ಸಾಮಾನ್ಯನಿಂದ ಅಸಾಮಾನ್ಯನಾದ ಜರ್ನಿ ತುಂಬಾ ಇಂಟ್ರೆಸ್ಟಿಂಗ್. ಚಾಯ್ ವಾಲಾ ನರೇಂದ್ರ ದಾಮೋದರ ಮೋದಿ ಪ್ರಧಾನಿ ಮಂತ್ರಿ ಮೋದಿ ಆಗಿದೇ ರೋಚಕ. ಶ್ರಮ, ವಿಧಿ ಏನೇ ಹೇಳಿದ್ರು ಮೋದಿ ಪಿಎಂ ಆಗಲು ಆ ಆಗೋಚರ ಶಕ್ತಿ ಪಾತ್ರ ಅಪಾರ. ಮೋದಿ ಸಕ್ಸಸ್ ಜರ್ನಿಗೆ ಒಂದು ಸಿಕ್ರೇಟ್ ಇದೆ . ಅದುವೇ ನವರಾತ್ರಿ.
ಹಾಗೇ ಚಾಯ್ ವಾಲಾ ಆಗಿ ಕುಟುಂಬ , ಸಂಘ ಅಂತಾ ಓಡುತ್ತಿದ್ದ ಮೋದಿ ಅವರ ಆಧ್ಯಾತ್ಮ ದಾರಿ ಹಿಡಿದು ಇವತ್ತು ಪ್ರಧಾನಿ ಹುದ್ದೆ ಅಲಂಕರಿಸುವಂತೆ ಮಾಡ್ತು. ಅದೇ ಆಧ್ಯಾತ್ಮ ಮೋದಿ ಅವರನ್ನ ನಡೆಸಿಕೊಡ್ತು ಬರ್ತಾ ಇದೆ ಅನ್ನೊದು ಆಧ್ಯಾತ್ಮ ಪಾಲಕರ ವಾದವಾಗಿದೆ.
ಒಂದ್ ವರ್ಷದಲ್ಲಿ 9 ದಿನ ಉಪವಾಸ. ಅದುವೇ 45 ವರ್ಷದಿಂದ ನಡೆಸಿಕೊಂಡು ಬರ್ತಾ ಇದ್ದಾರೆ. ಈ ಸತ್ಯ ಆಪ್ತ ವಲಯ ಬಿಟ್ಟ್ ಬೇರೆ ಯಾರಿಗೂ ತಿಳಿದಿರಲಿಲ್ಲ. ಆದ್ರೆ , ಈ ರಹಸ್ಯವೂ ಅಮೇರಿಕಾ ನೆಲದಲ್ಲಿ ಬೆಳಕಿಗೆ ಬಂತೂ.
2014 ಪ್ರಧಾನ ಮಂತ್ರಿ ನರೇಂದ್ರ ಮೋದಿ ವಿದೇಶ ಪ್ರವಾಸ ಕೈಗೊಂಡಿದ್ರು. ಅಂದಿನ ಅಮೇರಿಕಾ ಅಧ್ಯಕ್ಷ ಒರಾಕ್ ಒಬಾಮಾ ಖುದ್ದು ಔತಣ ಕೂಟ ಏರ್ಪಡಿಸಿದ್ರು, ಪಿಎಂ ಮೋದಿ ಆಹ್ವಾನಿತ ಅತಿಥಿಯಾಗಿದ್ರು . ಬಗೆ ಬಗೆಯ ಆಹಾರಗಳ ಖಾದ್ಯ ಸಿದ್ಧವಾಗಿತು ಅಮೇರಿಕಾ ಅಧ್ಯಕ್ಷ ಮೋದಿ ಅವರನ್ನ ಆಹಾರ ಸ್ವೀಕರಿಸಲು ಕೇಳಿಕೊಂಡ್ರು , ಆದ್ರೆ ನರೇಂದ್ರ ಮೋದಿ ಸೌಹರ್ಯಯುತವಾಗಿಯೇ ಈ ಪ್ರಸ್ತಾಪವನ್ನ ತಳ್ಳಿ ಹಾಕಿ ತಮ್ಮ ಉಪವಾಸವನ್ನ ಬಿಚ್ಚಿಟ್ಟರು. ಕಳೆದ 33 ವರ್ಷದಿಂದ ದುರ್ಗಾ ದೇವಿಯ ಆರಾಧನೆ ಮಾಡುತ್ತಿದು , ನವರಾತ್ರಿ ವೇಳೆ 9 ದಿನಗಳ ಕಾಲ ಕೇವಲ ನಿಂಬೆ ಹಣ್ಣಿನ ರಸ ಮಾತ್ರ ಸೇವಿಸುತ್ತಿನಿ ಎಂದು ಹೇಳಿದ್ರು , ಈ ವಿಚಾರ ಭಾರೀ ಚರ್ಚೆಗೆ ಗ್ರಾಸವಾಯ್ತು.
