ಕರ್ನಾಟಕದಾದ್ಯಂತ ಸೆಪ್ಟೆಂಬರ್ 10 ವರೆಗೂ ಅಧಿಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಯಾವ ಸಮಯದಲ್ಲಿ ವರುಣನ ಅಬ್ಬರ ಶುರುವಾಗುತ್ತದೆ. ಎಂದು ತಿಳಿಯುವುದಿಲ್ಲ ಹಾಗಾಗಿ ಜನರು ಎಚ್ಚರಿಕೆಯಿಂದ ಇರಬೇಕು ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.ಕರಾವಳಿ ಕರ್ನಾಟಕ ಹಾಗೂ ಬೆಂಗಳೂರಿನಲ್ಲಿ ಮುಂದಿನ ಐದು ದಿನ ಭಾರಿ ಮಳೆ; ಹವಾಮಾನ ಇಲಾಖೆಯಿಂದ ಮುನ್ಸೂಚನೆ..!
ಸೆಪ್ಟೆಂಬರ್ 10 ವರೆಗೂ ಜನರು ಎಚ್ಚರಿಕೆಯಿಂದ ಇರಬೇಕು ಮಳೆಯ ಸಾದ್ಯತೆ ಬಹಳ ಇದೆ. ಶಾಲಾ – ಕಾಲೇಜ್ ಗಳಿಗೆ ಮುಂದಿನ ದಿನಗಳಲ್ಲಿ ರಜೆ ನೀಡುವ ಸಾದ್ಯತೆಯಿದೆ. ಮಳೆಯಿಂದ ಕೆಲವು ಪ್ರದೇಶದಲ್ಲಿ ಗುಡ್ಡ- ಕುಸಿತ ಆಗುವ ಸಾದ್ಯತೆಯಿದೆ. ಎಂದು ಹವಾಮಾನ ಇಲಾಖೆಯು ಎಚ್ಚರಿಕೆ ನೀಡಿದೆ. ಇಂದು ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಬಹುತೇಕ ಕಡೆ ಭಾರೀ ಮಳೆಯಾಗಲಿದೆ.
ಯಾವ ಯಾವ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಜೋರು ?
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಇನ್ನು ಕೆಲವು ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಜೋರಾಗಿದೆ. ಎಲ್ಲಿ ನೋಡಿದರು, ಗುಡ್ಡ ಕುಸಿತ. ಭೂ ಕುಸಿತ ನೋಡಬಹುದು ಅಲ್ಲಿನ ಜನರು ಪರದಾಡುವಂತಾಗಿದೆ. ಮಳೆಯಿಂದ ಕರಾವಳಿ ಮತ್ತು ಉಡುಪಿ ಹಾಗೂ ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ವರುಣನ ಅಬ್ಬರ ದಿನದಿಂದ ದಿನ ಜಾಸ್ತಿಯಾಗಿದೆ.
Studio Shringaar Women's Net sequence Embroidered Full Size Dupatta
ಜನರು ಮನೆಯಿಂದ ಹೊರಗೆ ಬರಲು ಭಯಪಡುತ್ತಿದ್ದಾರೆ. ಕಡಲ ಜನರಿಗೆ ಹವಾಮಾನ ಇಲಾಖೆಯು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ. ಸಮುದ್ರದಲ್ಲಿ ಅಲೆಯ ಅಬ್ಬರ ಜೋರಾಗಿರುತ್ತದೆ. ಗಾಳಿಯ ರಭಸಕೂಡ ಜೋರಾಗಿರುತ್ತದೆ ಕಡಲ ತೀರದಲ್ಲಿ ವಾಸ ಮಾಡುತ್ತಿರುವ ಜನರು ಮಳೆಗಾಲದಲ್ಲಿ ಎಚ್ಚರಿಕೆಯಿಂದ ಇರಬೇಕು.ಸೆಪ್ಟೆಂಬರ್ ಮೊದಲ ದಿನವೇ ಬೆಂಗಳೂರಿನಲ್ಲಿ ಅಬ್ಬರಿಸಿದ ವರುಣ..!
ಯಾವ ಸಮಯದಲ್ಲಿ ಸಮುದ್ರ ಉಕ್ಕಿ ಹರಿಯುತ್ತದೆ ಎಂದು ಗೊತ್ತಾಗುವುದಿಲ್ಲ, ಹಾಗಾಗಿ ಕಡಲ ಜನರು ಬಹಳ ಜಾಗೃತಿಯಾಗಿ ಇರಬೇಕು. ಎಂದು ಹವಾಮಾನ ಇಲಾಖೆ ಕಡಲ ತೀರದ ಜನರಿಗೆ ಮುನ್ಸೂಚನೆ ಕೊಟ್ಟಿದ್ದಾರೆ.