Skip to main content
ವಿಡಿಯೋ
1/2
crime

ಧರ್ಮಸ್ಥಳ ಮಾಸ್ಕ್ ಮ್ಯಾನ್ ಕೇಸ್: ಚಿನ್ನಯ್ಯನ 15 ದಿನಗಳ ಎಸ್ಐಟಿ ಕಸ್ಟಡಿ ಇಂದು ಅಂತ್ಯ!

By Pavitra Ganapathi Baradavalli
ಧರ್ಮಸ್ಥಳ ಮಾಸ್ಕ್ ಮ್ಯಾನ್ ಕೇಸ್: ಚಿನ್ನಯ್ಯನ 15 ದಿನಗಳ ಎಸ್ಐಟಿ ಕಸ್ಟಡಿ ಇಂದು ಅಂತ್ಯ!

 ಧರ್ಮಸ್ಥಳ ಕೇಸ್‌ಗೆ ಹೊಸ ತಿರುವು! ಚಿನ್ನಯ್ಯನ ಎಸ್ಐಟಿ ಕಸ್ಟಡಿ ಇಂದು ಮುಕ್ತಾಯ, ನ್ಯಾಯಾಂಗ ಬಂಧನ ಸಾಧ್ಯತೆ ಹೆಚ್ಚಾಗಿದೆ. ಮಾಸ್ಕ್ ಮ್ಯಾನ್ ಚಿನ್ನಯ್ಯ ವಿಚಾರಣೆ ನಂತರ ತಲೆಬುರುಡೆ ಪ್ರಕರಣದಲ್ಲಿ ಹೊಸ ಹೆಸರುಗಳು ಬಹಿರಂಗವಾಗುವ ಲಕ್ಷಣಗಳು ಸ್ಪಷ್ಟವಾಗುತ್ತಿವೆ.

ಧರ್ಮಸ್ಥಳ ಕೇಸ್‌ನಲ್ಲಿ ಪ್ರಮುಖ ಪಾತ್ರಧಾರಿಯಾಗಿರುವ ಮಾಸ್ಕ್ ಮ್ಯಾನ್ ಚಿನ್ನಯ್ಯನ ಎಸ್ಐಟಿ ಕಸ್ಟಡಿ ಇಂದು ಮುಕ್ತಾಯವಾಗುತ್ತಿದೆ. ಕಳೆದ 15 ದಿನಗಳಿಂದ ಎಸ್ಐಟಿ ವಶದಲ್ಲಿದ್ದ ಚಿನ್ನಯ್ಯನನ್ನು ಇಂದು ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸಲಾಗುವುದು. ಅವನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ.

ಆಗಸ್ಟ್ 23ರಂದು ಚಿನ್ನಯ್ಯನನ್ನು ಎಸ್ಐಟಿ ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಿತ್ತು. ಮೊದಲ ಹಂತದಲ್ಲಿ 12 ದಿನಗಳ ಕಸ್ಟಡಿ ನೀಡಲಾಗಿತ್ತು. ನಂತರ ಮೂರು ದಿನಗಳು ಹೆಚ್ಚುವರಿಯಾಗಿ ಕೋರ್ಟ್ ಅನುಮತಿ ನೀಡಿತು. ಈ ಮೂಲಕ ಒಟ್ಟು 15 ದಿನಗಳ ಪೊಲೀಸ್ ಕಸ್ಟಡಿ ಇಂದು ಮುಗಿಯುತ್ತಿದೆ.ಇದನ್ನೂ ಓದಿ: GST ಸುಧಾರಣೆಗಳನ್ನು ದುರ್ಬಲಗೊಳಿಸಬೇಡಿ...ಲಹರ್‌ ಸಿಂಗ್ ಸಿರೋಯಾ ಸೂಚನೆ..!


ಇಂದು ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಚಿನ್ನಯ್ಯನ ವೈದ್ಯಕೀಯ ತಪಾಸಣೆ ನಡೆಯಲಿದೆ. ನಂತರ ಅವನನ್ನು ನ್ಯಾಯಾಲಯಕ್ಕೆ ಕರೆದೊಯ್ಯಲಾಗುವುದು. ಕೋರ್ಟ್‌ನಲ್ಲಿ ವಿಚಾರಣೆ ನಡೆದ ಬಳಿಕ ಅವನ ಭವಿಷ್ಯ ತೀರ್ಮಾನವಾಗಲಿದೆ.