ಹಾಗಾದರೆ ಮೋದಿಗೆ ಇಷ್ಟು ದೊಡ್ಡ ಸಕ್ಸಸ್ ಕೊಟ್ಟ ಆಧ್ಯಾತ್ಮ ನಡೆ ಯಾವುದು? ಅದರ ಆಚರಣೆ ಎಷ್ಟು ಕಠಿಣವಾಗಿರುತ್ತದೆ , ಪಾಲನೆ ಹೇಗಿರುತ್ತದೆ ಅಂತಲೂ ತಿಳಿಯಬೇಕಿದೆ.
ನವರಾತ್ರಿ ಪೂಜೆಯಲ್ಲಿ ದುರ್ಗಾ ದೇವಿಯ ಭಿನ್ನ ರೂಪದ ಕಳಶ ಇರಿಸಿ 9 ದಿನಗಳು ಪೂಜಿಸಲಾಗುತ್ತದೆ. ಪ್ರತಿನಿತ್ಯ ಉಪವಾಸ , ನಿಗದಿತ ವರ್ಣದ ವಸ್ತ್ರ ಖಾದ್ಯಗಳ ದಾನ ಪ್ರಸಾದ ರೂಪದಲ್ಲಿ ನೀಡಬೇಕಾಗುತ್ತದೆ.
ಮೊದಲನೆಯ ದಿನ ದುರ್ಗಾ ದೇವಿಯ ಶೈಲಪುತ್ರಿ ರೂಪಕ್ಕೆ ಪೂಜೆ ಮಾಡಲಾಗುತ್ತದೆ . ಅದುವೇ ಕೇಸರಿ ಬಣ್ಣದ ವಸ್ತ್ರ ಧರಿಸಿ ಖಾರಾ ಪೊಂಗಲ್ ಪ್ರಸಾದವನ್ನ ಪೂಜೆ ನಂತರ ದೇವಿಗೆ ನೈವೇದ್ಯ ಮಾಡಬೇಕಾಗುತ್ತದೆ . ಈ ಪೂಜೆಯಿಂದ ಸೂರ್ಯಯ ಕೃಪೆಗೆ ಪಾತ್ರರಾಗುತ್ತಾರೆ. ಈ ದಿನದ ಪೂಜೆಯಿಂದ ಲೀಗಲ್ ಸಮಸ್ಯೆಗಳು ಮಾಯವಾಗುತ್ತೆ
ಎರಡನೆ ದಿನದ ಪೂಜೆಗೆ ಬ್ರಹ್ಮಚಾರಿಣಿ ದೇವಿ ರೂಪಕ್ಕೆ ಬಿಳಿ ಬಣ್ಣದ ವಸ್ತ್ರ ಧರಿಸಿ ಚಿತ್ರಾನ್ನ ಇಲ್ಲವೇ ಪುಳಿಯೋಗರೆ ನೈವೇದ್ಯ ಮಾಡಬೇಕಾಗುತ್ತದೆ. ಇದರ ಫಲವಾಗಿ ಶನಿ ದೇವನ ಅನುಗ್ರಹ ಫಿಕ್ಸ್ . ಇದರ ವರವೂ ಅಷ್ಟೇ ಹಣವೋ ಹಣ .. ಕಾಂಚಾಣ ಜೋರಾಗುತ್ತದೆ .
ಮೂರನೆ ದಿನದ ಪೂಜೆಗೆ ಚಂದ್ರಾ ಘಂಟಾ ರೂಪಕ್ಕೆ ಕೆಂಪು ವಸ್ತ್ರ ಧರಿಸಿ ಕೊಬ್ಬರಿ ಪಾಯಸ , ಕೊಬ್ಬರಿ ಅನ್ನ ಪ್ರಸಾದ ನೈವೇದ್ಯ ಮಾಡಿ ಪೂಜೆ ನೆರವೇರಿಸಿ ದಾನ ಮಾಡಬೇಕು . ಇದರ ಫಲವಾಗಿ ಚಂದ್ರನ ಆರ್ಶಿವಾದ ದೊರಕಿ ಬುದ್ಧಿ ಶಕ್ತಿ , ತಾಳ್ಮೆ ನಿಮ್ಮದಾಗಲಿದೆ
ನಾಲ್ಕನೆ ದಿನದ ಕೂಷ್ಮಾಂಡ ದೇವಿ ರೂಪಕ್ಕೆ ನೀಲಿ ವಸ್ತ್ರ ಧರಿಸಿ ಮದ್ಯದಲ್ಲಿ ರಂದ್ರ ಮಾಡದ ಉದ್ದಿನ ವಡೆ ಇರಿಸಿ ದಾನ ಮಾಡಬೇಕು ಆಗ ನೋಡಿ ಗುರು ಗ್ರಹ ಒಲಿದು ಆತ್ಮವಿಶ್ವಾಸ (self confidence) ಜಾಣತನ ಆರಿಸಿ ಬರಲಿದೆ .
