Skip to main content
ವಿಡಿಯೋ
crime

ಸೌಜನ್ಯ ಮಾವ ವಿಠ್ಹಲ ಗೌಡರ ಬುಲೆರೋ ವಾಹನದಲ್ಲಿ SIT ಕಚೇರಿಗೆ ಹಾಜರಾದ ಗಿರೀಶ್ ಮಟ್ಟಣ್ಣನವರ್

By Gireesh Vasishta
ಸೌಜನ್ಯ ಮಾವ ವಿಠ್ಹಲ ಗೌಡರ ಬುಲೆರೋ ವಾಹನದಲ್ಲಿ SIT ಕಚೇರಿಗೆ ಹಾಜರಾದ ಗಿರೀಶ್ ಮಟ್ಟಣ್ಣನವರ್

ಈ ಹಿಂದೆ ಧರ್ಮಸ್ಥಳದಲ್ಲಿ ಮೃತ ಸೌಜನ್ಯ ಪ್ರಕರಣಕ್ಕೆ ನ್ಯಾಯ ಕೊಡಿಸಬೇಕಾಗಿ ಶುರುವಾಗಿದ್ದ ಹೋರಾಟ ಬೇರೆ ದಿಕ್ಕನ್ನೇ ಬದಲಾಯಿಸಿತ್ತು ಹಾಗೂ ಶ್ರೀ ಕ್ಷೇತ್ರ ಹಾಗೂ ಧರ್ಮಕ್ಷೇತ್ರವಾದ ಧರ್ಮಸ್ಥಳದ ಹೆಸರನ್ನು ಕೆಡಿಸಲು ಗಿರೀಶ್‌ ಮಟ್ಟಣ್ಣನವರ್, ಮಹೇಶ್ ತಿಮ್ಮರೋಡಿ ಈ ಎಲ್ಲರು ಸೇರಿ ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ ಎಂಬುದು ಹಲವರ ಆರೋಪವಾಗಿತ್ತು.

ಸೌಜನ್ಯ ಮಾವ ವಿಠ್ಹಲ ಗೌಡರ ಬುಲೆರೋ ವಾಹನದಲ್ಲಿ SIT ಕಚೇರಿಗೆ ಹಾಜರಾದ ಗಿರೀಶ್ ಮಟ್ಟಣ್ಣನವರ್

ಹಿಂದೆ ಮೃತ ಸೌಜನ್ಯ ಪ್ರಕರಣದಲ್ಲಿ ಹೋರಾಟಗಾರರಾಗಿ ಕಾಣಿಸಿಕೊಂಡಿದ್ದ ಗಿರೀಶ್ ಮಟ್ಟಣ್ಣನವರ್ ಇಂದು ವಿಚಾರಣೆಗಾಗಿ SIT ಕಚೇರಿಗೆ ಹಾಜರಾಗಿದ್ದಾರೆ. ಮೃತ ಸೌಜನ್ಯ ಮಾವನಾದ ವಿಠ್ಹಲ ಗೌಡ ಅವರ ಬುಲೆರೋ ವಾಹನದಲ್ಲಿ ಎಸ್ಐಟಿ ಕಚೇರಿಗೆ ಗಿರೀಶ್ ಮಟ್ಟಣ್ಣನವರ್ ಹಾಜರಾಗಿದ್ದಾರೆ.

ಹಿಂದೆ ಧರ್ಮಸ್ಥಳದಲ್ಲಿ ಮೃತ ಸೌಜನ್ಯ ಪ್ರಕರಣಕ್ಕೆ ನ್ಯಾಯ ಕೊಡಿಸಬೇಕಾಗಿ ಶುರುವಾಗಿದ್ದ ಹೋರಾಟ ಬೇರೆ ದಿಕ್ಕನ್ನೇ ಬದಲಾಯಿಸಿತ್ತು ಹಾಗೂ ಶ್ರೀ ಕ್ಷೇತ್ರ ಹಾಗೂ ಧರ್ಮಕ್ಷೇತ್ರವಾದ ಧರ್ಮಸ್ಥಳದ ಹೆಸರನ್ನು ಕೆಡಿಸಲು ಗಿರೀಶ್‌ ಮಟ್ಟಣ್ಣನವರ್, ಮಹೇಶ್ ತಿಮ್ಮರೋಡಿ ಎಲ್ಲರು ಸೇರಿ ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ ಎಂಬುದು ಹಲವರ ಆರೋಪವಾಗಿತ್ತು.Levi's Men's Slim Fit Mid Rise 511 Mid-Rise Jeans

