Skip to main content
ವಿಡಿಯೋ
webstory

ಕಡಲ ಚಿಪ್ಪುಗಳು: ಪ್ರಾಕೃತಿಕ ಸೃಷ್ಟಿ - ಸೌಂದರ್ಯ, ಸಂಗ್ರಹಣೆ ಮತ್ತು ಉದ್ಯಮ

By Shravanthi R
ಕಡಲ ಚಿಪ್ಪುಗಳು: ಪ್ರಾಕೃತಿಕ ಸೃಷ್ಟಿ - ಸೌಂದರ್ಯ, ಸಂಗ್ರಹಣೆ ಮತ್ತು ಉದ್ಯಮ

ಕಿವಿಯೋಲೆಗಳಿಂದ ಹಿಡಿದು ಕಾಲುರಂಗಿನವರೆಗೂ, ಸಾಂಪ್ರದಾಯಿಕ ಧಿರಿಸಿಗೆ ಮೆರುಗು ತುಂಬುವುದರ ಜೊತೆಗೆ, ಬೀಚ್, ಅಲೆ ಮತ್ತು ಸಮುದ್ರ ಚಲಚರಗಳ ತುಂಬು ಉತ್ಸಾಹವನ್ನು ನೆನೆಕೆಯಾಗಿ ತೇಲಿಸುವ ಕಪ್ಪೆಚಿಪ್ಪು ಸಂಗ್ರಹವೂ ಒಂದು ಉದ್ಯಮವಾಗಿ ಕರಾವಳಿಯ ಭಾಗದಲ್ಲಿ ಕಸುಬು ಎನಿಸಿದೆ.

ಪ್ರಕೃತಿದತ್ತವಾದ ಉತ್ಪನ್ನಗಳಲ್ಲಿ ಒಂದಾಗಿರುವ ಕಡಲ ಚಿಪ್ಪುಗಳು - ಸೀಶೆಲ್ಸ್‌ ಒಂದು ಅದ್ಭುತ ಪ್ರಾಕೃತಿಕ ರಚನೆಯಾಗಿದೆ. ಇವುಗಳ ಸಾಂಕೇತಿಕ ಅರ್ಥವು ಸಮುದ್ರದಲ್ಲಿ ವಿಶಿಷ್ಟ ಜೀವ ಜಲಚರಗಳ ಮಧ್ಯೆ ಲಕ್ಷಾಂತರ ವರ್ಷಗಳಿಂದ ನೆಲೆಯಾಗಿರುವ; ಐತಿಹ್ಯ ವಿನ್ಯಾಸಗಳಿಂದ ಜನರು ಮೋಹಗೊಳ್ಳುವ ಆಭರಣ, ಅಲಂಕಾರಗಳಿಗೆ ಇವತ್ತಿನ ಸೌಂದರ್ಯ ಪ್ರಪಂಚಕ್ಕೆ ಕೊಡುಗೆಯಾಗಿವೆ.

ಕರಕುಶಲ ಪ್ರೇಮಿಗಳಿಗೆ ಆಕರ್ಷಕ ಡಿಸೈನ್ಸ್‌ ಹಾಗೂ ಮಾರ್ಬಲ್ಸ್‌ಗಳೊಟ್ಟಿಗೆ ಮಿಶ್ರಿತವಾಗುವ ಇವು ವಿವಿಧ ಕ್ರಾಫ್ಟ್‌ ಹಾಗೂ ಆರ್ನಮೆಂಟ್ಸ್‌ಗಳಿಗಾಗಿ ಬಳಕೆಯಾಗುತ್ತಿವೆ. ಬಹು ಹಿಂದಿನ ಕಾಲದಿಂದ ಮಾನವಕುಲದ ಜೀವನಪಯಣವನ್ನು ಹೋಲುವ ಜೊತೆಗೆ ಶಕ್ತ ಹಾಗೂ ರಕ್ಷಣಾ ಧಾರಣೆಗಾಗಿ ಇವುಗಳು ಪ್ರೇರೇಪಿಸಿದೆ. ಇದಲ್ಲದೇ ಮನಸ್ಸಿನ ದೃಢತೆ, ವಿಶ್ರಾಂತಿ, ಆಧ್ಯಾತ್ಮಿಕತೆ, ಹೀಗೆ ಹಲವು ಆಯಾಮಗಳಲ್ಲಿ ಸೀಶೆಲ್ಸ್‌ಗಳು ಪ್ರತಿನಿಧಿಸುತ್ತದೆ.

ಸಾಂದ್ರಗೊಳ್ಳುವ ಚಿಪ್ಪುಗಳನ್ನು ಶೇಖರಿಸಿ, ಮಹಿಳೆಯರು ಮತ್ತು ಪುರುಷ ಸಂಗ್ರಹಣಕಾರರು ಈ ಬಗೆಯಲ್ಲಿ ತಮ್ಮ ಪರಿಶ್ರಮದಿಂದ ಸಣ್ಣ ಔದ್ಯಮಿಕ ದಾರಿಯ ಬದುಕು ಕಟ್ಟಿಕೊಂಡಿದ್ದಾರೆ. ಇವರಿಗೆ ಎದುರಾಗುವ ಜೀವ ಕಳೆದುಕೊಳ್ಳುವ ಅಪಾಯಗಳ, ಅಪಘಾತಗಳ ನಡುವೆಯೇ ಇವರಿಗೆ ಒದಗಿಸಲೇ ಬೇಕಾದ ಮೀನುಗಾರರ ಸೌಲಭ್ಯವು, ಮೂಲ ಸಹಾಯಗಳಿಂದ ಸರ್ಕಾರವು ಇವರ ಕೂಗಿಗೆ ಓಗೋಡಬೇಕಿದೆ. 


Apple iPhone 15 Plus (128 GB) - Green

ಕಿವಿಯೋಲೆಗಳಿಂದ ಹಿಡಿದು ಕಾಲುರಂಗಿನವರೆಗೂ, ಸಾಂಪ್ರದಾಯಿಕ ಧಿರಿಸಿಗೆ ಮೆರುಗು ತುಂಬುವುದರ ಜೊತೆಗೆ, ಬೀಚ್, ಅಲೆ ಮತ್ತು ಸಮುದ್ರ ಚಲಚರಗಳ ತುಂಬು ಉತ್ಸಾಹವನ್ನು ನೆನೆಕೆಯಾಗಿ ತೇಲಿಸುವ ಕಪ್ಪೆಚಿಪ್ಪು ಸಂಗ್ರಹವೂ ಒಂದು ಉದ್ಯಮವಾಗಿ ಕರಾವಳಿಯ ಭಾಗದಲ್ಲಿ ಕಸುಬು ಎನಿಸಿದೆ. ನದಿಗಳಲ್ಲಿ, ಸಮುದ್ರದಲೆಗಳಿಂದ ಅಲೆಗಳು ತೇಲಿಬಂದು ದಡಕ್ಕೆ ಅಬ್ಬರಿಸುವಾಗ, ಇವುಗಳ ಕರಾಮತ್ತು ಚಿಣ್ಣರನ್ನು, ಆಭರಣಪ್ರಿಯರನ್ನು ತನ್ನೆಡೆಗೆ ಸೆಳೆಯುತ್ತದೆ. 


ಇದನ್ನೂ ಓದಿ: ಇಶಿಬಾ ರಾಜೀನಾಮೆ ಘೋಷಣೆ ಸಾಧ್ಯತೆ: LDP ಒಳಗೆ ಭಿನ್ನಾಭಿಪ್ರಾಯ..!