Skip to main content
ವಿಡಿಯೋ
1/2
politics

ಜನಾರ್ದನ ರೆಡ್ಡಿ Vs ಸಸಿಕಾಂತ್ ಸೆಂಥಿಲ್: ರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ ಸೆಂಥಿಲ್!

By Pavitra Ganapathi Baradavalli
ಜನಾರ್ದನ ರೆಡ್ಡಿ Vs ಸಸಿಕಾಂತ್ ಸೆಂಥಿಲ್: ರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ ಸೆಂಥಿಲ್!

ತನ್ನ ವಿರುದ್ಧ ಆರೋಪ ಮಾಡಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ನ್ಯಾಯಾಲಯದಲ್ಲಿ ಉತ್ತರ ನೀಡಬೇಕು ಎಂದು ತಮಿಳುನಾಡಿನ ಸಂಸದ ಹಾಗೂ ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ಒತ್ತಾಯಿಸಿದ್ದಾರೆ.

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಮಾಡಲಾದ ಆರೋಪಗಳಿಗೆ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ನ್ಯಾಯಾಲಯದಲ್ಲಿ ಉತ್ತರ ನೀಡಬೇಕು ಎಂದು ತಮಿಳುನಾಡಿನ ಸಂಸದ ಹಾಗೂ ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ಒತ್ತಾಯಿಸಿದ್ದಾರೆ. ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಜನಾರ್ದನ ರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಆಗಮಿಸಿದ ಸಂದರ್ಭದಲ್ಲಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಧರ್ಮಸ್ಥಳ ವಿರುದ್ಧದ ಆರೋಪಗಳ ಹಿಂದಿನ ಮಾಸ್ಟರ್ ಮೈಂಡ್ ಮತ್ತು ಸ್ಕ್ರಿಪ್ಟ್ ರೈಟರ್ ನಾನೆಂದು ಜನಾರ್ದನ ರೆಡ್ಡಿ ವಾಟ್ಸಾಪ್ ಫಾರ್ವರ್ಡ್ ಮೆಸೇಜ್ ಆಧರಿಸಿ ಆರೋಪಿಸಿದ್ದಾರೆ ಎಂದು ಸೆಂಥಿಲ್ ಹೇಳಿದರು.ಇದನ್ನೂ ಓದಿ: ರಾಹುಲ್ ಗಾಂಧಿ ತೇಜಸ್ವಿ ಯಾದವ್‌ರನ್ನು ‘ಸೂಪರ್ ಪಪ್ಪು’ ಮಾಡಿದ್ದಾರೆ, ಲಾಲು ಯಾದವ್‌ರ ಕನಸನ್ನು ಧ್ವಂಸಗೊಳಿಸಿದ್ದಾರೆ: ಸಚಿವ ಗಿರಿರಾಜ್ ಸಿಂಗ್


ಒಬ್ಬ ಸಂಸದನಾಗಿ ಇಂತಹ ಬಾಲಿಶ ಆರೋಪಗಳಿಗೆ ಪ್ರತಿಕ್ರಿಯಿಸಬೇಕೇ ಎಂದು ಆರಂಭದಲ್ಲಿ ಸುಮ್ಮನಾಗಿದ್ದೆ. ಆದರೆ, ಪ್ರತಿದಿನ ಹೊಸ ಕಥೆಗಳು ಸೃಷ್ಟಿಯಾಗುತ್ತಿರುವುದರಿಂದ ಪ್ರತಿಕ್ರಿಯಿಸುವುದು ಅನಿವಾರ್ಯವಾಗಿದೆ. ಸಾರ್ವಜನಿಕವಾಗಿ ಮತ್ತು ಕಾನೂನಾತ್ಮಕವಾಗಿ ಉತ್ತರ ನೀಡಬೇಕಾಗಿರುವುದರಿಂದ ಮಾನನಷ್ಟ ಮೊಕದ್ದಮೆ ದಾಖಲಿಸುತ್ತಿದ್ದೇನೆ" ಎಂದು ಅವರು ಸ್ಪಷ್ಟಪಡಿಸಿದರು.ಇದನ್ನೂ ಓದಿ: ಸರ್ಕಾರಿ ಶಾಲೆ ಮಕ್ಕಳ ಹೆಸರಲ್ಲಿ ವಿನೂತನ ಪ್ರಯೋಗ;ಸರ್ಕಾರಿ ಶಾಲೆಗೆ ಸೇರಿಸುವ ಮಕ್ಕಳ ಪೋಷಕರಿಗೆ ಮಾತ್ರ ಗ್ಯಾರಂಟಿ ಯೋಜನೆ…!!