ಈ ಹಿನ್ನೆಲೆಯಲ್ಲಿ ಮಾಸ್ಕ್ ಮ್ಯಾನ್ ಚಿನ್ನಯ್ಯ ದೂರಿನ ಬಳಿಕ ಅದು ಸತ್ಯ ಎಂಬಂತೆ ಕಂಡುಬಂದಿತ್ತು. ನಂತರ ಸುಜಾತ ಭಟ್ ಕೂಡ ತನ್ನ ಮಗಳಾದ ಅನನ್ಯ ಭಟ್ ಧರ್ಮಸ್ಥಳಕ್ಕೆ ಹೋದ ಸಂದರ್ಭದಲ್ಲಿ ಕೊಲೆ  ಮಾಡಿದ್ದಾರೆ ಹೀಗಾಗಿ ಅವಳ ಅಸ್ತಿಯನ್ನಾದರೂ ಕೊಡಿ ಎಂಬ ನಾಟಕದ ಮಾತುಗಳನ್ನಾಡಿ ನಂತರ ಅದು ಸುಳ್ಳು ಎಂದು ಸಾಬೀತಾಗಿತ್ತು. ಇದಕ್ಕೂ ಸಹ ಗಿರೀಶ್ ಮಟ್ಟಣ್ಣನವರ್ ಪರೋಕ್ಷವಾಗಿ ಬೆಂಬಲವನ್ನು ನೀಡಿದ್ದರು ಎನ್ನಲಾಗಿದೆ.ಧರ್ಮಸ್ಥಳದ ಪ್ರಕರಣ: SIT ವಿಚಾರಣೆಗೆ ಹಾಜರಾದ ದೂರುದಾರ ಟಿ. ಜಯಂತ್‌

ಆದರೆ ಗಿರೀಶ್ ಮಟ್ಟಣ್ಣನವರ್ ಆರೋಪಗಳನ್ನೆಲ್ಲ ತಳ್ಳಿ ಹಾಕಿದ್ದು ನನಗೂ ಇದಕ್ಕೂ ಯಾವ ಸಂಬಂಧವೂ ಇಲ್ಲ ಎಂದಿದ್ದಾರೆ. ಎಸ್ಐಟಿ ವಿಚಾರಣೆಗೆ ನಾನು ಕಾತುರದಿಂದ ಕಾಯುತ್ತಿದ್ದೇನೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು. ಆದರೆ ಮಾಧ್ಯಮಗಳೊಂದಿಗೆ ಮಾತನಾಡಿದ ಟಿ. ಜಯಂತ್ ಇದಕ್ಕೆಲ್ಲ ಮುಖ್ಯ ಕಾರಣಕರ್ತರೆ ಗಿರೀಶ್ ಮಟ್ಟಣ್ಣನವರ್ ಎಂದು ಹೇಳಿಕೆ ನೀಡಿದ್ದರು. ಬೆಂಗಳೂರಿನಲ್ಲಿ ನನ್ನ ಮನೆಯಲ್ಲಿ ಚಿನ್ನಯ ಮತ್ತು ಗಿರೀಶ್ ಮಟ್ಟಣ್ಣನವರ್ ಹಾಗೂ ಇನ್ನಿತರರು ಸಭೆ ಸೇರಿ ಇತ್ತೀಚೆಗೆ ಧರ್ಮಸ್ಥಳದಲ್ಲಿ ಶೋಧ ಕಾರ್ಯಗಳ ಬಗ್ಗೆ ನೀಲ ನಕ್ಷೆಯನ್ನು ಸಿದ್ಧಪಡಿಸಿದ್ದರು ಎನ್ನಲಾಗಿದೆ.