Skip to main content
ವಿಡಿಯೋ
1/2
politics

ಸರ್ಕಾರಿ ಶಾಲೆ ಮಕ್ಕಳ ಹೆಸರಲ್ಲಿ ವಿನೂತನ ಪ್ರಯೋಗ;ಸರ್ಕಾರಿ ಶಾಲೆಗೆ ಸೇರಿಸುವ ಮಕ್ಕಳ ಪೋಷಕರಿಗೆ ಮಾತ್ರ ಗ್ಯಾರಂಟಿ ಯೋಜನೆ…!!

By Pavitra Ganapathi Baradavalli
ಸರ್ಕಾರಿ ಶಾಲೆ ಮಕ್ಕಳ ಹೆಸರಲ್ಲಿ ವಿನೂತನ ಪ್ರಯೋಗ;ಸರ್ಕಾರಿ ಶಾಲೆಗೆ ಸೇರಿಸುವ ಮಕ್ಕಳ ಪೋಷಕರಿಗೆ ಮಾತ್ರ ಗ್ಯಾರಂಟಿ ಯೋಜನೆ…!!

ತಮ್ಮ ಪ್ರತೀ ಮಕ್ಕಳನ್ನು ಸರ್ಕಾರಿ ಶಾಲೆಗೆ (Government School) ಸೇರಿಸುವವರಿಗೆ ಮಾತ್ರ ಗ್ಯಾರಂಟಿ ಯೋಜನೆ (Guarantee scheme) ಕೊಡಿ ಎಂದು ಶಾಸಕ ಕೆ.ಎಸ್.ಬಸವಂತಪ್ಪ (K.S Basavantappa) ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ದಾವಣಗೆರೆ: ತಮ್ಮ ಪ್ರತೀ ಮಕ್ಕಳನ್ನು ಸರ್ಕಾರಿ ಶಾಲೆಗೆ (Government School) ಸೇರಿಸುವವರಿಗೆ ಮಾತ್ರ ಗ್ಯಾರಂಟಿ ಯೋಜನೆ (Guarantee scheme) ಕೊಡಿ ಎಂದು ಶಾಸಕ ಕೆ.ಎಸ್.ಬಸವಂತಪ್ಪ (K.S Basavantappa) ಸರ್ಕಾರಕ್ಕೆ ಮನವಿ ಮಾಡಿದ್ದಾರೆ.ಇದನ್ನೂ ಓದಿ: ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರ ಹೇಳಿಕೆಗಳನ್ನು ಸ್ವಾಗತಿಸಿದ ಮೋದಿ: ಭಾರತ-ಅಮೆರಿಕ ಪಾಲುದಾರಿಕೆ ಇನ್ನು ಉತ್ತಮವಾಗಲಿದೆ


ದಾವಣಗೆರೆಯ (Davanagere) ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪೋಷಕರಿಗೆ ತಮ್ಮ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗೆ ಸೇರಿಸಿದರೆ ಮಾತ್ರ ಗ್ಯಾರಂಟಿ ಕೊಡ್ತಿವೆ ಎಂದು ಸರ್ಕಾರ ಘೊಷಿಸಬೇಕು. ಆಗ ಸರ್ಕಾರಿ ಶಾಲೆ ಮಕ್ಕಳ ಹಾಜರಾತಿ ಸಂಖ್ಯೆ ಹೆಚ್ಚಳ ಆಗುತ್ತದೆ ಎಂದಿದ್ದಾರೆ.ಇದನ್ನೂ ಓದಿ: “ಜೈ ಹಿಂದ್, ಜೈ ಕರ್ನಾಟಕ, ಜೈ ಹಿಂದೂ ಮುಸಲ್ಮಾನ್” ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ವಿಚಾರವಾಗಿ ಸರ್ಕಾರಕ್ಕೆ, ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಮುಖ್ಯಮಂತ್ರಿಗಳು ಕೆಲಸ ಮಾಡಿದರೆ ಸಾಕು, ಎಲ್ಲಿ 2000 ರೂ, ಹಣ, ವಿದ್ಯುತ್ ಬಿಲ್ ಕೈ ತಪ್ಪಿ ಹೋಗುತ್ತದೆ ಎಂಬ ಭಯ ಬರುತ್ತದೆ. ಭಯದಲ್ಲಾದರೂ ತಾಯಂದಿರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಾರೆ ಎಂದರು.ಇದನ್ನೂ ಓದಿ: ಚೀನಾ ಹೂಡಿಕೆ ನಿರ್ಬಂಧ ಸಡಿಲಿಕೆಗೆ ಭಾರತ ಸಮ್ಮತಿ...ಸೀತಾರಾಮನ್‌ನ ಸ್ಪಷ್ಟ ಷರತ್ತು!


ಯಾರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುತ್ತಾರೋ ಅಂತಹವರಿಗೆ ಗ್ಯಾರಂಟಿ ಯೋಜನೆ ಮೊದಲ ಆದ್ಯತೆಯಾಗಬೇಕು. ಈ ಮೂಲಕವಾದರೂ ಸರ್ಕಾರಿ ಶಾಲೆಗಳು ಉಳಿಯುವಂತಾಗಲಿ ಎಂದಿದ್ದಾರೆ.JUNEBERRY® Pure Cotton Oversized Drop Shoulder Brand Logo Typography Print Round-Neck Baggy Fit T-Shirt for Women (Available in Navy, Green & Pink Colors)