Skip to main content
ವಿಡಿಯೋ
science

ಸೂರ್ಯಗ್ರಹಣ 2025: ಭಾರತದಲ್ಲಿ ಸೂರ್ಯಗ್ರಹಣದ ಮಹತ್ವವೇನು? ಗ್ರಹಣ ಸಮಯ ಯಾವಾಗ ಎಂಬುದರ ಕುರಿತು ಇಲ್ಲಿದೆ ಮಾಹಿತಿ

By Shravanthi R
ಸೂರ್ಯಗ್ರಹಣ 2025: ಭಾರತದಲ್ಲಿ ಸೂರ್ಯಗ್ರಹಣದ ಮಹತ್ವವೇನು? ಗ್ರಹಣ ಸಮಯ ಯಾವಾಗ ಎಂಬುದರ ಕುರಿತು ಇಲ್ಲಿದೆ ಮಾಹಿತಿ

ಗ್ರಹಣಗಳು ಪರಿಸರ ದೃಷ್ಟಿ, ಜ್ಯೋತಿಷ್ಯ ಹಾಗೂ ವೈಜ್ಞಾನಿಕ ಚಿಂತನೆಯಿಂದ ಪ್ರಮುಖ ಪ್ರಕ್ರಿಯೆಯಾಗಿದ್ದು, ಗ್ರಹಣದ ಸಮಯದಲ್ಲಿ ಗ್ರಹಗಳ ಜೋಡಣೆ, ದೈನಂದಿನ ಚಾಲನೆಗಳನ್ನು ಅವಲಂಬಿಸಿ ಒದಗಿಬರುವ ಸವಾಲುಗಳು ಮತ್ತು ಅವಕಾಶಗಳನ್ನು ತರುತ್ತದೆ ಎನ್ನಲಾಗಿದೆ.

ಸೆಪ್ಟಂಬರ್‌ ತಿಂಗಳು ಎರಡು ಆಕಾಶ ಸದೃಶ ಘಟನೆಗಳಿಗೆ ಸಾಕ್ಷಿಯಾಗಲಿದೆ. ಇಂದು, ಚಂದ್ರಗ್ರಹಣ, ಇಂದಿನಿಂದ 15 ದಿನಗಳ ನಂತರದಲ್ಲಿ ಸೆ. 21 ರಂದು ಸೂರ್ಯಗ್ರಹಣ ಸಂಭವಿಸಲಿದೆ. ಈ ವರ್ಷದ ಎರಡನೇ ಹಾಗೂ ಕೊನೆಯ ಸೂರ್ಯಗ್ರಹಣವು ಪಿತೃ ಪಕ್ಷದ ಗ್ರಹಣದೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಕೊನೆಗೊಳ್ಳುತ್ತದೆ,  ಇದು ಜ್ಯೋತಿಷ್ಯಶಾಸ್ತ್ರೀಯವಾಗಿ ಮಹತ್ವದ್ದಾಗಿದೆ ಎನ್ನಲಾಗಿದೆ.

ಸೂರ್ಯಗ್ರಹಣ ಎಂದರೆ ಚಂದ್ರನು ಭೂಮಿಯ ಮತ್ತು ಸೂರ್ಯನ ಮಧ್ಯೆ ಬಂದಾಗ ಸೂರ್ಯನ ಬೆಳಕು ಭೂಮಿಗೆ ತಲುಪದಂತೆ ತಡೆಹಿಡಿಯುವ ಪ್ರಾಕೃತಿಕ ಚಲನೆ. ಇದರ ಪರಿಣಾಮವಾಗಿ ಭೂಮಿಯ ಕೆಲವು ಭಾಗಗಳಲ್ಲಿ ಸೂರ್ಯ ಸಂಪೂರ್ಣವಾಗಿ ಅಥವಾ ಭಾಗಶಃ ಮುಸುಕಿರಲಿದೆ. ಭಾರತೀಯ ಕಾಲಮಾನ 11.00 ಸುಮಾರಿಗೆ ಶುರುವಾಗಿ, 3.23 ರವರೆಗೆ ಅಶ್ವಿನಿ ಮಾಸದಂದು ಮುಂದುವರೆಯಲಿದೆ ಎನ್ನಲಾಗಿದೆ. 

ಗ್ರಹಣಗಳು ಪರಿಸರ ದೃಷ್ಟಿ, ಜ್ಯೋತಿಷ್ಯ ಹಾಗೂ ವೈಜ್ಞಾನಿಕ ಚಿಂತನೆಯಿಂದ ಪ್ರಮುಖ ಪ್ರಕ್ರಿಯೆಯಾಗಿದ್ದು, ಗ್ರಹಣದ ಸಮಯದಲ್ಲಿ ಗ್ರಹಗಳ ಜೋಡಣೆ ದೈನಂದಿನ ಚಾಲನೆಗಳನ್ನು ಅವಲಂಬಿಸಿ ಒದಗಿಬರುವ ಸವಾಲುಗಳು ಮತ್ತು ಅವಕಾಶಗಳನ್ನು ತರುತ್ತದೆ ಎನ್ನಲಾಗಿದೆ. 

iPhone 16e 128 GB: Built for Apple Intelligence, A18 Chip, Supersized Battery Life, 48MP Fusion. Camera, 15.40 cm (6.1″) Super Retina XDR Display; Black

ಈ ಸೂರ್ಯಗ್ರಹಣ ಆಸ್ಟ್ರೇಲಿಯಾ, ಅಂಟಾರ್ಕ್ಟಿಕಾ, ಆಫ್ರಿಕಾ, ಹಿಂದೂ ಮಹಾಸಾಗರ, ದಕ್ಷಿಣ ಪೆಸಿಫಿಕ್ ಮಹಾಸಾಗರ, ಅಟ್ಲಾಂಟಿಕ ಮಹಾಸಾಗರ, ದಕ್ಷಿಣ ಸಾಗರ, ಪಾಲಿನೇಷ್ಯಾ, ಮೆಲನೇಷಿಯಾ, ಏಷ್ಯಾದ ಕೆಲವು ಭಾಗಗಳು ಹಾಗೂ ನ್ಯೂಜಿಲೆಂಡ್ ದೇಶಗಳಲ್ಲಿ ಸೂರ್ಯಗ್ರಹಣ ಗೋಚರಿಸಲಿದೆ ಎನ್ನಲಾಗಿದೆ.


ಇದನ್ನೂ ಓದಿ: ಸಮಾಜದಲ್ಲಿ ಏನೋ ದೋಷವಿದೆ; ನಮಗೆ ಪರಸ್ಪರರ ಮೂಲಭೂತ ಹಕ್ಕುಗಳನ್ನು ಗೌರವಿಸಲು ಸಾಧ್ಯವಾಗುತ್ತಿಲ್ಲ: ನ್ಯಾ. ಓಕಾ ವಿಷಾದ