Skip to main content
ವಿಡಿಯೋ
1/2
local

ಈ ಭಾರಿಯ ದಸರಾದಲ್ಲಿ ಮೂಡಲಿದೆ ಲೋಹದ ಹಕ್ಕಿಗಳ ಕಲರವ: ಕೇಂದ್ರ ಸರ್ಕಾರದಿಂದ ಏರ್‌ ಶೋಗೆ ಅಸ್ತು..!!

By Pavitra Ganapathi Baradavalli
ಈ ಭಾರಿಯ ದಸರಾದಲ್ಲಿ ಮೂಡಲಿದೆ ಲೋಹದ ಹಕ್ಕಿಗಳ ಕಲರವ: ಕೇಂದ್ರ ಸರ್ಕಾರದಿಂದ ಏರ್‌ ಶೋಗೆ ಅಸ್ತು..!!

ಈ ಬಾರಿಯ ನಾಡಹಬ್ಬ ದಸರಾ ಮಹೋತ್ಸವದಲ್ಲಿ ವೈಮಾನಿಕ ಪ್ರದರ್ಶನ (ಏರ್‌ ಶೋ) ನಡೆಸಲು ಕೇಂದ್ರ ಸರಕಾರ ಅನುಮತಿ ನೀಡಿದ್ದು, ಎರಡು ದಿನ ಏರ್‌ ಶೋ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿದೆ. ದಸರಾ ಸಂಭ್ರಮಕ್ಕೆ ಇನ್ನು 15 ದಿನ ಬಾಕಿ ಇದೆ.

ಮೈಸೂರು: ಬಾರಿಯ ನಾಡಹಬ್ಬ ದಸರಾ ಮಹೋತ್ಸವದಲ್ಲಿ ವೈಮಾನಿಕ ಪ್ರದರ್ಶನ (ಏರ್ಶೋ) ನಡೆಸಲು ಕೇಂದ್ರ ಸರಕಾರ ಅನುಮತಿ ನೀಡಿದ್ದು, ಎರಡು ದಿನ ಏರ್ಶೋ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿದೆ.

ದಸರಾ ಸಂಭ್ರಮಕ್ಕೆ ಇನ್ನು 15 ದಿನ ಬಾಕಿ ಇದೆ. ಈಗಾಗಲೇ ಸಿದ್ಧತೆಗಳು ಭರದಿಂದ ಸಾಗಿವೆ. ಬಾರಿಯ ದಸರಾವನ್ನು ಅದ್ಧೂರಿ ಜತೆಗೆ ಅಚ್ಚುಕಟ್ಟಾಗಿ ಆಚರಣೆ ಮಾಡಬೇಕೆಂದು ಸರಕಾರ ನಿರ್ಧಾರ ಮಾಡಿದ್ದು, ಎರಡು ವರ್ಷಗಳ ಬಳಿಕ ಮತ್ತೆ ಏರ್ಶೋ ನಡೆಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.ಇದನ್ನೂ ಓದಿ: ಪ್ರಜ್ವಲ್ ರೇವಣ್ಣಗೆ ಜೈಲಿನಲ್ಲಿ ಗ್ರಂಥಾಲಯ ಸಹಾಯಕ ಕೆಲಸ: ತಿಂಗಳಿಗೆ ₹5,250 ಕೂಲಿ..!


ದಸರಾ ಮಹೋತ್ಸವಕ್ಕೆ ಮತ್ತಷ್ಟು ಮೆರುಗು ನೀಡಲು ಸ್ವತಃ ಸಿಎಂ ಸಿದ್ದರಾಮಯ್ಯ ಮುಂದಾಗಿದ್ದಾರೆ. ದಸರಾದಲ್ಲಿ ಏರ್ಶೋ ಪ್ರದರ್ಶನಕ್ಕೆ ಚಿಂತನೆ ನಡೆಸಿ ಕಳೆದ ತಿಂಗಳು ದೆಹಲಿಗೆ ತೆರಳಿದ್ದ ವೇಳೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ಸಿಂಗ್ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಮಾತುಕತೆ ಫಲವನ್ನು ನೀಡಿದ್ದು,  ರಾಜ್ಯದ ಬೇಡಿಕೆಯಾದ ಏರ್ಶೋಗೆ ಕೇಂದ್ರ ಸರಕಾರ ಒಪ್ಪಿಗೆ ಸೂಚಿಸಿದೆ.ಇದನ್ನೂ ಓದಿ: ಆಲಮಟ್ಟಿ ಜಲಾಶಯ ತುಂಬಿದ ಸಂತಸ: ರೈತರಿಗೆ ಪರಿಹಾರ ಭರವಸೆ - ಸಿದ್ಧರಾಮಯ್ಯ..!

