Skip to main content
ವಿಡಿಯೋ
business

ಸೆಪ್ಟೆಂಬರ್ 22ರಿಂದ ಜಿಎಸ್‌ಟಿ ಬಂಪರ್ ಸುಧಾರಣೆ...ಕೇವಲ 5% ಮತ್ತು 18% ಸ್ಲ್ಯಾಬ್‌ಗಳು ಮಾತ್ರ!

By Shravanthi R
ಸೆಪ್ಟೆಂಬರ್ 22ರಿಂದ ಜಿಎಸ್‌ಟಿ ಬಂಪರ್ ಸುಧಾರಣೆ...ಕೇವಲ 5% ಮತ್ತು 18% ಸ್ಲ್ಯಾಬ್‌ಗಳು ಮಾತ್ರ!

ಜಿಎಸ್‌ಟಿ ಕೌನ್ಸಿಲ್ 56ನೇ ಸಭೆಯಲ್ಲಿ ಐತಿಹಾಸಿಕ ನಿರ್ಧಾರ – 12% ಮತ್ತು 28% ತೆರಿಗೆ ಸ್ಲ್ಯಾಬ್‌ಗಳನ್ನು ರದ್ದುಪಡಿಸಿ, ಕೇವಲ 5% ಮತ್ತು 18% ರ ಹೊಸ ದರ ರಚನೆ ಸೆಪ್ಟೆಂಬರ್ 22ರಿಂದ ಜಾರಿಗ ಬರಲಿದೆ.

ಬುಧವಾರ 10 ಗಂಟೆಗಳಿಗೂ ಹೆಚ್ಚು ಕಾಲ ನಡೆದ ತನ್ನ 56ನೇ ಸಭೆಯಲ್ಲಿ ಜಿಎಸ್ಟಿ ಕೌನ್ಸಿಲ್ ಎಂಟು ವರ್ಷಗಳಿಂದ ಜಾರಿಯಲ್ಲಿರುವ ಪರೋಕ್ಷ ತೆರಿಗೆ ವ್ಯವಸ್ಥೆಗೆ ದೊಡ್ಡ ಮಟ್ಟದ ಬದಲಾವಣೆ ತರಲು ಮಹತ್ವದ ನಿರ್ಧಾರ ಕೈಗೊಂಡಿದೆ. ಸಭೆಯಲ್ಲಿ ಸಾಮಾನ್ಯ ಜನರ ಮೇಲಿನ ತೆರಿಗೆ ಹೊರೆಯನ್ನು ಕಡಿಮೆ ಮಾಡುವುದು, ವ್ಯಾಪಾರಿಗಳಿಗೆ ಸುಗಮವಾದ ಪ್ರಕ್ರಿಯೆ ಒದಗಿಸುವುದು ಮತ್ತು ದೇಶದ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸುವ ಗುರಿ ಹೊಂದಲಾಗಿದೆ.

ಹೊಸ ಸುಧಾರಣೆಯ ಪ್ರಕಾರ, ಈಗಿರುವ 12% ಮತ್ತು 28% ತೆರಿಗೆ ಸ್ಲ್ಯಾಬ್‌ಗಳನ್ನು ರದ್ದುಪಡಿಸಿ, ಕೇವಲ 5% ಮತ್ತು 18% ರ ಎರಡು ಮುಖ್ಯ ಸ್ಲ್ಯಾಬ್‌ಗಳನ್ನು ಮಾತ್ರ ಉಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ವ್ಯಾಪಾರಿಗಳಿಗೆ ತೆರಿಗೆ ಪ್ರಕ್ರಿಯೆ ಸುಲಭವಾಗುವುದಲ್ಲದೆ, ಉತ್ಪನ್ನಗಳ ಬೆಲೆಯಲ್ಲಿ ಇಳಿಕೆ ಕಾಣುವ ಸಾಧ್ಯತೆ ಹೆಚ್ಚಿದೆ. ಸೂಪರ್ ಐಷಾರಾಮಿ ಮತ್ತು ಪಾಪ ವಸ್ತುಗಳ ಮೇಲೆ ಮಾತ್ರ 40% ಡಿಮೆರಿಟ್ ತೆರಿಗೆ ಮುಂದುವರಿಯಲಿದೆ ಎಂದು ಕೌನ್ಸಿಲ್ ತಿಳಿಸಿದೆ. ಇದನ್ನೂ ಓದಿ: ದಾವಣಗೆರೆಯಲ್ಲಿ ಬಿಜೆಪಿ ಶಾಸಕ ಬಿ.ಪಿ. ಹರೀಶ್ ವಿರುದ್ಧ ಎಫ್‌ಐಆರ್: ಎಸ್‌ಪಿಯನ್ನು ಪೊಮೆರೇನಿಯನ್ ನಾಯಿಗೆ ಹೋಲಿಸಿದ ಆರೋಪ..!

ಸಭೆಯಲ್ಲಿ ತಂಬಾಕು ಮತ್ತು ತಂಬಾಕು ಉತ್ಪನ್ನಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವಸ್ತುಗಳಿಗೆ ಹೊಸ ದರ ರಚನೆ ಸೆಪ್ಟೆಂಬರ್ 22ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ನವರಾತ್ರಿಯ ಮೊದಲ ದಿನದಿಂದ ಜಾರಿಗೆ ಬರುವ ಈ ಬದಲಾವಣೆಗಳನ್ನು 31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರತಿನಿಧಿಗಳು ಬೆಂಬಲಿಸಿದ್ದಾರೆ.

TIMEX Classics Analog Watch for Men with Round Dial & Water Resistant Man's Wrist Watches

ಹೊಸ ತೆರಿಗೆ ರಚನೆ ಜಾರಿಗೆ ಬಂದರೆ, ಉತ್ಪಾದನಾ ವೆಚ್ಚ ಕಡಿಮೆಯಾಗುವುದು, ಮಾರುಕಟ್ಟೆಯಲ್ಲಿ ಉತ್ಪನ್ನಗಳ ಬೆಲೆ ಇಳಿಯುವುದು ಮತ್ತು ಸಾಮಾನ್ಯ ಜನರಿಗೆ ಆರ್ಥಿಕ ಭಾರ ಕಡಿಮೆಯಾಗುವುದು ನಿರೀಕ್ಷೆಯಾಗಿದೆ. ಜೊತೆಗೆ, ಸ್ವಯಂಚಾಲಿತ ಮರುಪಾವತಿ ಮತ್ತು ಸರಳ ನೋಂದಣಿ ವ್ಯವಸ್ಥೆಯಿಂದ ವ್ಯವಹಾರ ವಾತಾವರಣ ಹೆಚ್ಚು ಅನುಕೂಲಕರವಾಗಲಿದೆ.

ಇದನ್ನೂ ಓದಿ: ಸಾಕಷ್ಟು ಕೈದಿಗಳು ಇಲ್ಲೇ ಇದಾರೆ ದರ್ಶನ್ ಯಾಕೆ ಅರ್ಜೆಂಟ್ ಮಾಡ್ತೀರಾ? ಕೋರ್ಟ್ ಪ್ರಶ್ನೆಗೆ ಪೊಲೀಸ್ ಉತ್ತರ ಏನು?