Skip to main content
ವಿಡಿಯೋ
1/2
crime

ಬುರುಡೆ ಕೊಟ್ಟಿದ್ದೇ ಗಿರೀಶ್‌ ಮಟ್ಟಣ್ಣನವರ್‌: ಎಸ್‌ಐಟಿ ತನಿಖೆ ವೇಳೆ ದೂರುದಾರ ಜಯಂತ್‌ ಸ್ಫೋಟಕ ಹೇಳಿಕೆ..!!

By Pavitra Ganapathi Baradavalli
ಬುರುಡೆ ಕೊಟ್ಟಿದ್ದೇ ಗಿರೀಶ್‌ ಮಟ್ಟಣ್ಣನವರ್‌: ಎಸ್‌ಐಟಿ ತನಿಖೆ ವೇಳೆ ದೂರುದಾರ ಜಯಂತ್‌ ಸ್ಫೋಟಕ ಹೇಳಿಕೆ..!!

ಧರ್ಮಸ್ಥಳ ಕೇಸ್‌ಗೆ ಸಂಬಂಧಿಸಿದಂತೆ ದೂರುದಾರ ಚಿನ್ನಯ್ಯ ನ್ಯಾಯಾಲಯಕ್ಕೆ ಒಂದು ಬುರುಡೆ ಹಿಡಿದುಕೊಂಡು ಬಂದು ದೂರು  ನೀಡಿದ್ದ ಆ ಬುರೆಡೆ ಹಿಂದೆ ಈಗ ಎಸ್‌ಐಟಿ  ಬಿದ್ದಿದೆ. ಈ ವೇಳೆ ಬುರುಡೆ ಗ್ಯಾಂಗ್‌ನೊಂದಿಗೆ ಶಾಮೀಲಾಗಿದ್ದ ಎಲ್ಲರಿಗೂ ನೋಟೀಸ್‌ ನೀಡಿ ವಿಚಾರಣೆಗೆ ಕರೆಸಿತ್ತು. ಮೊದಲು ಸಮೀರ್‌, ನಂತರ ಗಿರೀಶ್‌ ಮಟ್ಟಣ್ಣನವರ್‌, ಮೂರನೇಯದಾಗಿ ಚಿನ್ನಯ್ಯ, ಮಹೇಶ್‌ ತಮ್ಮರೋಡಿ, ಯ್ಯೂಟ್ಯೂಬರ್‌ ಅಭಿಷೇಕ್‌ ಸೇರಿ ಕೇರಳ ಮೂಲದ ಯ್ಯೂಟ್ಯೂಬರ್‌ ಮನಾಫ್‌ಗೂ ಸೇರಿ ಎಸ್‌ಐಟಿ ನೋಟೀಸ್‌ ನೀಡಿ ವಿಚಾರಣೆಗೆ ಕರೆದಿತ್ತು

ಧರ್ಮಸ್ಥಳ ಕೇಸ್‌ಗೆ ಸಂಬಂಧಿಸಿದಂತೆ ದೂರುದಾರ ಚಿನ್ನಯ್ಯ ನ್ಯಾಯಾಲಯಕ್ಕೆ ಒಂದು ಬುರುಡೆ ಹಿಡಿದುಕೊಂಡು ಬಂದು ದೂರು  ನೀಡಿದ್ದ ಆ ಬುರೆಡೆ ಹಿಂದೆ ಈಗ ಎಸ್‌ಐಟಿ  ಬಿದ್ದಿದೆ. ಈ ವೇಳೆ ಬುರುಡೆ ಗ್ಯಾಂಗ್‌ನೊಂದಿಗೆ ಶಾಮೀಲಾಗಿದ್ದ ಎಲ್ಲರಿಗೂ ನೋಟೀಸ್‌ ನೀಡಿ ವಿಚಾರಣೆಗೆ ಕರೆಸಿತ್ತು. ಮೊದಲು ಸಮೀರ್‌, ನಂತರ ಗಿರೀಶ್‌ ಮಟ್ಟಣ್ಣನವರ್‌, ಮೂರನೇಯದಾಗಿ ಚಿನ್ನಯ್ಯ, ಮಹೇಶ್‌ ತಮ್ಮರೋಡಿ, ಯ್ಯೂಟ್ಯೂಬರ್‌ ಅಭಿಷೇಕ್‌ ಸೇರಿ ಕೇರಳ ಮೂಲದ ಯ್ಯೂಟ್ಯೂಬರ್‌ ಮನಾಫ್‌ಗೂ ಸೇರಿ ಎಸ್‌ಐಟಿ ನೋಟೀಸ್‌ ನೀಡಿ ವಿಚಾರಣೆಗೆ ಕರೆದಿತ್ತು.ಇದನ್ನೂ ಓದಿ: ಜೋಧಪುರದಲ್ಲಿ RSS ಅಂಗ ಸಂಸ್ಥೆಗಳ 3 ದಿನಗಳ ಸಮನ್ವಯ ಸಭೆ ಆರಂಭ: ಪ್ರಮುಖರು ಭಾಗಿ


