Skip to main content
ವಿಡಿಯೋ
general

ಧರ್ಮಸ್ಥಳ ಪ್ರಕರಣದ ಬಗ್ಗೆ ದೆಹಲಿಯಲ್ಲಿ ಚರ್ಚೆ: ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ - ಸ್ವಾಮೀಜಿಗಳ ಮನವಿಗೆ ಅಮಿತ್ ಶಾ ಸ್ಪಂದನೆ

By Shravanthi R
ಧರ್ಮಸ್ಥಳ ಪ್ರಕರಣದ ಬಗ್ಗೆ ದೆಹಲಿಯಲ್ಲಿ ಚರ್ಚೆ: ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ - ಸ್ವಾಮೀಜಿಗಳ ಮನವಿಗೆ ಅಮಿತ್ ಶಾ ಸ್ಪಂದನೆ

ಧರ್ಮಸ್ಥಳ ಪ್ರಕರಣದಲ್ಲಿನ ಎಲ್ಲಾ ಬೆಳವಣಿಗೆಗಳು ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಕ್ಯಾಬಿನೆಟ್ ನೇತೃತ್ವದ ಸಭೆಯಲ್ಲಿ ಚರ್ಚಿಸಲಿದ್ದೇವೆ ಹಾಗೂ ಧರ್ಮಸ್ಥಳಕ್ಕೆ ಒದಗಿ ಬಂದಿರುವ ಅಪಪ್ರಚಾರದ ವಿರುದ್ಧ ಕಡಿವಾಣ ಹಾಕಲು ಅಗತ್ಯವಿದ್ದರೆ ಎನ್‌ಐಎಗೆ ವಹಿಸುತ್ತೇವೆ ಹಾಗೂ ಹೊಸ ಕಾನೂನು ತರುತ್ತೇವೆ

ಧರ್ಮಸ್ಥಳ ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ( NIA ) ಕೊಡಬೇಕು ಎಂದು ಇಂದು ಮಂಗಳೂರಿನ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಒಳಗೊಂಡಂತೆ, ಎಂಟು ವಿವಿಧ ಪೀಠಗಳ ಸ್ವಾಮೀಜಿಗಳ ನಿಯೋಗವು ದೆಹಲಿಗೆ ತೆರಳಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರಕರಣವನ್ನು ಸೂಕ್ಷ್ಮವಾಗಿ ನಾವು ಗಮನಿಸಿದ್ದೇವೆ ಕ್ಯಾಬಿನೆಟ್ ನಲ್ಲಿ ಈ ಕುರಿತು ಚರ್ಚಿಸಿ ನಿರ್ಧರಿಸಲಾಗುವುದು ಎಂದು ಅಮಿತ್ ಶಾ ವಿಶ್ವಾಸಪೂರ್ಣವಾಗಿ ಪ್ರತಿಕ್ರಿಯೆಸಿದ್ದಾರೆ. 

ಸುಮಾರು ಗಂಟೆಗಳ ಕಾಲ ಒಡಗೂಡಿ ನಡೆಸಿದ ಚರ್ಚೆಯಲ್ಲಿ, ಧರ್ಮಸ್ಥಳ ಕ್ಷೇತ್ರ ಅಪಪ್ರಚಾರದ ಜೊತೆಗೆ ಪ್ರಕರಣ ಸಂಬಂಧ ಪದೇ ಪದೇ ಹಿಂದುಗಳ ಮೇಲೆ, ಹಿಂದೂ ಧಾರ್ಮಿಕ ಕೇಂದ್ರಗಳ ಮೇಲೆ ಅಪಪ್ರಚಾರ ದಾಳಿ ಆಗುತ್ತಿದೆ. ಈ ವ್ಯವಸ್ಥಿತ ಷಡ್ಯಂತ್ರವನ್ನು ಹಾಗೂ ದಾಳಿಗಳನ್ನು ತಡೆಯಲು ಸೂಕ್ತ ತನಿಖೆ ನಡೆಸಬೇಕೆಂದು ಪಂಚಮಸಾಲಿ ಲಿಂಗಾಯತ ಮಠದ ವಚನಾನಂದ ಸ್ವಾಮೀಜಿ ಅವರ ನೇತೃತ್ವದಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಅಮೆರಿಕನ್ನರ Data ಕದ್ದ ಚೀನಾ ಹ್ಯಾಕರ್‌ಗಳು..?!

NOBERO Men's Cotton Oversized Fit T-Shirt

ಧರ್ಮಸ್ಥಳ ಪ್ರಕರಣದಲ್ಲಿನ ಎಲ್ಲಾ ಬೆಳವಣಿಗೆಗಳು ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆ ಕ್ಯಾಬಿನೆಟ್ ನೇತೃತ್ವದ ಸಭೆಯಲ್ಲಿ ಚರ್ಚಿಸಲಿದ್ದೇವೆ ಹಾಗೂ ಧರ್ಮಸ್ಥಳಕ್ಕೆ ಒದಗಿ ಬಂದಿರುವ ಅಪಪ್ರಚಾರದ ವಿರುದ್ಧ ಕಡಿವಾಣ ಹಾಕಲು ಅಗತ್ಯವಿದ್ದರೆ ಎನ್‌ಐಎಗೆ ವಹಿಸುತ್ತೇವೆ ಹಾಗೂ ಹೊಸ ಕಾನೂನು ತರುತ್ತೇವೆ ಸಮಾಜದ ಸ್ವಾಸ್ಥತೆಗೆ ಜಾಗೃತಿ ಮೂಡಿಸಲಿದ್ದೇವೆ ಎನ್ನುವ ಮೂಲಕ ಅಮಿತ್ ಶಾ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ: OTT ಪ್ರಿಯರಿಗೆ ಶುಭಸುದ್ದಿ..ಕಣ್ಣಪ್ಪ ಭಕ್ತಿಗೆ ಒಲಿಯಲಿದೆ ಪ್ರೈಮ್ ವಿಡಿಯೋ! ಮಲ್ಟಿ ಸ್ಟಾರ್ ಫ್ಯಾನ್ಸ್‌ಗೆ ಹಬ್ಬ ಯಾವಾಗ?