Skip to main content
ವಿಡಿಯೋ
crime

ಮದರಾಸದಲ್ಲಿ ಬಾಲಕನ ಕೊಲೆ, ಲೈಂಗಿಕ ದೌರ್ಜನ್ಯ: ಐವರು ಸೀನಿಯರ್ ಬಾಲಕರ ಬಂಧನ..!

By Vinutha U
ಮದರಾಸದಲ್ಲಿ ಬಾಲಕನ ಕೊಲೆ, ಲೈಂಗಿಕ ದೌರ್ಜನ್ಯ: ಐವರು ಸೀನಿಯರ್ ಬಾಲಕರ ಬಂಧನ..!

ಮದರಾಸವು ಐವರು ಬಾಲಕರ ಹೆಸರನ್ನು ತನ್ನ ಪಟ್ಟಿಯಿಂದ ತೆಗೆದುಹಾಕಿದೆ. ಪೊಲೀಸರು ಆರೋಪಿಗಳ ಜನನ ಪ್ರಮಾಣಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣವನ್ನು ಮುಂದಿನ ವಿಚಾರಣೆಗಾಗಿ ಬಾಲ ನ್ಯಾಯ ಮಂಡಳಿಗೆ ವರ್ಗಾಯಿಸಲಾಗಿದೆ.

ಭುವನೇಶ್ವರ: ಒಡಿಶಾದ ನಯಾಗಢ ಜಿಲ್ಲೆಯ ಮದರಾಸದಲ್ಲಿ ಬಾಲಕನೊಬ್ಬನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಕೊಲೆ ಮಾಡಿರುವ ಘಟನೆ ನಡೆದಿದೆ. ಹತ್ಯೆಯಾದ ಬಾಲಕನ ಮೇಲೆ ಆತನ ಸೀನಿಯರ್‌ಗಳು ಕೆಲದಿನಗಳಿಂದ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದರು ಎಂದು ವರದಿಯಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ಐವರು ಅಪ್ರಾಪ್ತರನ್ನು ಬಂಧಿಸಲಾಗಿದೆ. ಕಟಕ್ ಜಿಲ್ಲೆಯ ಮೂಲದ ಬಾಲಕನು ನೀಲಪಲ್ಲಿ ಮದರಾಸದಲ್ಲಿ ವಿದ್ಯಾರ್ಥಿಯಾಗಿದ್ದನು. ಆತನ ತಂದೆಯ ದೂರಿನ ಆಧಾರದಲ್ಲಿ, ಮದರಾಸದ ಆವರಣದಲ್ಲಿರುವ ಪಾಳುಬಿದ್ದ ಸ್ನಾನಗೃಹದಲ್ಲಿ ಕೊಲೆ ಮಾಡಿ, ಶವವನ್ನು ಬಳಕೆಯಾಗದ ಸೇಫ್ಟಿ ಟ್ಯಾಂಕ್‌ಗೆ ಎಸೆಯಲಾಗಿತ್ತು, ಸೀನಿಯರ್‌ಗಳಿಂದ ಹಲ್ಲೆ ಮತ್ತು ದೌರ್ಜನ್ಯ ನಡೆದಿದೆ ಎಂದು ಹೇಳಿಕೆ ನೀಡಿದ್ದಾರೆ.


ಆಗಸ್ಟ್ 31ರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಇಬ್ಬರು ಸೀನಿಯರ್‌ಗಳು ಬಾಲಕನ ಮೇಲೆ ನಿರಂತರವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಬಾಲಕ ಪ್ರಜ್ಞೆ ಕಳೆದುಕೊಂಡಿದ್ದಾನೆ. ಆತ ಸತ್ತಿದ್ದಾನೆಂದು ಭಾವಿಸಿ, ಆರೋಪಿಗಳು ಶವವನ್ನು ಖಾಲಿ ಸೇಫ್ಟಿ ಟ್ಯಾಂಕ್‌ಗೆ ತಳ್ಳಿದ್ದಾರೆ. ಆದರೆ, ಆ ರಾತ್ರಿ ಬಾಲಕ ಟ್ಯಾಂಕ್‌ನಿಂದ ಹೊರಬರಲು ಪ್ರಯತ್ನಿಸಿ ಹೇಗೋ ಹೊರಗಡೆ ಬಂದಿದ್ದಾನೆ. ಸೆಪ್ಟೆಂಬರ್ 2ರಂದು ಇಬ್ಬರು ಸೀನಿಯರ್‌ಗಳು ಬಾಲಕನನ್ನು ಪುಸಲಾಯಿಸಿ ಮತ್ತೆ ಆ ಸ್ಥಳಕ್ಕೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ, ಮೂವರು ಜೊತೆ ಸೇರಿ ಬಾಲಕನ ಮೇಲೆ ಮತ್ತೊಮ್ಮೆ ಹಲ್ಲೆ ನಡೆಸಿ, ಕತ್ತು ಹಿಸುಕಿ ಕೊಂದು, ಶವವನ್ನು ಸೇಫ್ಟಿ ಟ್ಯಾಂಕ್‌ಗೆ ಎಸೆದು ಐವರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಫೋರೆನ್ಸಿಕ್ ತಂಡವು ಘಟನಾ ಸ್ಥಳದಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಆರೋಪಿಗಳ ಕೃತ್ಯವನ್ನು ದೃಢಪಡಿಸಿವೆ.

ಈ ಭಾರಿಯ ದಸರಾದಲ್ಲಿ ಮೂಡಲಿದೆ ಲೋಹದ ಹಕ್ಕಿಗಳ ಕಲರವ: ಕೇಂದ್ರ ಸರ್ಕಾರದಿಂದ ಏರ್‌ ಶೋಗೆ ಅಸ್ತು..!!

12 ರಿಂದ 15 ವರ್ಷದೊಳಗಿನ ಆರೋಪಿಗಳು, ಬಂಧಿತ ಐವರು ಅಪ್ರಾಪ್ತರು 12 ರಿಂದ 15 ವರ್ಷ ವಯಸ್ಸಿನವರಾಗಿದ್ದಾರೆ. ಇವರ ವಿರುದ್ಧ ಮಕ್ಕಳ ಲೈಂಗಿಕ ಅಪರಾಧ ತಡೆ ಕಾಯ್ದೆ (POCSO), 2012 ಮತ್ತು ಭಾರತೀಯ ನ್ಯಾಯ ಸಂಹಿತೆ, 2023ರ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳು ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಮದರಾಸವು ಐವರು ಬಾಲಕರ ಹೆಸರನ್ನು ತನ್ನ ಪಟ್ಟಿಯಿಂದ ತೆಗೆದುಹಾಕಿದೆ. ಪೊಲೀಸರು ಆರೋಪಿಗಳ ಜನನ ಪ್ರಮಾಣಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣವನ್ನು ಮುಂದಿನ ವಿಚಾರಣೆಗಾಗಿ ಬಾಲ ನ್ಯಾಯ ಮಂಡಳಿಗೆ ವರ್ಗಾಯಿಸಲಾಗಿದೆ.