ರಾಜ್ಯ ಕಾಂಗ್ರೆಸ್ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಕುರಿತಾದ ಚರ್ಚೆಗಳು ಮತ್ತೆ ತಾರಕಕ್ಕೇರಿವೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಎರಡು ದಿನಗಳ ದೆಹಲಿ ಪ್ರವಾಸವು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಮುಖ್ಯಮಂತ್ರಿ ಸ್ಥಾನಕ್ಕಾಗಿ ಸದ್ದಿಲ್ಲದೆ ತಯಾರಿ ನಡೆಸುತ್ತಿರುವ ಡಿಕೆಶಿ, ರಾಹುಲ್ ಗಾಂಧಿ ಅವರೊಂದಿಗೆ ನಡೆಸಿದ ಸುದೀರ್ಘ 'ಒನ್ ಟು ಒನ್' ಸಭೆಯು ರಾಜ್ಯ ಸರ್ಕಾರದಲ್ಲಿ 'ಪವರ್ ಶೇರಿಂಗ್' (ಅಧಿಕಾರ ಹಂಚಿಕೆ) ಸೂತ್ರ ಜಾರಿಯಾಗುತ್ತದೆಯೇ ಎಂಬ ಕುತೂಹಲ ಮೂಡಿಸಿದೆ.Shining Diva Fashion 5-7 Pcs Combo Latest Stylish Western Necklace Set for Women Pendant Necklace Gifts for Girls
ದೆಹಲಿ ಮಟ್ಟದ ರಣತಂತ್ರ: ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ದೀರ್ಘಕಾಲದಿಂದ ಕಾಯುತ್ತಿದ್ದ ಡಿ.ಕೆ. ಶಿವಕುಮಾರ್ ಅವರಿಗೆ ಈಗ ಕಾಲ ಕೂಡಿ ಬಂದಿದೆ. ರಾಹುಲ್ ಅವರೊಂದಿಗಿನ ಸಭೆಯ ಬೆನ್ನಲ್ಲೇ ತಡರಾತ್ರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದು ಈ ಭೇಟಿಯ ಗಾಂಭೀರ್ಯತೆಯನ್ನು ಹೆಚ್ಚಿಸಿದೆ. ಈ ಮಧ್ಯೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ರಾಹುಲ್ ಗಾಂಧಿಯನ್ನು ಭೇಟಿ ಮಾಡಿರುವುದು ಕುತೂಹಲಕ್ಕೆ ಹೊಸ ಆಯಾಮ ನೀಡಿದೆ.
ಪವರ್ ಶೇರಿಂಗ್ ಬೇಡಿಕೆ: ರಾಹುಲ್ ಗಾಂಧಿ ಅವರು ಮೈಸೂರು ಪ್ರವಾಸದಲ್ಲಿದ್ದಾಗ ವಿಮಾನ ನಿಲ್ದಾಣದಲ್ಲೇ ಡಿಕೆಶಿ ಅವರೊಂದಿಗೆ ಪ್ರತ್ಯೇಕವಾಗಿ ಮಾತನಾಡಿ, ದೆಹಲಿಗೆ ಬರುವಂತೆ ಸೂಚಿಸಿದ್ದರು ಎನ್ನಲಾಗಿದೆ.ಇದನ್ನು ಓದಿ: ಜಿಬಿಎ ಚುನಾವಣೆಗೆ ಬಿಜೆಪಿ-ಜೆಡಿಎಸ್ ದೋಸ್ತಿ ಅಂತಿಮ? ಎಚ್.ಡಿ. ಕುಮಾರಸ್ವಾಮಿ ಮಹತ್ವದ ಘೋಷಣೆ
ದೆಹಲಿಗೆ ತೆರಳಿರುವ ಡಿಕೆಶಿ, 2.5 ವರ್ಷಗಳ ಅಧಿಕಾರ ಹಂಚಿಕೆ ಒಪ್ಪಂದದ ಅನುಷ್ಠಾನ ಅಥವಾ ನಾಯಕತ್ವ ಬದಲಾವಣೆಯ ಪ್ರಬಲ ಬೇಡಿಕೆಯನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆ ಎನ್ನಲಾಗುತ್ತಿದೆ. ಸಭೆಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಅಲ್ಲಿ ಚರ್ಚೆಯಾದ ಎಲ್ಲ ವಿಚಾರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಗುಟ್ಟನ್ನು ಕಾಪಾಡಿಕೊಂಡಿದ್ದಾರೆ.
ಸಿದ್ದರಾಮಯ್ಯ ಬಣದ ಪ್ರತಿ ತಂತ್ರ: ಅತ್ತ ದೆಹಲಿಯಲ್ಲಿ ಡಿಕೆಶಿ ಬಣ ಆಕ್ಟಿವ್ ಆಗಿದ್ದರೆ, ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ರಾಜಣ್ಣ ಅವರ ನಿವಾಸದಲ್ಲಿ ಭೋಜನ ಕೂಟದ ನೆಪದಲ್ಲಿ ಆಪ್ತ ನಾಯಕರ ಸಭೆ ನಡೆಸುತ್ತಿದ್ದಾರೆ. ಇದನ್ನು ಓದಿ: ʻನನ್ನ ಕಚೇರಿ ಕೆಡವಿದವರನ್ನು ಜನರೇ ಮನೆಗೆ ಕಳಿಸಿದ್ದಾರೆʼ: ಶಿವಸೇನೆ ವಿರುದ್ಧ ಕಂಗನಾ ರಣಾವತ್ ಆಕ್ರೋಶ
ನಾಟಿಕೋಳಿ ಸಾರು ಮತ್ತು ರಾಗಿ ಮುದ್ದೆಯ ಊಟದ ಸವಿಯ ನಡುವೆಯೇ, ತಮ್ಮ ಸ್ಥಾನಕ್ಕೆ ಎದುರಾಗಬಹುದಾದ ಸಂಭವನೀಯ ಸವಾಲುಗಳನ್ನು ಎದುರಿಸಲು ಸಿದ್ದರಾಮಯ್ಯ ಬಣ ತಂತ್ರ ರೂಪಿಸುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.