ಈ ನಡುವೆ ಧರ್ಮಸ್ಥಳದ ತಲೆಬುರುಡೆ ಪ್ರಕರಣದಲ್ಲಿ ಹೊಸ ತಿರುವುಗಳು ಕಂಡುಬರುತ್ತಿವೆ. ದೂರುದಾರ ಜಯಂತ್ ಎಸ್ಐಟಿ ಮುಂದೆ ಬಾಯ್ಬಿಟ್ಟು, ತಲೆಬುರುಡೆ ತಂದುಕೊಟ್ಟವರು ಗಿರೀಶ್ ಮಟ್ಟಣ್ೞನವರ್ ಎಂದು ಹೇಳಿಕೆ ನೀಡಿದ್ದಾನೆ. ಇದರ ಪರಿಣಾಮವಾಗಿ ಪ್ರಕರಣದಲ್ಲಿ ಇನ್ನಷ್ಟು ಮಾಹಿತಿ ಹೊರಬರುತ್ತಿದೆ.ಇದನ್ನೂ ಓದಿ: ಈ ಸಂದರ್ಶನವು ಸೆಪ್ಟೆಂಬರ್ 5, 2025 ರಂದು ನಡೆದಿದ್ದು, GST ಸುಧಾರಣೆಗಳು, ಜಾಗತಿಕ ವ್ಯಾಪಾರ ಸವಾಲುಗಳು ಮತ್ತು ಭಾರತದ ಆರ್ಥಿಕ ನೀತಿಗಳ ಕುರಿತಾದ ಚರ್ಚೆಯನ್ನು ಒಳಗೊಂಡಿತ್ತು.

ಕೊಲೆಯಾದ ಸೌಜನ್ಯನ ಮಾವ ವಿಠಲ ಗೌಡನನ್ನು ಎಸ್ಐಟಿ ವಿಚಾರಣೆಗೆ ಕರೆದಿದೆ. ಜೊತೆಗೆ ಕೇರಳ ಮೂಲದ ಯೂಟ್ಯೂಬರ್ ಮನಾಫ್‌ಗೂ ನೊಟೀಸ್ ನೀಡಲಾಗಿದೆ. ಆರಂಭದಿಂದಲೇ ಮನಾಫ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಈ ಪ್ರಕರಣದ ಕುರಿತು ಹಲವು ಕಥೆಗಳನ್ನು ಪ್ರಕಟಿಸಿದ್ದಾನೆ.ಇದನ್ನೂ ಓದಿ: ಟಿಯಾಂಜಿನ್‌ನಲ್ಲಿ ಮೋದಿಯ ರಾಜತಾಂತ್ರಿಕ ಚಾಣಾಕ್ಷತನ: ಟ್ರಂಪ್‌ನ ಸುಂಕ ಒತ್ತಡಕ್ಕೆ ಭಾರತದ ತಿರುಗೇಟು..!


ಯೂಟ್ಯೂಬರ್ ಸುಮಂತ್ ನೀಡಿರುವ ಮಾಹಿತಿಯ ಪ್ರಕಾರ, ಧರ್ಮಸ್ಥಳದ ವಿರುದ್ಧ ದೊಡ್ಡಮಟ್ಟದ ಷಡ್ಯಂತ್ರ ರೂಪಿಸಲಾಗಿದ್ದು, ಕೆಲವು ಯೂಟ್ಯೂಬರ್‌ಗಳಿಗೆ ಆರ್ಥಿಕ ನೆರವು ನೀಡಲಾಗಿದೆ. ತನಗೂ ಈ ಷಡ್ಯಂತ್ರವನ್ನು ಉತ್ತೇಜಿಸಲು ಆಫರ್ ಬಂದಿತ್ತು ಎಂದು ಆತ ಬಹಿರಂಗಪಡಿಸಿದ್ದಾನೆ. ಪ್ರಕರಣದಲ್ಲಿ ಪ್ರತಿದಿನ ಹೊಸ ಮಾಹಿತಿಗಳು ಹೊರಬರುತ್ತಿದ್ದು, ಎಸ್ಐಟಿ ತನಿಖೆ ಇನ್ನೂ ಮುಂದುವರಿದಿದೆ. ಇನ್ನಷ್ಟು ಜನರ ಹೆಸರಗಳು ಬಹಿರಂಗವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.Jockey 2401 Men's Super Combed Cotton Rich Full Sleeve Regular Fit Thermal Undershirt with Stay Warm Technology