ಐದನೆ ದಿನದ ತಾಯಿ ಸ್ಕಂದಾ ಮಾತಾಗೆ ಹಳದಿ ವಸ್ತ್ರ ಹಾಕಿಕೊಂಡು ಮೊಸರನ್ನ , ಮೊಸರು ವಡೆ ಮಾಡಿ ಪೂಜೆ ಮುಗಿಸಿ ದಾನ ಮಾಡಬೇಕು ಆಗ ಮಂಗಳ ಗ್ರಹದ ಆರ್ಶಿವಾದ ಸಿಕ್ಕಿ ಇಚ್ಛಾ ಶಕ್ತಿ , ಹುಮ್ಮಸ್ಸು ಹೆಚ್ಚಲಿದೆ.
ಆರನೆ ದಿನದ ಪೂಜೆಯೂ ಕಾತ್ಯಾಯಿನಿ ದೇವಿದಾಗಿದ್ದು, ಹಸಿರು ವಸ್ತ್ರ ಧರಿಸಿ ಕೇಸರಿ ಬಾತ್ - ಹೆಸರುಕಾಳು ಹುಸಲಿ ಮಾಡಿ ನೈವೇದ್ಯ ಹಾಗೂ ದಾನ ಮಾಡಬೇಕು ಆಗ ಶುಕ್ರ ಗ್ರಹ ಒಲಿದು ಸಂತೋಷ , ಉತ್ತಮ ವ್ಯಕ್ತಿತ್ವ ನಿಮ್ಮದಾಗಲಿದೆ .ಜೋಧಪುರದಲ್ಲಿ RSS ಅಂಗ ಸಂಸ್ಥೆಗಳ 3 ದಿನಗಳ ಸಮನ್ವಯ ಸಭೆ ಆರಂಭ: ಪ್ರಮುಖರು ಬಾಗಿ
ಏಳನೆ ದಿನದ ಕಾಳರಾತ್ರಿ ದೇವಿ ಪೂಜೆಗೆ ಗ್ರೇ ಕಲರ್ ಬಟ್ಟೆ ಧರಿಸಿ ಅನ್ನ , ತರಕಾರಿ ಹುಳಿ , ಅನ್ನ ಮಾಡಿ ದೇವರಿಗೆ ಇರಿಸಿ ದಾನ ಮಾಡಿದರೆ ನಿಮಗೆ ರಾಹು ಗ್ರಹದ ಕೃಪೆ ಸಿಗಲಿದೆ ಆದುವೇ ವೃತ್ತಿ , ವೈಯಕ್ತಿಕ ಬದುಕು ಎಲ್ಲ ಕಡೆ ವಿಜಯ , ಬಿಸಿನೆಸ್ ಡೆವಲಪ್ಮೆಂಟ್ ಸಿಗಲಿದೆ.WEET Cotton T-Shirt and Pyjama Set for Men,Night Wear for Men,Men's Pyjama Set 122
ಎಂಟನೆ ದಿನ ಮಹಾಗೌರಿಗೆ ಪರ್ಪಲ್ ಬಣ್ಣದ ವಸ್ತ್ರ ಧರಿಸಿ ಸಕ್ಕರೆ ಪೊಂಗಲ್ - ಬೆಲ್ಲದ ಪಾಯಸ ಮಾಡಿ ದಾನ ಮಾಡಿದರೆ ಸಾಕು ಬುಧ ಗ್ರಹ ಅನುಗ್ರಹ ನಿಮ್ಮ ಮೇಲೆ ಬೀಳಲಿದೆ. ಈ ಹಿಂದೆಯೇ ನಿಮಗೆ ಚಾಣಕ್ಷತೆ - ಕುತೂಹಲ ಗುಣ ಜಾಗೃತವಾಗಲಿದೆ.
