Skip to main content
ವಿಡಿಯೋ
1/2
politics

ಇಶಿಬಾ ರಾಜೀನಾಮೆ ಘೋಷಣೆ ಸಾಧ್ಯತೆ: LDP ಒಳಗೆ ಭಿನ್ನಾಭಿಪ್ರಾಯ..!

By Sushmitha R
ಇಶಿಬಾ ರಾಜೀನಾಮೆ ಘೋಷಣೆ ಸಾಧ್ಯತೆ: LDP ಒಳಗೆ ಭಿನ್ನಾಭಿಪ್ರಾಯ..!

ಜಪಾನ್‌ನ ಪ್ರಧಾನಿ ಶಿಗೆರು ಇಶಿಬಾ ರಾಜೀನಾಮೆ ನೀಡಲು ನಿರ್ಧರಿಸಿರುವುದು ದೇಶದ ರಾಜಕೀಯ ಬಿಕ್ಕಟ್ಟನ್ನು ಮತ್ತಷ್ಟು ತೀವ್ರಗೊಳಿಸಿದೆ. ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷ (LDP) ಒಳಗಿನ ಒಡಕುಗಳನ್ನು ತಡೆಗಟ್ಟಲು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಜಪಾನ್‌ನ ಪ್ರಧಾನಿ ಶಿಗೆರು ಇಶಿಬಾ ರಾಜೀನಾಮೆ ನೀಡಲು ನಿರ್ಧರಿಸಿರುವ ಸಾದ್ಯತೆ, ದೇಶದ ರಾಜಕೀಯ ಬಿಕ್ಕಟ್ಟನ್ನು ಮತ್ತಷ್ಟು ತೀವ್ರಗೊಳಿಸಿದೆ. ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷ (LDP) ಒಳಗಿನ ಒಡಕುಗಳನ್ನು ತಡೆಗಟ್ಟಲು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರ ಹೇಳಿಕೆಗಳನ್ನು ಸ್ವಾಗತಿಸಿದ ಮೋದಿ: ಭಾರತ-ಅಮೆರಿಕ ಪಾಲುದಾರಿಕೆ ಇನ್ನು ಉತ್ತಮವಾಗಲಿದೆ

ಕಳೆದ ಐದು ವರ್ಷಗಳಿಂದ ಜಪಾನ್‌ನ ರಾಜಕೀಯ ವಾತಾವರಣವು ಅಸ್ಥಿರವಾಗಿದ್ದು, ಯಾವುದೇ ಪ್ರಧಾನಿ ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಅಧಿಕಾರದಲ್ಲಿ ಉಳಿಯಲು ಸಾಧ್ಯವಾಗಿಲ್ಲ. ಇಶಿಬಾ ಅವರ ಈ ತೀರ್ಮಾನಕ್ಕೆ ಇತ್ತೀಚಿನ ಸಂಸತ್ತಿನ ಮೇಲ್ಮನೆ ಚುನಾವಣೆಯಲ್ಲಿ LDP-ಗಠಬಂಧನದ ಸೋಲು ಪ್ರಮುಖ ಕಾರಣವಾಗಿರಬಹುದು.ಜನಾರ್ದನ ರೆಡ್ಡಿ Vs ಸಸಿಕಾಂತ್ ಸೆಂಥಿಲ್: ರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ ಸೆಂಥಿಲ್!

Women's Leaf Print Straight Kurti, 3/4 Sleeve, Cotton, Casual Wear, Ethinic Wear

ಈ ಸೋಲು ಪಕ್ಷದ ಒಗ್ಗಟ್ಟಿಗೆ ಧಕ್ಕೆ ತಂದಿದ್ದು, ಇಶಿಬಾ ಅವರ ನಾಯಕತ್ವದ ಮೇಲೆ ಒತ್ತಡ ಹೆಚ್ಚಿಸಿದೆ. ಆದರೆ, ದಿ ಯೊಮಿಯುರಿ ಶಿಂಬುನ್‌ನಂತಹ ಕೆಲವು ಮಾಧ್ಯಮಗಳು ಇಶಿಬಾ ರಾಜೀನಾಮೆಯ ಉದ್ದೇಶವನ್ನು ತಳ್ಳಿಹಾಕಿದ್ದಾರೆ ಎಂದು ವರದಿಗಳು ತಿಳಿಸಿದೆ.

