Skip to main content
ವಿಡಿಯೋ
politics

ಮಾಸ್ಕ್ ಮ್ಯಾನ್‌ ಚಿನ್ನಯ್ಯನನ್ನು ಮತ್ತೆ ಕಸ್ಟಡಿ ಪಡೆಯುವ ಅವಶ್ಯಕತೆ ಇಲ್ಲ: ಎಸ್ಐಟಿಗೆ ಏನು ಬೇಕೊ ಎಲ್ಲ ಮಾಹಿತಿ ಕೊಟ್ಟಿದ್ದಾನೆ

By Gireesh Vasishta
ಮಾಸ್ಕ್ ಮ್ಯಾನ್‌ ಚಿನ್ನಯ್ಯನನ್ನು ಮತ್ತೆ ಕಸ್ಟಡಿ ಪಡೆಯುವ ಅವಶ್ಯಕತೆ ಇಲ್ಲ: ಎಸ್ಐಟಿಗೆ ಏನು ಬೇಕೊ ಎಲ್ಲ ಮಾಹಿತಿ ಕೊಟ್ಟಿದ್ದಾನೆ

ಈ ಹಿಂದೆ ಚಿನ್ನಯ್ಯನನ್ನು ನ್ಯಾಯಾಂಗ ಬಂಧನದಲ್ಲಿರಿಸಿ ಅವನನ್ನು ಎಸ್ಐಟಿ ವಿಚಾರಣೆ ನಡೆಸುತ್ತಿತ್ತು ಈ ಹಿನ್ನೆಲೆಯಲ್ಲಿ ಮಾಸ್ಕ್ ಮ್ಯಾನ್ ಚಿನ್ನಯ್ಯ ತಾನು ಹೂತಿಟ್ಟಿದ್ದೆ ಎನ್ನಲಾದ ಹಲವಾರು ಜಾಗಗಳನ್ನು ತೋರಿಸಿ ಅಲ್ಲಿ ಆಗೆಸುವ ಕೆಲಸವನ್ನು ಮಾಡಿದ್ದ ಆದರೆ ಅಲ್ಲಿ ಯಾವುದೇ ಅನುಮಾನಾಸ್ಪದವಾದ ಮೂಳೆಗಳು ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಎಸ್ಐಟಿಗೆ ಚಿನ್ನಯ್ಯನನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಬೇಕಾಗಿ ಬಂದಿತ್ತು.

ಧರ್ಮಸ್ಥಳ ಕೇಸ್‌ಗೆ ಸಂಬಂಧಿಸಿದ ವಿಚಾರವಾಗಿ ಹಿಂದೆ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ವಶಕ್ಕೆ ಪಡೆಯಲಾಗಿತ್ತು. ಈಗ ಮಾಸ್ಕ್ ಮ್ಯಾನ್ ಚಿನ್ನಯ್ಯನನ್ನು ಮತ್ತೆ ವಿಚಾರಣೆಗೆ ಒಳಪಡಿಸುವ ಅವಶ್ಯಕತೆ ಇಲ್ಲ ಎಂದು SIT ತಿಳಿಸಿದೆ ಎಂದು ತಿಳಿದುಬಂದಿದೆ. ಏಕೆಂದರೆ ಮಾಸ್ಕ್ ಮ್ಯಾನ್ ಚಿನ್ನಯ್ಯ ನಡೆದ ಎಲ್ಲಾ ಅಸಲಿ ವಿಚಾರವನ್ನು ಎಸ್ಐಟಿ ಅಧಿಕಾರಿಗಳಿಗೆ ತಿಳಿಸಿರುವ ಹಿನ್ನೆಲೆಯಲ್ಲಿ ಚಿನ್ನಯ್ಯನನ್ನು ಮುಂದಿನ ಹಂತದ ತನಿಖೆಗೆ ಕಳಿಸುವುದಾಗಿ sit ಹೇಳಿದ್ದು ಇನ್ನು ಅವನ ಅವಶ್ಯಕತೆ ಸದ್ಯಕ್ಕೆ ನಮಗಿಲ್ಲ ಎಂದು ತಿಳಿಸಿದೆ.