ಒಂಬತ್ತು ದಿನದ ಪೂಜೆ ಅದುವೇ ಕಡೆಯ ದಿನ ಉಪವಾಸ ವ್ರತದ ದಿನವೂ ಸಿದ್ಧಿಧಾತ್ರಿಗೆ ನೀಡಬೇಕಾಗುತ್ತದೆ ಪಿಕಾಕ್ ಗ್ರೀನ್ ಡಾರ್ಕ್ ವಸ್ತ್ರ ಹಾಲು ಅನ್ನ - ಹಲ್ವಾ ನೈವೇದ್ಯ ಇಟ್ಟು ಮನಪೂರಕವಾಗಿ ಅಗತ್ಯ ಕಾಣುವವರಿಗೆ ದಾನ ಮಾಡಬೇಕಾಗುತ್ತದೆ . ಆಗ ನಿಮಗೆ ಕೇತು ಅನುಗ್ರಹ ಲಭಿಸಲಿದೆ. ಅಲ್ಲಿಗೆ ನೋಡಿ ತೀಕ್ಷ್ಣ ದೃಷ್ಟಿ , ಅನುಕಂಪ ಭಾವ, ವರ ಸಿಗಲಿದೆ ಹೀಗಂತ ಸಾಕಷ್ಟು ನಂಬಿಕೆಗಳಿವೆ.
ಯಶಸ್ಸು, ವರ ಸಿಗಲು ಇಷ್ಟು ದಿನ ಆಹಾರವೇ ಇಲ್ಲದೇ ಪೂಜಿಸಬೇಕಾಗುತ್ತದೆ . ಇದನ್ನೆ ಬರೋಬ್ಬರಿ 45 ವರ್ಷದಿಂದ ಮೋದಿ ತಪ್ಪದೇ ಪಾಲಿಸ್ತಾ ಬಂದಿದ್ದಾರೆ.
ಹೀಗಂತ 2014 ರಲ್ಲಿ ಒಬಾಮಾ ಔತಣ ಕೂಟ ಬಳಿಕವೇ ತಿಳಿಯಿತು. ಈ ವ್ರತವನ್ನ ಮೋದಿ ತಮ್ಮ 30 ವರ್ಷ ವಯಸ್ಸು ಇದ್ದಾಗ ಶುರು ಮಾಡಿದ್ದು, ಈಗ 45 ವರ್ಷದಿಂದ ಪಾಲಿಸ್ತಾ ಬಂದಿದ್ದಾರೆ.
ಈ ಸುದ್ದಿ ಬೆನ್ನಲೇ ಇದೆಲ್ಲ ಡೋಂಗಿ 9 ದಿನ ಆಹಾರ ಇಲ್ಲದೇ ಅಸಾಧ್ಯ ಎಂಬ ಟೀಕೆಗಳು ಜೋರಾಗಿದೆ. ಹೌದು , ನಿಜಕ್ಕೂ 9 ದಿನ ಉಪವಾಸ ಕೇವಲ ಫಲಾಹಾರದಿಂದ ಸಾಧ್ಯನಾ ಅಂತಾ ಡೌಟಿಗೆ ವೈದ್ಯರನ್ನು ಕೇಳಿದರೂ ಸಾಧ್ಯ ಎನ್ನುತ್ತಾರೆ.
ಗಾಂಧೀಜಿ ಸಹ 21 ದಿನ ಸ್ವಾತಂತ್ರ್ಯಕ್ಕಾಗಿ ಉಪವಾಸ ಇದ್ದ ದಾಖಲೆಗಳು ಇದೆ. ಹೀಗೆ ನಂಬಿಕೆ ಟೀಕೆ ಮಧ್ಯೆ ಮೋದಿ ಸಕ್ಸಸ್ ಫಾಲೋವರ್ ಗಳು ಉಪವಾಸ ವ್ರತ ದಾರಿ ಹಿಡಿಯಲು ಯತ್ನಿಸಿದ್ರೆ , ಮತ್ತೊಂದೆಡೆ ಇದೇಲ್ಲ ಎಷ್ಟು ಸತ್ಯ ಸುಳ್ಳು ಎಂಬ ಚರ್ಚೆಗಳು ಈಗಲೂ ಹರಿದಾಡುತ್ತಿದೆ.
ನೋಡಿ ಮೋದಿ ಅವರು ಸಹ ಉಪವಾಸ ಮಾಡಿದ ಮೊದಲ ವರ್ಷನೇ ಪಿಎಂ ಆಗಲಿಲ್ಲ . ನಂಬಿಕೆ ಒಂದ್ ಕಡೆಯಾದರೆ ಮತ್ತೊಂದೆಡೆ ನಿರಂತರ ಪ್ರಯತ್ನ 45 ವರ್ಷಗಳಲ್ಲಿ ಅಂದರೆ 405 ದಿನದ ಉಪವಾಸ ವ್ರತ ಅವರನ್ನ ಪ್ರಧಾನ ಮಂತ್ರಿ ಮಾಡಿಸಿದೆ.