ಮೈಸೂರು ದಸರಾ 2025 ನವರಾತ್ರಿ ಆರಂಭವಾಗುವ 22 ಸೆಪ್ಟೆಂಬರ್ 2025 ರಂದು ಶುರುವಾಗಿ ಅಕ್ಟೋಬರ್ 2 2025 ರಂದು ಅಂತ್ಯಗೊಳ್ಳುತ್ತದೆ . 10ನೇ ದಿನದ ವಿಜಯದಶಮಿ ಅಂಬಾರಿ ಮತ್ತು ಪಂಜಿನ ಕವಾಯತ್ತು 2 ಅಕ್ಟೋಬರ್ 2025 ರಂದು ನಡೆಯಲಿದೆ .ತಿರುಮಲದಲ್ಲಿ "ಶ್ರೀವಾರಿ ಬ್ರಹ್ಮೋತ್ಸವಕ್ಕೆ" ಟಿಟಿಡಿ ಸಿದ್ಧತೆ: ಇಒ ಅಧಿಕಾರಿಗಳಿಂದ ತಯಾರಿಗಳ ಪರಿಶೀಲನೆ: ಎಂದು? ಯಾವಾಗ? ಇಲ್ಲಿದೆ ಮಾಹಿತಿ
ಅಂಬಾರಿ ಉತ್ಸವದ ಶುರುವಾಗುವ ಮುನ್ನ ರಾಜಕುಟುಂಬದ ಪೂಜೆ ನಡೆದು ದೇವಿ ಚಾಮುಂಡೇಶ್ವರಿಯ ಮೂರ್ತಿ ಚಿನ್ನದ ಅಂಬಾರಿಯಲ್ಲಿ ಅಲಂಕೃತವಾಗಿ ಇರಿಸಲಾಗುತ್ತದೆ . ಅಂಬಾರಿಯಲ್ಲಿರುವ ಮೂರ್ತಿಯನ್ನು ಹೊತ್ತಿರುವ ಆನೆ 750 ಕಿಲೋಗ್ರಾಂ ಗಾತ್ರದ ಚಿನ್ನದ ಅಂಬಾರಿಯನ್ನ ಆನೆ ಅಭಿಮಯ್ಯ ಹೊತ್ತೊಯ್ಯಲಿದ್ದಾನೆ. ಈ ಬಾರಿಯೂ ಪರೇಡ್ ನಲ್ಲಿ ಅಭಿಮನ್ಯ ಮುಂಭಾಗದ ಪ್ರಥಮ ಹೆಜ್ಜೆಗಳನ್ನ ಇಟ್ಟು ಮೆರವಣಿಗೆ ನಡೆಸುತ್ತಾನೆ.
Scott International Men's Regular Fit T-Shirt
ಜಂಬೂ ಸವಾರಿ ಯಾತ್ರೆಯ ಮಾರ್ಗ :
ಮೈಸೂರು ಅರಮನೆ , ಆಲ್ ಬರ್ಟ್ ರೋಡ್ , ಸಂಯೋಜ್ಜಿ ರಾವ್ ರೋಡ್ , ಬಂಬೂ ಬಜಾರ್ , ಹೈವೇ ಸರ್ಕಲ್ , ಬನ್ನಿ ಮಂಟಪ ಮೈದಾನದ ಮಾರ್ಗದಲ್ಲಿ ಅಭಿಮನ್ಯು ಸೇರಿ 9 ಆನೆಗಳು ಮೆರವಣಿಗೆಯಲ್ಲಿ ಭಾಗವಹಿಸಲಿದೆ. ಇದೇ ವೇಳೆ ಬನ್ನಿ - ಶಮೀ ಮರದ ಪೂಜೆಯನ್ನು ಮಹಾರಾಜರು ಮಾಡುತ್ತಾರೆ. ಇದು ಸರಾಸರಿ 5 ಕಿ.ಮೀ ದೂರದ ಕ್ರಮಿಸುವ ಜಂಬೂ ಸವಾರಿ ಆಗಿರುತ್ತದೆ. ದಸರಾ ನಾಡ ಹಬ್ಬನಾ ಅಥವಾ ಧಾರ್ಮಿಕ ಹಬ್ಬನಾ?
ಮೆರವಣಿಗೆ ಮುಗಿದ ಮೇಲೆ ಬನ್ನಿಮಂಟಪದ ಮೈದಾನದಲ್ಲಿ ಪಂಜಿನ ಕವಾಯತ್ ನಡೆಯುತ್ತದೆ. ಇದರಲ್ಲಿ ಜ್ವಾಲೆ, ಸೈನ್ಯ ಮೋಟಾರ್ ಸೈಕಲ್ ಸ್ಟಂಟ್ಸ್, ಲೇಸರ್ ಪ್ರದರ್ಶನ ಮುಂತಾದವುಗಳನ್ನು ಒಳಗೊಂಡಿದೆ .ನವರಾತ್ರಿ ಐದನೆ ದಿನ ಸ್ಕಂದಮಾತಾ ದೇವಿ ಪೂಜೆ - ವಿಧಾನ , ಮಹತ್ವ , ಫಲಗಳೇನು !