ಹೀಗಾಗಿ ಬಾರಿಯ ದಸರಾ ಮತ್ತಷ್ಟು ಆಕರ್ಷಕವಾಗಿರಲಿದೆ. ಜತೆಗೆ ಎರಡು ವರ್ಷಗಳ ಬಳಿಕ ಲೋಹದ ಹಕ್ಕಿಗಳ ಚಿತ್ತಾರವನ್ನು ಸಾರ್ವಜನಿಕರು ಕಣ್ತುಂಬಿಕೊಳ್ಳಬಹುದಾಗಿದೆ. ಸೆಪ್ಟೆಂಬರ್‌ 27ರಂದು ನಗರದ ಬನ್ನಿಮಂಟಪದ ಮೈದಾನದಲ್ಲಿ ಏರ್ಶೋ ನಡೆಯಲಿದ್ದು, ಮತ್ತೊಂದು ದಿನ ಯಾವಾಗ ಎಂಬುದನ್ನು  ಜಿಲ್ಲಾಡಳಿತ ಇನ್ನೂ ದಿನಾಂಕವನ್ನು ನಿಗಧಿ ಮಾಡಿಲ್ಲ.ಇದನ್ನೂ ಓದಿ: ಟೆಲಿಫೋನ್‌ ಕದ್ದಾಲಿಕೆ ಪ್ರಕರಣ: IPS ಅಧಿಕಾರಿ ಅಲೋಕ್‌ ಕುಮಾರ್‌ ಅರ್ಜಿ CIT ಮೂರನೇ ನ್ಯಾಯಾಧೀಶರಿಗೆ ವರ್ಗಾವಣೆ

ವೈಮಾನಿಕ ಪ್ರದರ್ಶನವನ್ನು ಮೈಸೂರಿಗರು ಈವರೆಗೆ ಮೂರು ಬಾರಿ ಕಣ್ತುಂಬಿಕೊಂಡಿದ್ದಾರೆ. ಹಿಂದೆ 2023, 2019 ಹಾಗೂ 2017ರಲ್ಲಿ ಏರ್ಶೋ ದಸರಾದಲ್ಲಿ ನಡೆದಿತ್ತು. ಕಳೆದ ವರ್ಷ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರ್ಶೋ ಹಮ್ಮಿಕೊಳ್ಳಲಾಗಿತ್ತು. ಮೈಸೂರು ದಸರಾದಲ್ಲಿ ಡ್ರೋಣ್ಶೋ ನಡೆಸಲಾಗಿತ್ತು. ಎರಡು ಶೋ ನೋಡಲು ಸಾಕಷ್ಟು ಜನರು ಆಗಮಿಸಿದ್ದರು. ಆದರೆ, ಬಾರಿ ದಸರಾ ಸಂದರ್ಭದಲ್ಲಿ ಏರ್ಶೋ ಹಮ್ಮಿಕೊಳ್ಳಬೇಕೆಂಬುದು ಸರ್ಕಾರ ಚಿಂತನೆ ನಡೆಸಿತ್ತು. ಅದರಂತೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿರುವುದು ಸಾರ್ವಜನಿಕರಲ್ಲಿ ಮತ್ತಷ್ಟು ಖುಷಿ ನೀಡಿದೆ.

ಕಳೆದ ಬಾರಿ ದಸರಾದಲ್ಲಿ ಮೊದಲ ಭಾರಿಗೆ ಡ್ರೋನ್ಶೋ ನಡೆಸಲಾಗಿತ್ತು. ನಗರದ ಬನ್ನಿಮಂಟಪ ಮೈದಾನದಲ್ಲಿ ಸಾರ್ವಜನಿಕರು ಆಕಾಶದಲ್ಲಿ ಮೂಡಿದ ಡ್ರೋನ್ಚಿತ್ತಾರಗಳನ್ನು ಕಣ್ತುಂಬಿಕೊಂಡು ಸಂತಸಪಟ್ಟಿದ್ದರು. ಹಾಗಾಗಿ ಬಾರಿಯೂ ಡ್ರೋನ್ಶೋ ನಡೆಸಲು ಜಿಲ್ಲಾಡಳಿತ ತೀರ್ಮಾನಿಸಿದೆ. ಈಗಾಗಲೇ ಸೆಸ್ಕ್ವತಿಯಿಂದ ಅಗತ್ಯ ಸಿದ್ಧತೆಗಳೂ ನಡೆಯುತ್ತಿದೆ.ಇದನ್ನೂ ಓದಿ: ಧರ್ಮಸ್ಥಳ ಪ್ರಕರಣ, ದಸರಾ ವಿವಾದ - ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದ್ದೇನು ಗೊತ್ತಾ?


