ಕರ್ನಾಟಕದ ಹಾಸನ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ವರುಣನ ಆರ್ಭಟ ಜೋರಾಗಿದ್ದು, ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಯ ಪಶ್ಚಿಮ ಘಟ್ಟದ ಭಾಗವಾದ ಸಕಲೇಶಪುರ ತಾಲ್ಲೂಕಿನ ಎಡಕುಮಾರಿ ಸಮೀಪದ ಹತ್ತಿರ ಗುಡ್ಡ ಕುಸಿತ ಸಂಭವಿಸಿದೆ.ಭಾರೀ ಮಳೆಯಿಂದ ದೆಹಲಿ ಜಲಾವೃತ: ಟ್ರಾಫಿಕ್ ಜಾಮ್ ಮತ್ತು ಜನಜೀವನ ಅಸ್ತವ್ಯಸ್ತ..!
ಧಾರಾಕಾರ ಮಳೆಯಿಂದ ಗುಡ್ಡದ ಮಣ್ಣು ಕುಸಿದು, ರೈಲ್ವೇ ಹಳಿಗಳ ಮೇಲೆ ಬಿದ್ದಿದ್ದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ರಕ್ಷಣಾ ಸಿಬ್ಬಂದಿಗಳು ಜೆಸಿಬಿ ಬಳಸಿ ಮಣ್ಣನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದ್ದಾರೆ, ಮತ್ತು ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.
ಇದೇ ರೀತಿ, ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ರಸ್ತೆ ಸಂಚಾರವೂ ಕೂಡಾ ತೀವ್ರವಾಗಿ ಪರಿಣಾಮ ಬೀರಿದೆ. ಸಕಲೇಶಪುರ ಮತ್ತು ಇತರ ತಾಲ್ಲೂಕುಗಳಲ್ಲಿ ಮರಗಳು ಉರುಳಿ, ರಸ್ತೆಗಳ ಮೇಲೆ ಬಿದ್ದಿರುವುದರಿಂದ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
Lymio Men Cotton Regular Fit Shirt || Stylish (Resort-Slub)
ಅರಸೀಕೆರೆ, ಹಾಸನ ನಗರ, ಮತ್ತು ಆಲೂರು ತಾಲ್ಲೂಕುಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನಿಂತು, ಮನೆಗಳಿಗೆ ಹಾನಿಯಾಗಿದೆ. ತಹಶೀಲ್ದಾರರು ಮತ್ತು ಸ್ಥಳೀಯ ಅಧಿಕಾರಿಗಳು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ನಿರಾಶ್ರಿತರಿಗೆ ಪರಿಹಾರದ ಭರವಸೆ ನೀಡಿದ್ದಾರೆ.ಭಾರೀ ಮಳೆಯಿಂದ ದೆಹಲಿ ಜಲಾವೃತ: ಟ್ರಾಫಿಕ್ ಜಾಮ್ ಮತ್ತು ಜನಜೀವನ ಅಸ್ತವ್ಯಸ್ತ..!
ಹೇಮಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಗೊರೂರಿನ ಜಲಾಶಯದಿಂದ ಅಧಿಕ ನೀರು ಬಿಡುಗಡೆಯಾಗಿರುವುದರಿಂದ ಕೆ.ಆರ್.ಪೇಟೆಯ ಬಂಡೀಹೊಳೆ ಗ್ರಾಮದಲ್ಲಿ ಪ್ರವಾಹದಂತಹ ಸ್ಥಿತಿ ನಿರ್ಮಾಣವಾಗಿದೆ. ಮಳೆಯಿಂದ ಹಾಸನ ಜಿಲ್ಲೆಯ ಜನರು ಪ್ರತಿದಿನ ಸಂಚಾರ ಮಾಡಲು ಪರಾದಡುತ್ತಿದ್ದಾರೆ. ಕರ್ನಾಟಕದ ಕರಾವಳಿ, ಹಾಗೂ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ, ಆರೆಂಜ್ ಅಲರ್ಟ್ ಘೋಷಣೆ..!
ರಸ್ತೆಯ ಮೇಲೆ ನೀರು ಹೊಳೆಯ ರೀತಿಯಲ್ಲಿ ಹರಿಯುತ್ತಿದೆ. ಜನರು ಮನೆಯಿಂದ ಹೊರಗೆ ಬರಲು ಭಯಪಡುತ್ತಿದ್ದಾರೆ. ಯಾವ ಸಮಯದಲ್ಲಿ ಯಾವ ಕಡೆಯು ಗುಡ್ಡ- ರಸ್ತೆಯು ಕುಸಿಯುತ್ತದೆ ಎಂದು ಜನರು ಭಯ ಭೀತರಾಗಿದ್ದಾರೆ.
ಭಾರೀ ಮಳೆಯಿಂದಾಗಿ ಹಾಸನ ಜಿಲ್ಲೆಯಲ್ಲಿ ಸಂಚಾರ, ಕೃಷಿ, ಮತ್ತು ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರಿದೆ. ಜಿಲ್ಲಾಡಳಿತವು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುತ್ತಿದ್ದು, ಜನರಿಗೆ ಸುರಕ್ಷಿತ ಸ್ಥಳಗಳಲ್ಲಿ ಇರಲು ಸೂಚನೆ ನೀಡಿದೆ.ಗುರ್ಜಾಪುರ ಬ್ರಿಡ್ಜ್ ಜಲಾವೃತ: 30 ಹಳ್ಳಿಗಳ ಸಂಪರ್ಕ ಕಡಿತ, ರಾಯಚೂರು-ಯಾದಗಿರಿಯಲ್ಲಿ ಪ್ರಯಾಣಿಕರು ಪರದಾಟ..!