Skip to main content
ವಿಡಿಯೋ
1/2
general

ವಿಜಯವಾಡ-ನಾಗ್ಪುರ ವಿಮಾನಕ್ಕೆ ಹಕ್ಕಿ ಡಿಕ್ಕಿ...ಅರುಣಾಚಲದಲ್ಲಿ ಹೊಸ ಟರ್ಮಿನಲ್ ಉದ್ಘಾಟನೆ!

By News Desk
ವಿಜಯವಾಡ-ನಾಗ್ಪುರ ವಿಮಾನಕ್ಕೆ ಹಕ್ಕಿ ಡಿಕ್ಕಿ...ಅರುಣಾಚಲದಲ್ಲಿ ಹೊಸ ಟರ್ಮಿನಲ್ ಉದ್ಘಾಟನೆ!

ವಿಜಯವಾಡ ಮತ್ತು ನಾಗ್ಪುರ ವಿಮಾನಗಳಿಗೆ ಹಕ್ಕಿ ಡಿಕ್ಕಿಯಿಂದ ರದ್ದುಗೊಂಡ ಘಟನೆಗಳು, ಅರುಣಾಚಲದ ಡೊನ್ಯಿ ಪೊಲೊ ಏರ್‌ಪೋರ್ಟ್‌ನಲ್ಲಿ 640 ಕೋಟಿ ರೂ. ವೆಚ್ಚದ ಹೊಸ ಟರ್ಮಿನಲ್ ಉದ್ಘಾಟನೆಯೊಂದಿಗೆ ಪ್ರಯಾಣಿಕರಿಗೆ ಹೊಸ ಅನುಕೂಲ.

ವಿಜಯವಾಡದಿಂದ ಬೆಂಗಳೂರಿಗೆ ಹೊರಟಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಟೇಕಾಫ್‌ಗೆ ಸಿದ್ಧವಾಗುತ್ತಿದ್ದಾಗ ಹಕ್ಕಿಯೊಂದು ಡಿಕ್ಕಿ ಹೊಡೆದ ಪರಿಣಾಮ ವಿಮಾನವನ್ನು ರದ್ದುಗೊಳಿಸಲಾಗಿದೆ.

ಆಂಧ್ರಪ್ರದೇಶದ ಗನ್ನವರಂ ಪ್ರದೇಶದಲ್ಲಿರುವ ವಿಜಯವಾಡ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ರನ್‌ವೇನಲ್ಲಿ ಸಾಗುತ್ತಿದ್ದ ವಿಮಾನದ ಮುಂಭಾಗಕ್ಕೆ ಹದ್ದೊಂದು ಬಡಿದಿದೆ. ಸುರಕ್ಷತೆಯ ಕಾರಣದಿಂದ ಈ ವಿಮಾನ ಪ್ರಯಾಣ ರದ್ದುಗೊಂಡಿದೆ.ಮೈಸೂರು ದಸರಾ 2025: 11 ದಿನಗಳ ಭವ್ಯ ಉತ್ಸವ, ಜಂಬೂ ಸವಾರಿ ಮತ್ತು ಡ್ರೋನ್ ಪ್ರದರ್ಶನ!

ಮಂಗಳವಾರ ನಾಗ್ಪುರದಿಂದ ಕೋಲ್ಕತ್ತಾಗೆ ಹೊರಟಿದ್ದ ಇಂಡಿಗೋ ಏರ್‌ಲೈನ್ಸ್ ವಿಮಾನಕ್ಕೂ ಇದೇ ರೀತಿಯ ಅನುಭವವಾಗಿತ್ತು. ಮಹಾರಾಷ್ಟ್ರದ ನಾಗ್ಪುರ ವಿಮಾನ ನಿಲ್ದಾಣದಿಂದ ಟೇಕಾಫ್ ಆದ ನಂತರ ಹಕ್ಕಿಯೊಂದು ಡಿಕ್ಕಿ ಹೊಡೆದ ಕಾರಣ, ಪ್ರಯಾಣಿಕರು ಹಾಗೂ ಸಿಬ್ಬಂದಿಯ ಸುರಕ್ಷತೆಯ ದೃಷ್ಟಿಯಿಂದ ವಿಮಾನವನ್ನು ರದ್ದುಗೊಳಿಸಲಾಯಿತು. ಈ ವಿಮಾನದಲ್ಲಿ 165 ಪ್ರಯಾಣಿಕರಿದ್ದರು.


ಅರುಣಾಚಲ ಪ್ರದೇಶದ ಡೊನ್ಯಿ ಪೊಲೊ ಏರ್‌ಪೋರ್ಟ್‌ನಲ್ಲಿ ಇಂದು ಹೊಸ ಟರ್ಮಿನಲ್ ಅನ್ನು ಉದ್ಘಾಟಿಸಲಾಯಿತು. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಪು ರಾಮ್ ಮೋಹನ್ ನಾಯ್ಡು ಮತ್ತು ಮುಖ್ಯಮಂತ್ರಿ ಪೆಮಾ ಖಂಡು ಜಂಟಿಯಾಗಿ ಇದನ್ನು ಉದ್ಘಾಟಿಸಿದರು. ಹೊಲ್ಲೊಂಗಿಯಲ್ಲಿರುವ ಡೊನ್ಯಿ ಪೊಲೊ ವಿಮಾನ ನಿಲ್ದಾಣದಲ್ಲಿ ಈ ಹೊಸ ಟರ್ಮಿನಲ್ ಸ್ಥಾಪನೆಯಿಂದ ವಿಮಾನಗಳ ದಟ್ಟಣೆ ಕಡಿಮೆಯಾಗುವ ನಿರೀಕ್ಷೆಯಿದೆ.ಕೃಷ್ಣಾ ಮತ್ತು ಮಹದಾಯಿ ಜಲ ವಿವಾದಗಳ ವಿಚಾರಣೆ ವಿವಿಧ ಹಂತಗಳಲ್ಲಿ: ಜಲಶಕ್ತಿ ಸಚಿವಾಲಯ..!

ಸುಮಾರು 640 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಹೊಲೊಂಗಿ ವಿಮಾನ ನಿಲ್ದಾಣವು ಅರುಣಾಚಲದ ಮೊದಲ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣವಾಗಿದೆ. ಇದನ್ನು 2022ರ ನವೆಂಬರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.