ನಾನು ಕರ್ನಾಟಕದಲ್ಲಿ ಹತ್ತು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ ಮತ್ತು ಇಲ್ಲಿ ಅಪರಿಚಿತನಲ್ಲ. ನನ್ನ ವಿರುದ್ಧ ಆರೋಪಿಸಿರುವ ವ್ಯಕ್ತಿ ಯಾರೆಂಬುದು ಎಲ್ಲರಿಗೂ ತಿಳಿದಿದೆ. ಕರ್ನಾಟಕದ ಸಂಪತ್ತನ್ನು ಲೂಟಿ ಮಾಡಿ ಏಳು ವರ್ಷ ಜೈಲು ಶಿಕ್ಷೆ ಅನುಭವಿಸಿದ ವ್ಯಕ್ತಿಯ ಸುಳ್ಳು ಮಾತುಗಳನ್ನು ಹರಡಲು ಬಿಟ್ಟರೆ ಅದು ನನ್ನ ತಪ್ಪಾಗುತ್ತದೆ ಎಂದು ಸೆಂಥಿಲ್ ತಿಳಿಸಿದರು. ಸಾರ್ವಜನಿಕ ಹಿತಾಸಕ್ತಿಯಿಂದ ಅವರ ವಿರುದ್ಧ ಖಾಸಗಿ ದೂರು ಸಲ್ಲಿಸುತ್ತಿದ್ದೇನೆ. ಅವರು ನ್ಯಾಯಾಲಯದಲ್ಲಿ ಬಂದು ಉತ್ತರಿಸಲಿ ಎಂದು ಸೆಂಥಿಲ್ ಸವಾಲು ಹಾಕಿದರು. ದೆಹಲಿಯಲ್ಲಿ ಮನೆ ನೀಡದ ವಿಷಯವನ್ನೂ ಅವರು ಪ್ರಸ್ತಾಪಿಸಿದರು.ಇದನ್ನೂ ಓದಿ: ಮಾಸ್ಕ್ ಮ್ಯಾನ್‌ ಚಿನ್ನಯ್ಯನನ್ನು ಮತ್ತೆ ಕಸ್ಟಡಿ ಪಡೆಯುವ ಅವಶ್ಯಕತೆ ಇಲ್ಲ: ಎಸ್ಐಟಿಗೆ ಏನು ಬೇಕೊ ಎಲ್ಲ ಮಾಹಿತಿ ಕೊಟ್ಟಿದ್ದಾನೆ


ಇಡೀ ದೇಶದಲ್ಲಿ ನಾನು ಬಲಪಂಥೀಯ ರಾಜಕಾರಣವನ್ನು ಎದುರಿಸುತ್ತಿದ್ದೇನೆ. ಇದೇ ಕಾರಣಕ್ಕೆ ನಾನು ರಾಜೀನಾಮೆ ನೀಡಿದ್ದೆ ಮತ್ತು ಅದನ್ನು ರಾಜೀನಾಮೆ ಪತ್ರದಲ್ಲೂ ಉಲ್ಲೇಖಿಸಿದ್ದೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡೇ ಈ ರೀತಿ ರಾಜಕೀಯ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು.ಇದನ್ನೂ ಓದಿ: ಧರ್ಮಸ್ಥಳ ಕೇಸ್‌ ವಿಚಾರ: ಬುರುಡೆ ಗ್ಯಾಂಗ್‌ಗೆ ಕೇರಳ ಕಮ್ಯುನಿಸ್ಟ್‌ ರಾಜಕಾರಣಿಯ ನಂಟು ಆರೋಪ: ಇಲ್ಲಿದೆ ಮಾಹಿತಿ

ಇದು ಬಲಪಂಥೀಯ ವ್ಯವಸ್ಥಿತ ಪ್ರಯತ್ನದ ಭಾಗವಾಗಿದೆ. ದೆಹಲಿಯಲ್ಲಿ ಭೇಟಿಯಾಗಿ ತಲೆಬುರುಡೆಯನ್ನು ನಾನೇ ಕೊಟ್ಟೆ ಎಂದು ಆರೋಪಿಸಿದ್ದಾರೆ. ಸಂಸದನಾಗಿ ಒಂದು ವರ್ಷವಾದರೂ ಈ ಸರ್ಕಾರ ನನಗೆ ದೆಹಲಿಯಲ್ಲಿ ಇನ್ನೂ ಮನೆಯನ್ನೇ ನೀಡಿಲ್ಲ, ನಾನಿನ್ನೂ ತಮಿಳುನಾಡಿನ ನಿವಾಸದಲ್ಲೇ ಇದ್ದೇನೆ. ತಲೆಬುರುಡೆ ಎಲ್ಲಿ ಸಿಗುತ್ತದೆ ಎಂದೂ ನನಗೆ ಗೊತ್ತಿಲ್ಲ. ಬಹುಶಃ ಜನಾರ್ದನ ರೆಡ್ಡಿಯವರಿಗೆ ಚೆನ್ನಾಗಿ ಗೊತ್ತಿರಬಹುದು ಎಂದು ಸೆಂಥಿಲ್ ತಿರುಗೇಟು ನೀಡಿದರು.

ವಕೀಲ ಸೂರ್ಯ ಮುಕುಂದರಾಜ್ ಅವರೊಂದಿಗೆ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಆಗಮಿಸಿದ ಸಶಿಕಾಂತ್ ಸೆಂಥಿಲ್ ಖಾಸಗಿ ದೂರು ಸಲ್ಲಿಸಿದರು. ಈ ಪ್ರಕರಣದ ವಿಚಾರಣೆ ಸೆಪ್ಟೆಂಬರ್ 11ರಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿದೆ.JUNEBERRY® Oversized Loose Baggy Fit Drop Shooulder Half Sleeves Pure Cotton Happy Guy Back Graphic Printed Black T-Shirt for Women & Girls (Sizes: S to 2XL)