ಬೆಂಗಳೂರು: ಇಂದು ಆಗಸದಲ್ಲಿ ರಕ್ತ ಚಂದ್ರ ಗ್ರಹಣ ಗೋಚರವಾಗುತ್ತಿದ್ದು, ಸುಮಾರು ಐದು ಗಂಟೆಗಳ ಕಾಲ ಚಂದ್ರನ ಬೆಳಕಿಗೆ ಭೂಮಿ ಅಡ್ಡ ಬರಲಿದೆ. ಇಂದಿನ ರಕ್ತ ಚಂದ್ರ ನೋಡಲಿಕ್ಕೆ ಭಾರತದಲ್ಲೂ ಗೋಚರವಾಗಲಿದ್ದು, ಆಗಸದಂಗಳದಲ್ಲಿ ಅಚ್ಚರಿಯ ವೀಕ್ಷಣೆಗೆ ಭೂಮಿ ಇಂದು ಸಾಕ್ಷಿಯಾಗಲಿದೆ. ಗ್ರಹಣದ ಹಿನ್ನೆಲೆ ರಾಜ್ಯದ ಹಲವು ದೇವಾಲಯಗಳು ಸಂಪೂರ್ಣ ಬಂದ್ ಆಗಲಿವೆ. ಹಲವು ದೇವಾಲಯಗಳಲ್ಲಿ ದೇಗುಲಗಳ ದರ್ಶನ ನಿಷೇಧಿಸಿದ್ದು, ಪೂಜೆ ಮತ್ತು ದರ್ಶನದ ಸಮಯದಲ್ಲಿ ಅಲ್ಪ ಮಟ್ಟದ ಬದಲಾವಣೆ ಉಂಟಾಗಲಿದೆ.ಇದನ್ನೂ ಓದಿ: IVF ಮಾಡಿಸಿಕೊಂಡು ಅವಳಿ ಮಕ್ಕಳ ನಿರೀಕ್ಷೆಯಿದ್ದ ನಟಿ ಭಾವನಗೆ ಶಾಕ್...ಒಂದು ಮಗು ಕಣ್ಣು ಬಿಡುವ ಮುನ್ನವೇ ಕೊನೆಯುಸಿರು!
ಬೆಂಗಳೂರಿನ ನೆಹರು ಪ್ಲಾನಿಟೋರಿಯಂನಲ್ಲಿ ಚಂದ್ರ ಗ್ರಹಣ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ಆಸಕ್ತರು ಚಂದ್ರ ಗ್ರಹಣವನ್ನು ಹೋಗಿ ವೀಕ್ಷಿಸಬಹುದಾಗಿದೆ.
ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಚಾಮುಂಡೇಶ್ವರಿ ದೇವಾಲಯವನ್ನು ರಾತ್ರಿ 9 ಗಂಟೆಗೆ ಬಂದ್ ಮಾಡಲಾಗುತ್ತದೆ. ಗ್ರಹಣ ಆರಂಭ ಮತ್ತು ಅಂತ್ಯ ಕಾಳದಲ್ಲಿ ವಿಶೇಷ ಪೂಜೆ ನಡೆಯಲಿದೆ ಎಂಬುದನ್ನು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದ್ದಾರೆ. ಈ ವೇಳೆ ಭಕ್ತರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಹಾಗೇ ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ ರಾತ್ರಿ 8 ಗಂಟೆಗೆ ಬಂದ್ ಆಗಲಿದೆ. ಹಾಗೂ ಕೊಪ್ಪಳದ ಹುಲಿಗೆಮ್ಮ, ಅಂಜನಾದ್ರಿ ದೇವಸ್ಥಾನಗಳು ಸಹ ಸಂಜೆ 5 ಗಂಟೆಗೆ ಬಂದ್ ಆಗಲಿವೆ.ಇದನ್ನೂ ಓದಿ: ಹುಬ್ಬಳ್ಳಿ:ಧಾರವಾಡ ಬಿಆರ್‌ಟಿಎಸ್‌ನಲ್ಲಿ ಸಂತೋಷ್ ಲಾಡ್: ಪ್ರಯಾಣಿಕರ ದೂರುಗಳ ಸ್ವೀಕಾರ, ಸಂಚಾರ ಸಮಸ್ಯೆಗಳ ಕುರಿತು ಚರ್ಚೆ
ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದಲ್ಲಿ ಮಧ್ಯಾಹ್ನ 3 ಗಂಟೆಗೆ ಅನ್ನದಾನ ಸ್ಥಗಿತಗೊಳ್ಳಲಿದೆ. ಉಡುಪಿ ಶ್ರೀಕೃಷ್ಣ ಮಠದಲ್ಲಿ ಬೆಳಿಗ್ಗೆ 10.30 ರಿಂದ 12 ಗಂಟೆ ಒಳಗೆ ಪ್ರಸಾದ ವ್ಯವಸ್ಥೆ ಮುಕ್ತಾಯ ಮಾಡಲಾಗುತ್ತದೆ. ಇನ್ನುಳಿದಂತೆ ಚಿಕ್ಕಬಳ್ಳಾಪುರದ ಪ್ರಮುಖ ದೇವಾಲಯಗಳು ಇಂದು ಸಂಜೆ 4 ಗಂಟೆಗೆ ಬಂದ್ ಆಗಲಿವೆ. ಕೋಲಾರ ಜಿಲ್ಲೆಯಲ್ಲಿ ಮಧ್ಯಾಹ್ನದ ಬಳಿಕ ದೇಗುಲಗಳ ಬಾಗಿಲಿಗೆ ಬೀಗ ಬೀಳಲಿದೆ. ಹಾಸನದ ಬೇಲೂರಿನ ಚನ್ನಕೇಶವ ದೇಗುಲ ಮಧ್ಯಾಹ್ನದ 3.30 ಕ್ಕೆ ಕ್ಲೋಸ್ ಆಗುತ್ತೆ. ಹಾಗೇ, ಮಡಿಕೇರಿಓಂಕಾರೇಶ್ವರ ದೇಗುಲ, ತಲಕಾವೇರಿ ಸನ್ನಿಧಿ ಸಂಜೆ 5 ಕ್ಕೆ ಬಂದ್ ಆಗಲಿದೆ.ಇದನ್ನೂ ಓದಿ: ರಾಜ್ಯ ಹಣಕಾಸು ಸಚಿವರ ಒಕ್ಕೂಟಕ್ಕೆ ನಿರ್ಮಲಾ ಸೀತಾರಾಮನ್ ಗೌರವ ಪತ್ರ...ಜನರ ಪರಿಗಣನೆಯೇ ಆದ್ಯತೆ!
ಇಂದು ಚಂದ್ರಗ್ರಹಣ ಹಿನ್ನೆಲೆ ಕುಮಟಾ ತಾಲೂಕಿನ ಗೋಕರ್ಣದಲ್ಲಿ ಆತ್ಮಲಿಂಗದ ದರ್ಶನದಲ್ಲಿ ಬದಲಾವಣೆ ಮಾಡಲಾಗಿದೆ. ಗ್ರಹಣ ಕಾಲದ ರಾತ್ರಿ 9.45 ರಿಂದ ಮಧ್ಯರಾತ್ರಿ 1.26 ರವರೆಗೆ ಆತ್ಮಲಿಂಗದ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಮಾದಪ್ಪಗೆ ಗ್ರಹಣ ತಟ್ಟಲ್ಲ, ಹೀಗಾಗಿ ಇಂದು ಎಂದಿನಂತೆಯೇ ದರ್ಶನ ಇರಲಿದೆ. ಗ್ರಹಣದ ಸಂದರ್ಭದಲ್ಲಿ ಸಾಮಾನ್ಯವಾಗಿ ಇತರೆ ದೇವಾಲಯಗಳು ಮುಚ್ಚಲ್ಪಡುತ್ತವೆ. ಆದರೆ, ಗ್ರಹಣದ ವೇಳೆ ಮಾದೇಶ್ವರನಿಗೆ ತ್ರಿಕಾಲ ಪೂಜೆ, ಭಕ್ತರಿಗೆ ದರ್ಶನ ಇರುತ್ತೆ. ಆ ಮೂಲಕ ಮಾದಪ್ಪನ ಬೆಟ್ಟದಲ್ಲಿ ವಿಶಿಷ್ಟ ಪರಂಪರೆ ಇದೆ. ಹೀಗೆ ರಾಜ್ಯದ ವಿವಿಧ ದೇವಾಲಯಗಳು ಸಂಪೂರ್ಣ ಬಂದ್ ಆಗಲಿವೆ.Noise Earbuds VS104 Truly Wireless Earbuds with 45H of Playtime, Quad Mic with ENC, Instacharge(10 Min=200 Min), 13Mm Driver, Low Latency, BT V5.2 (Charcoal Black)