Skip to main content
ವಿಡಿಯೋ
1/2
crime

ಭೀಮಾತೀರದಲ್ಲಿ ಮತ್ತೊಂದು ಹತ್ಯೆ; ಈ ಬಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷನ ಸರತಿ: ಸರಣಿ ಹತ್ಯೆಗೆ ಕೊನೆಯೇ ಇಲ್ಲ!

By Gireesh Vasishta
ಭೀಮಾತೀರದಲ್ಲಿ ಮತ್ತೊಂದು ಹತ್ಯೆ; ಈ ಬಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷನ ಸರತಿ: ಸರಣಿ ಹತ್ಯೆಗೆ ಕೊನೆಯೇ ಇಲ್ಲ!

ಈ ಬಾರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಭೀಮನಗೌಡ ಬಿರಾದರ್ ಕಟಿಂಗ್ ಶಾಪಿಗೆ ಕಟಿಂಗ್ ಮಾಡಿಸಿಕೊಳ್ಳಲು ಬಂದ ಸಮಯದಲ್ಲಿ ಹಂತಕರು ಸಹ ಅಲ್ಲಿಗೆ ಬಂದಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿದ್ದ ಭೀಮನಗೌಡ ಬಿರಾದರ್ ಮೇಲೆ ಗನ್ ಇಂದ ಶೂಟ್ ಮಾಡಿದ್ದಾರೆ. ನಂತರ ಹೊರಗಡೆ ಚಾಕು ಹಿಡಿದು ಹಂತಕರು ಸಾರ್ವಜನಿಕರನ್ನು ಹೆದರಿಸುತ್ತಿದ್ದಿದ್ದು ಸಹ ವಿಡಿಯೋದಲ್ಲಿ ಸೆರೆಯಾಗಿದೆ.

ಭೀಮಾತೀರದಲ್ಲಿ ಮತ್ತೊಂದು ಹತ್ಯೆ; ಈ ಬಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷನ ಸರತಿ: ಸರಣಿ ಹತ್ಯೆಗೆ ಕೊನೆಯೇ ಇಲ್ಲ!

ಚಡಚಣ(Vijayapura): ಭೀಮಾ ತೀರವೆಂದರೆ ರಕ್ತ ಚರಿತ್ರೆಗೆ ಹೆಸರುವಾಸಿಯಾಗಿದೆ. ಅಲ್ಲಿ ಕುಟುಂಬಗಳ ನಡುವೆ ಶುರುವಾದ ಜಗಳ ಹಲವಾರು, ನೂರಾರು ವ್ಯಕ್ತಿಗಳ ನೆತ್ತರು ಹರಿಯುವುದಕ್ಕೆ ಕಾರಣವಾಗಿದೆ. ಹೀಗಾಗಿ ಅಲ್ಲಿ ಒಂದು ಕೊಲೆಯ ರಕ್ತದ ಕಲೆ ಮಾಸುವ ಮುನ್ನವೇ ಮತ್ತೊಂದು ಹೆಣ ಉರುಳುವುದು ಮಾಮೂಲಿಯಾಗಿದೆ. ಈ ಹಿಂದೆ ಚೆಂದಪ್ಪ ಹರಿಜನ, ಬಾಗಪ್ಪ ಹರಿಜನ ಹೀಗೆ ಹಲವು ಹಂತಕರ ಹತ್ಯೆ ನಡೆದಿದೆ.

ಈ ಬಾರಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಭೀಮನಗೌಡ ಬಿರಾದರ್ ಕಟಿಂಗ್ ಶಾಪಿಗೆ ಕಟಿಂಗ್ ಮಾಡಿಸಿಕೊಳ್ಳಲು ಬಂದ ಸಮಯದಲ್ಲಿ ಹಂತಕರು ಸಹ ಅಲ್ಲಿಗೆ ಬಂದಿದ್ದಾರೆ. ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿದ್ದ ಭೀಮನಗೌಡ ಬಿರಾದರ್ ಮೇಲೆ ಗನ್ ಇಂದ ಶೂಟ್ ಮಾಡಿದ್ದಾರೆ. ನಂತರ ಹೊರಗಡೆ ಚಾಕು ಹಿಡಿದು ಹಂತಕರು ಸಾರ್ವಜನಿಕರನ್ನು ಹೆದರಿಸುತ್ತಿದ್ದಿದ್ದು ಸಹ ವಿಡಿಯೋದಲ್ಲಿ ಸೆರೆಯಾಗಿದೆ.TIMEX Classics Analog Watch for Men with Round Dial & Water Resistant Man's Wrist Watches

ಇಲ್ಲಿ ಗಮನಿಸುವ ಅಂಶವೆಂದರೆ ಅಲ್ಲಿ ಒಂದು ಕೊಲೆಯಾದರೆ ಅದಕ್ಕೆ ಪ್ರತ್ಯುತ್ತರವಾಗಿ ಮತ್ತೊಂದು ಕೊಲೆಯಾಗುತ್ತಿದೆ. ಹೀಗಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷನ ಕೊಲೆಯ ನಂತರ ಇನ್ಯಾವ ವ್ಯಕ್ತಿಯ ಹತ್ಯೆಯಾಗಲಿದೆ ಎಂಬುದೇ ಪೊಲೀಸರಿಗೆ ದೊಡ್ಡ ತಲೆ ನೋವಾಗಿದೆ. ಭೀಮಾತೀರದಲ್ಲಿ ಹತ್ಯೆಯಾದ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಭೀಮನಗೌಡ ಬಿರಾದರ್ ಕೆಲವೊಂದು ಕೇಸ್ನಲ್ಲಿ ಆರೋಪಿಯು ಸಹ ಆಗಿದ್ದ. ಆದರೆ ಕಳೆದ ಚುನಾವಣೆಯಲ್ಲಿ ಆತ ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿ ಆಯ್ಕೆಯಾಗಿದ್ದ ಹೀಗಾಗಿ ಹಳೆ ವೈಶಮ್ಯದ ಹಿನ್ನೆಲೆಯಲ್ಲಿ ಭೀಮನಗೌಡ ಬಿರಾದರ್ ಕೊಲೆಯಾಗಿದ್ದಾರೆ ಎಂದು ತಿಳಿದುಬಂದಿದೆ.ಹೈಕಮಾಂಡ್ ಭೇಟಿಗೆ 2 ಬಾರಿ ಶಾಸಕ ರಾಜಣ್ಣ ಸರ್ಕಸ್: ಆದರೆ ನಿರಾಕರಿಸಿದ ಹೈಕಮಾಂಡ್

ಪ್ರತ್ಯಕ್ಷದರ್ಶಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಹತ್ಯೆಯಾದ ಭೀಮನಗೌಡನ ಮೇಲೆ ಮೂರು ಸುತ್ತು ಗುಂಡು ಹಾರಿಸಿ ಕೊಲೆ ಮಾಡಲಾಗಿದೆ ಎಂದಿದ್ದಾರೆ. ಹಾಗೂ ಹಳೆ ವೈಶಮ್ಯದ ಮೇಲೆ ಕೊಲೆ ನಡೆದಿದೆ ಎಂದು ಆತ ಹೇಳಿದ್ದಾನೆ. ಪೊಲೀಸರ ತನಿಖೆಯ ನಂತರ ಇನ್ನುಳಿದ ಮಾಹಿತಿ ಹೊರಬರಲಿದೆ. ಘಟನೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ನಡೆದಿದೆ.