ಬೆಂಗಳೂರು: ರಾಜಣ್ಣ ಬಿಜೆಪಿ ಸೇರ್ತಾರೆ ಅನ್ನೋ ವಿಚಾರಕ್ಕೆ ಮಾಧ್ಯಮದವರೊಂದಿಗೆ ಮಾತನಾಡಿದ ಕೆ.ಎನ್ ರಾಜಣ್ಣ ಅವರ ಪುತ್ರ ರಾಜೇಂದ್ರ, ಬಾಲಕೃಷ್ಣ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಬಾಲಕೃಷ್ಣ ವಿರುದ್ಧ ರಾಜೇಂದ್ರ ಸಿಡಿಮಿಡಿಗೊಂಡು ಕೆಲ ಹೇಳಿಕೆಯನ್ನು ನೀಡಿದ್ದಾರೆ.
-ಕೆಲವರಿಗೆ ಮಾತನಾಡುವ ತೆವಲು ಹಾಗಾಗಿ ಈ ರೀತಿ ಮಾತಾಡ್ತಾರೆ ಎಂದಿದ್ದಾರೆ.
- ಬಾಲಕೃಷ್ಣ ಜೆಡಿಎಸ್ ಪಕ್ಷದಲ್ಲಿದ್ದರು ಜೆಡಿಎಸ್ ಪಕ್ಷವನ್ನು ಮುಗಿಸಿದ್ರು ಎಂದು ಬಾಲಕೃಷ್ಣ ವಿರುದ್ಧ ನೇರವಾಗಿ ತಿರುಗಟು ನೀಡಿದ್ದಾರೆ.
-ನಮ್ಮ ತಂದೆ rss ಗೀತೆಯನ್ನು ಹಾಡಿಲ್ಲ.
-ನಮ್ಮ ತಂದೆ rss ಚಡ್ಡಿ ಹಾಕೊಂಡು ಸಭೆಗೆ ಹೋಗಿಲ್ಲ.
ಇವತ್ತು ಶಾಸಕ ಹಾಗೂ ಡಿಕೆ ಶಿವಕುಮಾರ್ ಅವರ ಆಪ್ತ ಬಾಲಕೃಷ್ಣ ಅವರು ರಾಜಣ್ಣ ಅವರ ವಿರುದ್ಧ ಕೆಲವೊಂದು ಹೇಳಿಕೆಗಳನ್ನು ನೀಡಿದ್ದರು. ಕೆ ಎನ್. ರಾಜಣ್ಣ ಅವರ ಬೆಂಬಲಿಗರು ಮತ್ತು ಅವರ ಸಮುದಾಯದ ಸ್ವಾಮೀಜಿಗಳು ದೆಹಲಿಗೆ ತೆರಳಿ ಐದು ದಿನಗಳ ಕಾಲ ಪ್ರತಿಭಟನೆ ಮಾಡುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಶಾಸಕ ಬಾಲಕೃಷ್ಣ, ಕೆಳಕಂಡ ಹೇಳಿಕೆಯನ್ನು ನೀಡಿದ್ದರು.ಇದನ್ನು ಓದಿ- ಇನ್ಫೋಸಿಸ್ ಲಿಮಿಟೆಡ್ ಮತ್ತು ಬಿ. ರಾಜು ನಡುವಣ ಪ್ರಕರಣ: ಕನ್ನಡ ದಾಖಲೆಗಳ ಇಂಗ್ಲಿಷ್ ಅನುವಾದ ವಿಳಂಬವಾಯಿತು ಎಂದು ಇನ್ಫೋಸಿಸ್ ನೆಪ: ಏನಿದು ಪ್ರಕರಣ?
-ಕೆ ಎನ್. ರಾಜಣ್ಣ ಅವರಿಗೆ ಅವರ ಮಾತೇ ಮಳುವಾಗಿದೆ. ಎಷ್ಟೇ ಹೇಳಿದರೂ ತಿದ್ದಿಕೊಳ್ಳುವ ಪ್ರಯತ್ನ ಮಾಡಲಿಲ್ಲ.
- ಅವರು ಈಗಾಗಲೇ ಬಿಜೆಪಿಗೆ ಅರ್ಜಿಯನ್ನು ಹಾಕಿದ್ದಾರೆ ಹೀಗಾಗಿ ನಮ್ಮ ಪಕ್ಷ ಅಧಿಕಾರದಲ್ಲಿ ಇರುವ ಮಾತ್ರಕ್ಕೆ ಅವರು ಕಾಂಗ್ರೆಸ್ ನಲ್ಲಿ ಇದ್ದಾರೆ ಇಲ್ಲವಾದರೆ ಈ ಹೊತ್ತಿದಾಗಲೇ ಬಿಜೆಪಿಗೆ ಸೇರ್ಪಡೆ ಆಗಿರುತ್ತಿದ್ದರು ಎಂದು ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ.
-ಸುಮ್ಮನೆ ನಮ್ಮ ನಾಯಕರ ಮೇಲೆ ಗೂಬೆ ಕೂರಿಸುತ್ತಾ ಇದ್ದಾರೆ ಎಂದರು.TIMEX Classics Analog Watch for Men with Round Dial & Water Resistant Man's Wrist Watches
ಎಲ್ಲಾ ಹೇಳಿಕೆಗಳಿಂದ ಕೆರಳಿದ ಶಾಸಕ ಕೆಎನ್. ರಾಜಣ್ಣ ಅವರ ಮಗ ರಾಜೇಂದ್ರ ಕೆಲವರಿಗೆ ಮಾತನಾಡುವ ತೆವಲು ಎಂದು ನೇರವಾಗಿ ತಮ್ಮ ಆಕ್ರೋಶವನ್ನು ಶಾಸಕ ಸುಧಾಕರ್ ಮೇಲೆ ತೋರಿಸಿದ್ದಾರೆ.