ನನ್ನನ್ನು ಬಳಸಿಕೊಂಡು ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರಲು ಷಡ್ಯಂತ್ರ ಮಾಡಿದ್ದರು ಮತ್ತು ವಿಚಾರದ ಜೊತೆ ಇನ್ನೂ ಹಲವು ವಿಚಾರಗಳನ್ನು ವಿಚಾರಣೆ ವೇಳೆ ಎಸ್ಐಟಿಗೆ ಚಿನ್ನಯ್ಯ ಹೇಳಿಕೆ ನೀಡಿದ್ದಾನೆ. ಹೀಗಾಗಿ ಯಾರು ಷಡ್ಯಂತ್ರ ಮಾಡಿದ್ದಾರೆಂದು ಎಸ್ಐಟಿಗೆ ಚಿನ್ನಯ್ಯ ಮಾಹಿತಿ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ.TRASE Block Heels Sandals For Women, Dusky Stylish & Comfortable Footwear

ಈ ಹಿಂದೆ ಚಿನ್ನಯ್ಯನನ್ನು ನ್ಯಾಯಾಂಗ ಬಂಧನದಲ್ಲಿರಿಸಿ ಅವನನ್ನು ಎಸ್ಐಟಿ ವಿಚಾರಣೆ ನಡೆಸುತ್ತಿತ್ತು ಹಿನ್ನೆಲೆಯಲ್ಲಿ ಮಾಸ್ಕ್ ಮ್ಯಾನ್ ಚಿನ್ನಯ್ಯ ತಾನು ಹೂತಿಟ್ಟಿದ್ದೆ ಎನ್ನಲಾದ ಹಲವಾರು ಜಾಗಗಳನ್ನು ತೋರಿಸಿ ಅಲ್ಲಿ ಆಗೆಸುವ ಕೆಲಸವನ್ನು ಮಾಡಿದ್ದ ಆದರೆ ಅಲ್ಲಿ ಯಾವುದೇ ಅನುಮಾನಾಸ್ಪದವಾದ ಮೂಳೆಗಳು ಸಿಗಲಿಲ್ಲ. ಹಿನ್ನೆಲೆಯಲ್ಲಿ ಎಸ್ಐಟಿಗೆ ಚಿನ್ನಯ್ಯನನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಬೇಕಾಗಿ ಬಂದಿತ್ತು.ಧರ್ಮಸ್ಥಳ ಕೇಸ್‌ ವಿಚಾರ: ಬುರುಡೆ ಗ್ಯಾಂಗ್‌ಗೆ ಕೇರಳ ಕಮ್ಯುನಿಸ್ಟ್‌ ರಾಜಕಾರಣಿಯ ನಂಟು ಆರೋಪ: ಇಲ್ಲಿದೆ ಮಾಹಿತಿ

ಆದರೆ ಹಲವಾರು ಪಕ್ಷದ ಮುಖಂಡರುಗಳು ಚಿನ್ನಯ್ಯ ಹೇಳಿದ ಮಾತನ್ನು ನೀವು ಹೇಗೆ ಕೇಳಿದ್ದೀರಿ ಎಂದು ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದರು. ಆದರೂ ಇದರ ಬಗ್ಗೆ ತಲೆಕೆಡಿಸಿಕೊಳ್ಳದ ಕರ್ನಾಟಕ ರಾಜ್ಯ ಸರ್ಕಾರ ಎಸ್ಐಟಿ ತನಿಖೆಯ ನಂತರವೇ ಸತ್ಯ ಹೊರಬರಲಿದೆ ಅಲ್ಲಿಯವರೆಗೂ ಕಾಯೋಣ ಎಂದಿತ್ತು ಇದಕ್ಕೆ ಗೃಹ ಸಚಿವ ಪರಮೇಶ್ವರ ಅವರು ಸಹ ಮಹಿತಿ ಸಮ್ಮತಿಸಿದ್ದರು.