ಬಾರಿ 1500ಕ್ಕೂ ಹೆಚ್ಚು ಡ್ರೋನ್ಗಳನ್ನು ಬಳಸಿ ಆಕಾಶದಲ್ಲಿ 4 ದಿನಗಳ ಕಾಲ ಡ್ರೋನ್ಶೋ ನಡೆಸಲು ನಿರ್ಧರಿಸಲಾಗಿದೆ. ವಿವಿಧ ಪ್ರತಿಕೃತಿಗಳ ಬಿಂಬಗಳು ಶೋನಲ್ಲಿ ಮೂಡಿಬರಲಿದೆ. ಡ್ರೋನ್ಶೋಗೆ ಬಲ್ಬಗಳನ್ನು ಬಳಸಲಾಗುತ್ತದೆ. ಆಕಾಶದಲ್ಲಿ ಅದ್ಭುತ ಆಕೃತಿಗಳನ್ನು ಮೂಡಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಸೆ. 28, 29ರಂದು ಪ್ರಾಯೋಗಿಕ ಪ್ರದರ್ಶನ ನಡೆಯಲಿದೆ. . 1, 2ರಂದು ಡ್ರೋನ್ಶೋ ಪ್ರಮುಖ ಪ್ರದರ್ಶನ ಇರಲಿದೆ. ಡ್ರೋನ್ಶೋ ಜತೆಗೆ ಖ್ಯಾತ ಗಾಯಕರಿಂದ ಸಂಗೀತ ಸಂಜೆಯೂ ನಡೆಯಲಿದೆ, ಎಂದು ಸೆಸ್ಕ್ಎಂಡಿ ಕೆ.ಎಂ.ಮುನಿಗೋಪಾಲ್ರಾಜು ತಿಳಿಸಿದ್ದಾರೆ.ಇದನ್ನೂ ಓದಿ: ಶಾಸಕ VS ಸಂಸದ: ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಮಾನಹಾನಿ ದಾವೆ ಹೂಡಿದ ಸಂಸದ ಶಶಿಕಾಂತ್‌ ಸೆಂಥಿಲ್‌: ಬಳ್ಳಾರಿಯಲ್ಲಿ ಸೆಂಥಿಲ್‌ DC ಆಗಿದ್ದೆ ಕಾರಣವೇ? ಏನೀ ನಂಟು? ಇಲ್ಲಿದೆ ಮಾಹಿತಿ

ಡ್ರೋನ್ಶೋ ಹಾಗೂ ಇನ್ನಿತರ ಕಾರ‍್ಯಕ್ರಮಗಳಿಗೆ ಅಗತ್ಯ ಧ್ವನಿ ಮತ್ತು ಬೆಳಕಿನ ವ್ಯವಸ್ಥೆಯನ್ನು ಹಾಗೂ ಸಂಗೀತ ಸಂಜೆ, ಸಾಂಸ್ಕೃತಿಕ ಕಾರ‍್ಯಕ್ರಮವನ್ನು ಎಂಡಿಎ ವತಿಯಿಂದ ನಡೆಸಲು ಸೂಚನೆ ನೀಡಲಾಗಿದೆ, ಎಂದು ಜಿಲ್ಲಾಧಿಕಾರಿ ಜಿ.ಲಕ್ಷ್ಮಿಕಾಂತರೆಡ್ಡಿ ತಿಳಿಸಿದ್ದಾರೆ. ಏರ್ಶೋ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಸೆ. 27ರಂದು ಬನ್ನಿಮಂಟಪದ ಮೈದಾನದಲ್ಲಿ ಏರ್ಶೋ ನಡೆಯಲಿದೆ. ಮತ್ತೊಂದು ದಿನ ಯಾವ ಮಾಡಬೇಕೆಂಬ ದಿನಾಂಕ ಇನ್ನೂ ನಿಗದಿಯಾಗಿಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ, ಜಿ.ಲಕ್ಷ್ಮಿಕಾಂತರೆಡ್ಡಿ ತಿಳಿಸಿದ್ದಾರೆ.Noise Earbuds N1 Pro Truly Wireless Earbuds with Metallic Finish, ANC(Upto 30Db), 60H of Playtime, Dual Pairing, Instacharge(10 Min=200 Min), BT V5.3(Chrome Black)