ಇದು ಈ ವಿಷಯದ ಬಗ್ಗೆ ಸ್ಪಷ್ಟತೆಯ ಕೊರತೆಯನ್ನು ಸೂಚಿಸುತ್ತದೆ, ಇದರಿಂದ ಗೊಂದಲದ ವಾತಾವರಣವನ್ನು ಸೃಷ್ಟಿಸಿದೆ. ಇಶಿಬಾ ರಾಜೀನಾಮೆ ನೀಡಿದರೆ, LDP ಒಳಗಿನ ಗುಂಪುಗಾರಿಕೆ ಮತ್ತು ರಾಜಕೀಯ ಅನಿಶ್ಚಿತತೆಯಿಂದಾಗಿ ಹೊಸ ನಾಯಕತ್ವದ ಆಯ್ಕೆಯು ಜಪಾನ್‌ನ ಭವಿಷ್ಯದ ಆಡಳಿತಕ್ಕೆ ನಿರ್ಣಾಯಕವಾಗಲಿದೆ.ಶಾಸಕ VS ಸಂಸದ: ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಮಾನಹಾನಿ ದಾವೆ ಹೂಡಿದ ಸಂಸದ ಶಶಿಕಾಂತ್‌ ಸೆಂಥಿಲ್‌: ಬಳ್ಳಾರಿಯಲ್ಲಿ ಸೆಂಥಿಲ್‌ DC ಆಗಿದ್ದೆ ಕಾರಣವೇ? ಏನೀ ನಂಟು? ಇಲ್ಲಿದೆ ಮಾಹಿತಿ

ರಾಜೀನಾಮೆ ಹಿಂದಿನ ನಿಜವಾದ ಕಾರಣವೇನು?

ಇಶಿಬಾ ಅಕ್ಟೋಬರ್‌ನಲ್ಲಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡರು.ಆದರೆ ಜುಲೈನಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಅವರ ಪಕ್ಷವು ಹೀನಾಯ ಸೋಲನ್ನು ಅನುಭವಿಸಿತು. 248 ಸ್ಥಾನಗಳ ಮೇಲ್ಮನೆಯಲ್ಲಿ ಬಹುಮತವನ್ನು ಪಡೆಯಲು ವಿಫಲವಾದ ಕಾರಣ ಸರ್ಕಾರದ ಸ್ಥಿರತೆಯನ್ನು ಪ್ರಶ್ನಿಸಲಾಯಿತು. ಈ ಸೋಲಿನ ನಂತರ, ಇಶಿಬಾ ಪಕ್ಷದೊಳಗಿನ ವಿರೋಧಕ್ಕೆ ಗುರಿಯಾಗಿದ್ದಾರೆ. ವಿಶೇಷವಾಗಿ ಬಲಪಂಥೀಯ ಬಣವು ಅವರ ರಾಜೀನಾಮೆಗೆ ನಿರಂತರವಾಗಿ ಒತ್ತಾಯಿಸುತ್ತಿತ್ತು. ಇಲ್ಲಿಯವರೆಗೆ ಅವರು ಒತ್ತಡವನ್ನು ಸಹಿಸಿಕೊಳ್ಳುತ್ತಿದ್ದರು, ಆದರೆ ಅಂತಿಮವಾಗಿ ಅವರು ರಾಜೀನಾಮೆ ನೀಡಲು ನಿರ್ಧರಿಸಿದರು.

ಜಪಾನ್‌ನ ಆರ್ಥಿಕ ಮತ್ತು ಭದ್ರತಾ ನೀತಿಗಳ ಮೇಲೆ ಈ ಬಿಕ್ಕಟ್ಟಿನ ಪರಿಣಾಮ ಗಮನಾರ್ಹವಾಗಿದೆ. ಇಶಿಬಾ ಅವರ ನಿರ್ಗಮನವು ದೇಶದ ಆಡಳಿತದಲ್ಲಿ ಮತ್ತಷ್ಟು ಬದಲಾವಣೆಗಳಿಗೆ ಕಾರಣವಾಗಬಹುದು, ವಿಶೇಷವಾಗಿ ಅಂತರರಾಷ್ಟ್ರೀಯ ಸವಾಲುಗಳ ನಡೆದಿವೆ.