Skip to main content
ವಿಡಿಯೋ
politics

GST ಕಡಿತದಿಂದ ರಾಜ್ಯಕ್ಕೆ 70,000 ಕೋಟಿ ರೂಪಾಯಿ ನಷ್ಟ: ಗೃಹ ಸಚಿವ ಪರಮೇಶ್ವರ್‌ ಹೇಳಿಕೆ

By Gireesh Vasishta
GST ಕಡಿತದಿಂದ ರಾಜ್ಯಕ್ಕೆ 70,000 ಕೋಟಿ ರೂಪಾಯಿ ನಷ್ಟ: ಗೃಹ ಸಚಿವ ಪರಮೇಶ್ವರ್‌ ಹೇಳಿಕೆ

ಹೀಗಾಗಿ ಇದು ಜನ ಸಮಾನ್ಯರಿಗೆ ಕಷ್ಟವಾಗಿತ್ತು. ಕೇಂದ್ರ ಸರ್ಕಾರಕ್ಕೆ ಈಗ ಸಾಮಾನ್ಯ ಜನರ ಸಮಸ್ಯೆ ಅರ್ಥವಾಗಿರಬಹುದು, GST ಸರಳೀಕರಣ ಮಾಡಬೇಕು ಎಂಬುದು ಕಾಂಗ್ರೆಸ್‌ ಪಕ್ಷದ ಆಗ್ರಹವೂ ಆಗಿತ್ತು. ಕಳೆದ ಕೆಲ ವರ್ಷಗಳಿಂದ GST ಕಡಿತ ಮಾಡುವಂತೆ ನಾವು ಒತ್ತಾಯಿಸುತ್ತಲೇ ಬಂದಿದ್ದೆವು ಎಂದರು.

GST ಕಡಿತದಿಂದ ರಾಜ್ಯಕ್ಕೆ 70,000 ಕೋಟಿ ರೂಪಾಯಿ ನಷ್ಟ: ಗೃಹ ಸಚಿವ ಪರಮೇಶ್ವರ್‌ ಹೇಳಿಕೆ

ಬೆಂಗಳೂರು: ಕೇಂದ್ರ ಸರ್ಕಾರದ GST ಕಡಿತ ನಿರ್ಧಾರದಿಂದ ರಾಜ್ಯಕ್ಕೆ ಸುಮಾರು 70 ಸಾವಿರ ಕೋಟಿ ರೂಪಾಯಿ ನಷ್ಟವಾಗಬಹುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿಕೆ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ, GST ಕಡಿತ ಮಾಡಿರುವುದು ಸ್ವಾಗತಾರ್ಹವಾಗಿದೆ. ಕೆಲ ಅಗತ್ಯ ವಸ್ತುಗಳಿಗೆ ಶೇ.0 ಅಥವಾ ಶೇ.5 ಜಿಎಸ್​ಟಿ ಮಾಡಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಕೆಲ ವಸ್ತುಗಳ ಮೇಲಿನ GST ದರಗಳು ಹೆಚ್ಚೇ ಇವೆ.


ಸಾಮಾನ್ಯ ಜನರಿಗೆ ತಲುಪುವ ಪದಾರ್ಥಗಳಿಗೆ ಕಡಿಮೆ GST ಇರಬೇಕು ಅಥವಾ ಇರಬಾರದು. ಅಂತಹ ಪದಾರ್ಥಗಳಿಗೂ ಹೆಚ್ಚು ಜಿಎಸ್‌ಟಿ ಹಾಕಿದ್ದರು. ಹೀಗಾಗಿ ಇದು ಜನ ಸಮಾನ್ಯರಿಗೆ ಕಷ್ಟವಾಗಿತ್ತು. ಕೇಂದ್ರ ಸರ್ಕಾರಕ್ಕೆ ಈಗ ಸಾಮಾನ್ಯ ಜನರ ಸಮಸ್ಯೆ ಅರ್ಥವಾಗಿರಬಹುದು, GST ಸರಳೀಕರಣ ಮಾಡಬೇಕು ಎಂಬುದು ಕಾಂಗ್ರೆಸ್‌ ಪಕ್ಷದ ಆಗ್ರಹವೂ ಆಗಿತ್ತು. ಕಳೆದ ಕೆಲ ವರ್ಷಗಳಿಂದ GST ಕಡಿತ ಮಾಡುವಂತೆ ನಾವು ಒತ್ತಾಯಿಸುತ್ತಲೇ ಬಂದಿದ್ದೆವು ಎಂದರು.
ಇದನ್ನು ಓದಿ:ಮಾರುತಿ ಸುಜುಕಿ ವಿಕ್ಟೋರಿಯಸ್‌ ಲಾಂಚ್‌: ಸೂಪರ್‌ ಲುಕ್‌ನ SUVಯ ಪ್ರಮುಖ ಅಂಶಗಳು ಹೀಗಿವೆ!


ಇದೀಗ ಕೇಂದ್ರ ಸರ್ಕಾರ ಜಿಎಸ್‌ಟಿ ಸರಳೀಕರಣ ನಿರ್ಧಾರ ಮಾಡಿರುವುದನ್ನು ಸ್ವಾಗತಿಸುತ್ತೇವೆ ಎಂದರು. ಸಾಮಾನ್ಯವಾಗಿ ತೆರಿಗೆ ಕಡಿಮೆ ಮಾಡಿದಾಗ ನಷ್ಟ ಆಗುತ್ತದೆ. ಕೇಂದ್ರದಂತೆ ರಾಜ್ಯಕ್ಕೂ ನಷ್ಟವಾಗಿದ್ದು, ಅದಕ್ಕೆ ಪರ್ಯಾಯ ದಾರಿ ಹುಡುಕಬೇಕು. ಜೊತೆಗೆ ರಾಜ್ಯಗಳಿಗೆ ಅನುದಾನ ಹಂಚಿಕೆ ಹಾಗೂ ಅಗತ್ಯವಿಲ್ಲದ ಖರ್ಚುಗಳ ಬಗ್ಗೆ ನಿಗಾ ವಹಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕಿದೆ
 ಎಂದು ಹೇಳಿದರು.YUISI ​​Sun Hat​​ for Men Women, Breathable Summer Hat for Travel, Hiking, Gardening, Sun Hats for Men​​ & Round Sun Cap for Hiking, Hats for Women​​ Indoor Outdoor Activities