ಈ ಪ್ರಕರಣಕ್ಕೆ ಬುರೆಡೆಯನ್ನ ಯಾರ್‌ ಕೊಟ್ರು ಯಾರ್‌ ಕೊಟ್ರು ಅಂತ ಯೋಚಿಸ್ತಿರಬೇಕಾದ್ರೆ ಇಂದು ಎಸ್‌ಐಟಿ ವಿಚಾರಣೆಗೆ ಹಾಜರಾದ ದೂರದಾರ ಜಯಂತ್‌ ಈಗ ಕೇಸ್‌ನ ದಿಕ್ಕನ್ನೇ ಸಂಪೂರ್ಣ ಬದಲಿಸಿದ್ದಾನೆ. ಬುರುಡೆ ಕೊಟ್ಟಿದ್ದು ಬೇರೆ ಯಾರೂ ಅಲ್ಲ ಗಿರೀಶ್‌ ಮಟ್ಟಣ್ಣನವರ್‌ ಎಂಬ ಸ್ಫೋಟಕ ಹೇಳಿಕೆ ನೀಡಿ ಕೇಸ್‌ನ ದಿಕ್ಕನ್ನೇ ಬದಲಿಸಿದ್ದಾನೆ . ಅತ್ತ ಎಸ್‌ಐಟಿ ವಿಚಾರಣೆಗೆ ಆಗಮಿಸಿದ ಗಿರೀಶ್‌ ಮಟ್ಟಣ್ಣನವರ್‌ ನನಗೂ ಬುರೆಡೆಗೂ ಯಾವುದೇ ಸಂಬಂಧವಿಲ್ಲ ಎಂಬ ಹೇಳಿಕೆ ನೀಡಿರುವುದು ಎಸ್‌ಐಟಿ ಅಧಿಕಾರಿಗಳನ್ನು ಗೊಂದಲದಲ್ಲಿ ಇರಿಸಿದೆ.ಇದನ್ನೂ ಓದಿ: 28-10-2024 ರ ನಂತರ ಕರೆದಿದ್ದ ನೇರ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆಗಳು ರದ್ದು: ಪರಿಶಿಷ್ಟ ಜಾತಿ ಒಳ ಮೀಸಲಾತಿಯ ಮುಖಾಂತರ ಆಯ್ಕೆ


ಇತ್ತ ಎಸ್‌ಐಟಿ ಅಧಿಕಾರಿಗಳು ಯಾರ ಹೇಳಿಕೆ ನಂಬುವುದು ಯಾರ ಹೇಳಿಕೆಯನ್ನು ಬಿಡುವುದು ಎಂಬ ಗೊಂದಲ ಪರಿಸ್ಥಿತಿ ಏರ್ಪಟ್ಟಿದೆ. ಇದರ ಮಧ್ಯೆಯೂ ಜಯಂತ್‌ ಗಟ್ಟಿಯಾಗಿ ಬುರೆಡೆ ಕೊಟ್ಟಿದ್ದು ಗಿರೀಶ್‌ ಮಟ್ಟಣ್ಣನವರ್‌ ಎಂದು ಹೇಳಿಕೆ ನೀಡಿರುವುದು ಗಿರೀಶ್‌ ಮಟ್ಟಣ್ಣನವರ ಸುತ್ತ ಅನುಮಾನದ ಹುತ್ತ ಬೆಳೆಯುತ್ತಿದೆ. ಈ ಎಲ್ಲದರ ಮಾಸ್ಟರ್‌ ಮೈಂಡ್‌ ಇವನೇ ಇರಬಹುದಾ ಎಂಬ ಶಂಕೆಗಳು ಮೂಡುತ್ತಿವೆ. ಇದರ ಸುತ್ತ ಎಸ್‌ಐಟಿ ಅಧಿಕಾರಿಗಳ ಪ್ರಶ್ನೆಗಳು ಏಳುತ್ತಿವೆ.Aventura Outfitters Men's Round Neck 100% Cotton Regular Fit T-Shirt (Pack of 4)