ್ಷ್ಮೀ ನಿವಾಸ’ ಧಾರಾವಾಹಿ ನಿರ್ಮಾಣಕ್ಕಾಗಿ ಹಣ ಪಡೆದು ವಂಚಿಸಿದ್ದಾರೆ ಎಂಬ ಆರೋಪ ದಂಪತಿಗಳ ಮೇಲಿದೆ. ಈ ಕುರಿತು ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸೃಜನ್ ಲೋಕೇಶ್ ಒಡೆತನದ ಲೋಕೇಶ್ ಪ್ರೊಡಕ್ಷನ್ಸ್‌ನ ಜಿಪಿಎ ಹೋಲ್ಡರ್ ಅಗ್ನಿ ಯು ಸಾಗರ್ ದೂರು ನೀಡಿದ್ದಾರೆ. ಸತ್ಯ ಹಾಗೂ ನಿರ್ಮಲಾ ದಂಪತಿ ಧಾರಾವಾಹಿ ನಿರ್ಮಾಣಕ್ಕಾಗಿ ಒಂದು ಕೋಟಿ ರೂಪಾಯಿ ಹಣ ಪಡೆದಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
Titan Edge Quartz Analog White Dial Black Leather Strap Watch For Men - NT1595WL01
2023ರ ನವೆಂಬರ್‌ನಲ್ಲಿ ಈ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. 2024ರ ಏಪ್ರಿಲ್ 1ರಿಂದ ಪ್ರತಿ ತಿಂಗಳು ಐದು ಲಕ್ಷ ರೂಪಾಯಿ ಪಾವತಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ, ಇದುವರೆಗೂ ಯಾವುದೇ ಹಣವನ್ನು ಪಾವತಿಸದ ಕಾರಣ, ಎಂಒಯು ಷರತ್ತುಗಳನ್ನು ಉಲ್ಲಂಘಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸಾಯಿ ನಿರ್ಮಲಾ ಪ್ರೊಡಕ್ಷನ್ಸ್ ಹೆಸರಿನಲ್ಲಿ ನಿರ್ಮಲಾ ಮತ್ತು ಅವರ ಪತಿ ಸತ್ಯ ವಿರುದ್ಧ ದೂರು ನೀಡಲಾಗಿದೆ. ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಈ ದಂಪತಿಗೆ ಈ ಪ್ರಕರಣದಿಂದ ಸಂಕಷ್ಟ ಎದುರಾಗಿದೆ.