ಬಿಗ್ ಬಾಸ್ ಕನ್ನಡ ಸೀಸನ್ 12: ಕಲರ್ಸ್‌ನಿಂದ ಪ್ರೋಮೊ ರಿಲೀಸ್: ಪ್ರೋಮೊ ಬಗ್ಗೆ ಕಿಚ್ಚ ಸುದೀಪ್‌ರ ಮಾತು ಹೀಗಿದೆ
ಕರ್ನಾಟಕ ರಾಜ್ಯ ಜನತೆ ಕಷ್ಟಪಟ್ಟಾದರೂ ಇಷ್ಟಪಟ್ಟು ನೋಡುವ ಕಲರ್ಸ್ ಕನ್ನಡದ ಉತ್ತಮ ಮನರಂಜನ ಕಾರ್ಯಕ್ರಮವಾದ ಬಿಗ್ ಬಾಸ್ ಸೀಸನ್ 12 ರ ಗ್ರಾಂಡ್ ಓಪನಿಂಗ್ ಬಗ್ಗೆ ಪ್ರೊಮೋ ಮೂಲಕ ಕಲರ್ಸ್ ಕನ್ನಡ ತಂಡ ಮಾಹಿತಿ ನೀಡಿದ್ದು, ಬಿಗ್ ಬಾಸ್ ಸೀಸನ್ 12 ಸೆಪ್ಟೆಂಬರ್ 28 ರಂದು GRAND OPENING ಪಡೆಯಲಿದ್ದು, ಕಿಚ್ಚ ಸುದೀಪ್ ಅವರು ಕಲರ್ಸ್ ಕನ್ನಡದ ಪ್ರೋಮೊವನ್ನು ಶೇರ್ ಮಾಡಿ ಮೆಚ್ಚುಗೆಯ ಬರಹವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಕಿಚ್ಚನ ಹೇಳಿಕೆ:
ತಂಡವು ಪ್ರೋಮೋಗಾಗಿ ಸಾಕಷ್ಟು ಕಷ್ಟಪಟ್ಟು ಸೃಜನಶೀಲವಾಗಿ ಉತ್ತಮ ಕೆಲಸವನ್ನು ಮಾಡಿದೆ. ಎರಡನೇ ಪ್ರೋಮೋ ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು ನೀವು ನೋಡಬಹುದಾದ ಒಂದು ಝಲಕ್ ಇಲ್ಲಿದೆ. ಈ ಬಾರಿ ದೊಡ್ಡದಾದ ಮತ್ತು ಉತ್ತಮವಾದ ವೇದಿಕೆ ಇರಲಿದ್ದು ಇನ್ನಷ್ಟು ಬೆಚ್ಚಗಿನ ಪ್ರಕಾಶಮಾನವಾದ ಬಿಗ್ ಬಾಸ್ ಮನೆ ಇರಲಿದೆ ಎಂದು ಕಿಚ್ಚ ಮಾಹಿತಿ ನೀಡಿದ್ದಾರೆ.BULLMER Trendy Clothing Set with Shirt & Pants Co-ords for Men
ಇನ್ನುಳಿದಂತೆ ಸಮಯ ಒಂಬತ್ತು ಗಂಟೆ ಆದರೆ ಸಾಕು ನಗರ, ಹಳ್ಳಿ ಪ್ರದೇಶಗಳಲ್ಲಿ ಒಂದೇ ಕಾರ್ಯಕ್ರಮ ಟಿವಿಯಲ್ಲಿ ಕಾಣುತ್ತಿರುತ್ತದೆ ಅದೇ ಬಿಗ್ ಬಾಸ್. ಸಾಧಾರಣವಾಗಿ ಮನರಂಜನೆ ಎಂದರೆ ಹಾಡು, ನೃತ್ಯ, ಗಲಾಟೆ, ಹರಟೆ, ಮಾತುಕತೆ, ಕಿರಿಕಿರಿ, ಜಗಳ ಇತ್ಯಾದಿ. ಇವೆಲ್ಲವನ್ನು ಇಷ್ಟಪಟ್ಟು ನೋಡುವ ವೀಕ್ಷಕರಿಗೆ ಬಿಗ್ ಬಾಸ್ ಬಂದರೆ ಸಾಕು ಏನೋ ಸಂತೋಷ. ಹೀಗಾಗಿ ಕಿಚ್ಚ ಸುದೀಪ್ ಅವರು ಸಹ ಉತ್ಸುಕರಾಗಿದ್ದು ಅತಿ ಉತ್ಸಾಹದಿಂದ ಎಕ್ಸ್ ಖಾತೆಯಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಆದರೆ ಇನ್ನೂ ಸ್ಪರ್ಧಿಗಳ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವುದರಿಂದ ಬಿಗ್ ಬಾಸ್ ಶುರುವಾಗುವವರೆಗೂ ಕಾಯಲೇಬೇಕಿದೆ.ಮೂಡಾ ಕೇಸ್: ಬೇಕಂತಲೆ ನಿ. ನ್ಯಾಯಮೂರ್ತಿ ಪಿಎನ್. ದೇಸಾಯಿ ಅವರನ್ನು ನೇಮಿಸಿ ಪ್ರಕರಣವನ್ನು ಮುಗಿಸಲಾಯಿತು: ಏನಿದು ಆರೋಪ?
ಪ್ರೋಮೊದಲ್ಲಿ ಟಿವಿ ನೋಡುಗರ ಎಲ್ಲಾ ರೀತಿಯ ಫಾರ್ಮ್ಯಾಟ್ಗಳನ್ನು ತೋರಿಸಲಾಗಿದೆ. ಎಲ್ಲರಿಗೂ ಒಂದೊಂದು ರೀತಿಯ ವಿಷಯ, ವಿಚಾರಗಳು ಇಷ್ಟ. ಆದರೆ ಎಲ್ಲರನ್ನು ಒಂದುಗೂಡಿಸುವ ಕಾರ್ಯಕ್ರಮವೆಂದರೆ ಅದು ಬಿಗ್ ಬಾಸ್ ಎಂದು ಹೇಳಲಾಗಿದೆ. ಹೀಗಾಗಿ ಪ್ರೋಮೋ ಸಕ್ಕತ್ತಾಗಿದ್ದು ನೋಡುವರು ಫುಲ್ ಖುಷಿಯಾಗಿದ್ದಾರೆ. ಕಿಚ್ಚನ ಮಾತುಕತೆ ಹಾಗೂ ಸ್ಪರ್ಧಿಗಳನ್ನು ನೋಡುವುದಕ್ಕೆ ಬಿಗ್ ಬಾಸ್ ಪ್ರಿಯರು ಕಾತುರರಾಗಿದ್ದಾರೆ.