2019 ರಲ್ಲಿ ಜಾರಿ ನಿರ್ದೇಶನಾಲಯ ಡಿ.ಕೆ.ಶಿವಕುಮಾರ್ ಅವರನ್ನು ಬಂಧಿಸಿದಾಗ ಆದ ಕಲ್ಲು ತೂರಾಟದಲ್ಲಿ ಬಂಧಿಸಲ್ಪಟ್ಟವರ ಮೇಲಿನ ಕೇಸುಗಳನ್ನು ಸಚಿವ ಸಂಪುಟ ವಾಪಸ್ ಪಡೆದಿದೆ, ತನ್ಮೂಲಕ ಅಪರಾಧ ಕೃತ್ಯಗಳನ್ನು ಕಾನೂನುಬದ್ಧಗೊಳಿಸಿದೆ.
ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ, ಕೋಮು ಗಲಭೆ ಸೇರಿದಂತೆ ಗಂಭೀರ ಪ್ರಕರಣಗಳಲ್ಲಿ ಭಾಗಿಯಾದವರ ಮೇಲೆ ಕೇಸು ವಾಪಸ್ ತೆಗೆದುಕೊಂಡಿರುವುದು ಸಂವಿಧಾನಕ್ಕೆ ಬಗೆದ ಅಪಚಾರ. ರಾಜ್ಯದಲ್ಲಿರುವ ಗಂಭೀರ ಸಮಸ್ಯೆಗಳನ್ನು ಚರ್ಚಿಸುವ ಬದಲಾಗಿ ಸಚಿವ ಸಂಪುಟದ ಅಮೂಲ್ಯ ಸಮಯವನ್ನು ಈ ರೀತಿ ಜನವಿರೋಧಿ, ಸಮಾಜವಿರೋಧಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಉಪಯೋಗಿಸುತ್ತಿರುವುದು ರಾಜ್ಯದ ಜನತೆಗೆ ಮಾಡಿರುವ ಅನ್ಯಾಯ. ಸರ್ಕಾರ ತಮ್ಮ ಅಧಿಕಾರವನ್ನು ಬಳಸಿ ಕೇಸುಗಳನ್ನು ವಾಪಸ್ ಪಡೆಯಬಹುದು, ಆದರೆ ಸರ್ಕಾರದ ಈ ವಿವೇಚನಾರಹಿತ ನಿರ್ಧಾರವನ್ನು ಇಂದಿಗೂ ಕ್ಷಮಿಸೋಲ್ಲ.ಬಿಗ್ ಬಾಸ್ ಕನ್ನಡ ಸೀಸನ್ 12: ಕಲರ್ಸ್‌ನಿಂದ ಪ್ರೋಮೊ ರಿಲೀಸ್: ಪ್ರೋಮೊ ಬಗ್ಗೆ ಕಿಚ್ಚ ಸುದೀಪ್‌ರ ಮಾತು ಹೀಗಿದೆ
ಈ ಹಿಂದೆಯೂ ಇದೇ ರೀತಿಯ ಸಾಕಷ್ಟು ಆರೋಪಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ಕೇಳಿ ಬಂದಿದ್ದು ಡಿಜೆ. ಹಳ್ಳಿ, ಕೆಜೆ. ಹಳ್ಳಿ ಗಲಭೆ ಕೋರರ ಕೇಸ್ ಗಳನ್ನು ಕೂಡ ಕಾಂಗ್ರೆಸ್ ಸರ್ಕಾರ ವಾಪಸ್ ಪಡೆದಿತ್ತು ಎಂದು ವ್ಯಾಪಕ ಚರ್ಚೆ ಆಗಿತ್ತು, ಆದರೆ ಅದನ್ನು ಸರ್ಕಾರ ಸಮರ್ಥಿಸಿಕೊಂಡಿತ್ತು.BULLMER Striped Textured Printed Polo Neck Fullsleeve T-Shirt with Rib for Men