Skip to main content
ವಿಡಿಯೋ
politics

ಧರ್ಮಸ್ಥಳ ಪ್ರಕರಣ, ದಸರಾ ವಿವಾದ - ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದ್ದೇನು ಗೊತ್ತಾ?

By Shravanthi R
ಧರ್ಮಸ್ಥಳ ಪ್ರಕರಣ, ದಸರಾ ವಿವಾದ - ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದ್ದೇನು ಗೊತ್ತಾ?

ಚಿಕ್ಕಬಳ್ಳಾಪುರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರಚಲಿತ ಬೆಳವಣಿಗೆಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೊರಹಾಕಿದ್ದಾರೆ.

ಚಿಕ್ಕಬಳ್ಳಾಪುರ: ಮಾಜಿ ಶಾಸಕ ಹಾಗೂ ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಅವರು ಶುಕ್ರವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಾ, ಸೋನಿಯಾ ಗಾಂಧಿಯವರಿಗೆ ಧರ್ಮಸ್ಥಳದ ಬಗ್ಗೆ ಏನು ಗೊತ್ತಿದೆ? ಅವರ ತಲೆಯಲ್ಲಿ ಕೇವಲ ತಮ್ಮ ಮಗ ಹಾಗೂ ಲೋಕಸಭೆ ವಿಪಕ್ಷನಾಯಕರಾಗಿರುವ ರಾಹುಲ್‌ ಗಾಂಧಿಯವರನ್ನು ದೇಶದ ಪ್ರಧಾನಿಯನ್ನಾಗಿ ಮಾಡುವುದು ಬಿಟ್ಟು ಬೇರೆ ಆಲೋಚನೆಗಳೇನಿದೆ ಎಂದು ಪ್ರಶ್ನಿಸಿದ್ದಾರೆ. 


ಧರ್ಮಸ್ಥಳದಲ್ಲಿ ಸಾಮೂಹಿಕ ಅಂತ್ಯಕ್ರಿಯೆಗಳು ಹಾಗೂ ಅತ್ಯಾಚಾರ ತನಿಖೆಗೆ ಸಂಬಂಧಿಸಿದಂತೆ, ಮಹಿಳಾ ಸಾಮಾಜಿಕ ಹೋರಾಟಾಗಾರ್ತಿಯರು ಹಾಗೂ ಸಂಘಟನೆಗಳು ಸೇರಿ ಅವರಿಗೆ ನ್ಯಾಯ ದೊರಕಿಸಿ ಕೊಡುವಂತೆ ಒತ್ತಾಯಿಸಿ ಬರೆದ ಪತ್ರಕ್ಕೆ ಸಂಬಂಧಿಸಿದಂತೆ ಸಚಿವರು ಪ್ರತಿಕ್ರಿಯಿಸಿದ್ದಾರೆ.

ಅಖಿಲ ಭಾರತ ಕಾಂಗ್ರೆಸ್‌ ಸಮಿತಿ (ಎಐಸಿಸಿ) ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಈ ಬಗ್ಗೆ ಏನು ಗೊತ್ತಿದೆ, ಅವರ ಮಗನಾದ ಹಾಗೂ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿಯವರನ್ನು ಪ್ರಧಾನಿಯನ್ನಾಗಿ ಮಾಡುವ ಯೋಚನೆ ಬಿಟ್ಟು ಎಂದು ಟೀಕಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತವರ ತಂಡ ಈ ಪ್ರಕರಣದಿಂದಾಗಿ ಸಂಪೂರ್ಣವಾಗಿ ದಣಿದಂತೆ ಕಂಡಿದ್ದು, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ಮೇಲೆ ಅಸಮಾಧಾನಗೊಂಡಿದರ ಮೇರೆಗೆ ಪಟ್ಟಭದ್ರ ಹಿತಾಸಕ್ತಿಗಳು ಈ ಮಹಿಳಾ ಸಂಘಟನೆಗಳನ್ನು ಪ್ರಚೋದಿಸಲಾಗಿದೆ ಎನ್ನಲಾಗಿ ಅವರು ಸುಳಿವು ಕೊಟ್ಟಂತಿದೆ ಎನ್ನಲಾಗಿದೆ. ಇದನ್ನೂ ಓದಿ: ಆಲಮಟ್ಟಿ ಜಲಾಶಯ ತುಂಬಿದ ಸಂತಸ: ರೈತರಿಗೆ ಪರಿಹಾರ ಭರವಸೆ - ಸಿದ್ಧರಾಮಯ್ಯ..!

iPhone 16 128 GB: 5G Mobile Phone with Camera Control, A18 Chip and a Big Boost in Battery Life. Works with AirPods; Ultramarine

ಬಾನು ಮುಷ್ತಾಕ್‌ ವಿವಾದದ ಕುರಿತು -

ದಸರಾ ಉತ್ಸವಕ್ಕೆ ರಾಜ್ಯ ಸರ್ಕಾರದಿಂದ ಬಾನು ಮುಷ್ತಾಕ್‌ ಅವರ ಆಯ್ಕೆಯನ್ನು ಪ್ರಶ್ನಿಸಿದ ಅವರು, ಸಿದ್ದರಾಮಯ್ಯ ಅವರು ಯಾರನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದಾರೋ ತಿಳಿದಿಲ್ಲ, ಸಾಂದರ್ಭಿಕವಾಗಿ, ಮೈಸೂರಿನ ಚಾಮುಂಡಿದೇವತೆಯನ್ನು ಅಗೌರವಿಸುವುದು ಸರಿಯಲ್ಲ, ಬಾನು ಮುಷ್ತಾಕ್‌ ದೇವಿಯಲ್ಲಿ ಕ್ಷಮೆಯಾಚಿಸುವಂತೆ ಅವರು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 


ಇದನ್ನೂ ಓದಿ: ರಕ್ತ ಚಂದ್ರ ಗ್ರಹಣದ ಹಿನ್ನೆಲೆ ರಾಜ್ಯದ ದೇವಾಲಯಗಳು ಸಂಪೂರ್ಣ ಬಂದ್‌..!!