ನಾಗಮಂಗಲ ಕೋಮುಗಲಭೆ, ಮದ್ದೂರಿನಲ್ಲಿ ಕಲ್ಲು ತೂರಾಟ: ಬಾನು ಮುಷ್ತಾಕ್‌ಗೆ ದಸರಾ ಉದ್ಘಾಟನೆಗೆ ಆಹ್ವಾನ: ಚಾಮುಂಡಿ ಬೆಟ್ಟ ಎಲ್ಲರ ಆಸ್ತಿ: ಬುದ್ದಿ ಕಲಿಯಲಿಲ್ಲವೆ ಸರ್ಕಾರ
ಈ ಹಿಂದೆ ಗಣಪತಿ ವಿಸರ್ಜನೆ ವೇಳೆ ನಾಗಮಂಗಲದಲ್ಲಿ ಕೋಮುಗಲಭೆ ಸೃಷ್ಟಿಯಾಗಿತ್ತು. ಅದರಲ್ಲಿ ಹಲವಾರು ಮುಸ್ಲಿಂ ಕಿಡಿಗೇಡಿಗಳನ್ನು ಬಂಧಿಸಲಾಗಿತ್ತು. ಆದರೂ ಆ ರೀತಿಯ ಕೋಮುಗಲಭೆ. ಅಲ್ಲಿಗೆ ನಿಲ್ಲಲಿಲ್ಲ ಅದು ಮುಂದುವರೆದು ಮತ್ತೆ ಮಂಡ್ಯ ಜಿಲ್ಲೆಯ ಮದ್ದೂರಲ್ಲೂ ಸಂಭವಿಸಿದೆ.
ಇದಕ್ಕೆಲ್ಲ ಕಾರಣ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಎಂದು ಕೇಳಿ ಬರುತ್ತಿದೆ. ಇದಕ್ಕೆ ಸಾಕ್ಷಿಗಳು ಸಹ ಇದೆ ಎನ್ನುತ್ತಿದೆ ವರದಿಗಳು. ಅದರಲ್ಲಿ ಮುಖ್ಯವಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರ ಹಲವಾರು ವಿಚಿತ್ರ ಹೇಳಿಕೆಗಳು ಸೇರಿವೆ ಎನ್ನಲಾಗುತ್ತಿದೆ.
1. ನಾಗಮಂಗಲ ಕೋಮುಗಲಭೆ ಆದ ನಂತರ ಗಣಪತಿ ವಿಸರ್ಜನಾ ವೇಳೆಯಲ್ಲಿ ಸರಿಯಾದ ಪೊಲೀಸ್ ಬಂದೋಬಸ್ತ್ ಮಾಡದೆ ಇರುವುದು. ಮಂಡ್ಯ ಜಿಲ್ಲಾ ಪೊಲೀಸ್ ಆಯುಕ್ತರಿಗೆ ಸರಿಯಾದ ತಾಕೀತನ್ನು ಮಾಡದೆ ಇರುವುದು ಕೋಮುಗಲಭೆಗೆ ಕಾರಣವಾಗಿದೆ.
2. ಕರ್ನಾಟಕದ ನಾಡಹಬ್ಬವಾದಂತಹ ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರಿಗೆ ಆಹ್ವಾನ ನೀಡಿದ್ದು ಹಿಂದೂ ಸಂಘಟನೆಗಳ ಹಾಗೂ ಹಿಂದೂಗಳ ಕಣ್ಣನ್ನು ಕೆಂಪು ಮಾಡಿದೆ. ಇದರಲ್ಲಿ ಗಮನಿಸುವ ಅಂಶವೇನೆಂದರೆ ಬಾನು ಮುಷ್ತಾಕ್ ಅವರು ಬೇರೆ ಕೋಮಿನ ಮಹಿಳೆ, ಹೀಗಾಗಿ ಹಿಂದುಗಳ ಪವಿತ್ರ ಹಬ್ಬಕ್ಕೆ ಅವರಿಂದ ಉದ್ಘಾಟನೆ ಸರಿಯಲ್ಲ ಎಂಬುದು ಹಲವರ ವಾದ ಇಷ್ಟಾದರೂ ಸರಕಾರ ತನ್ನ ನಿರ್ಧಾರವನ್ನೇ ಅಂತಿಮ ಮಾಡಿದೆ ಹೀಗಾಗಿ ಇದು ಒಂದು ಕೋಮಿನ ಓಲೈಕೆ ಎಂಬ ಅನುಮಾನವೂ ಸಹ ಮೂಡುತ್ತಿದೆ.ನಿಂದು 4 ಎಕರೆ, ನಂದು 40 ಎಕರೆ: AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಂದ ಸಿನಿಮಾ ಶೈಲಿಯಲ್ಲಿ ಪಾಪ ಬಡ ರೈತನಿಗೆ ಡೈಲಾಗ್
3. ಈ ಹಿಂದೆ ಡಿಕೆ ಶಿವಕುಮಾರ್ ಅವರು ಚಾಮುಂಡಿ ಬೆಟ್ಟದ ಬಗ್ಗೆ ಮಾತನಾಡಿ ಚಾಮುಂಡಿ ಬೆಟ್ಟ ಎಲ್ಲರ ಆಸ್ತಿ ಎಂದು ಹೇಳಿದ್ದರು. ಆದರೆ ಮುಸ್ಲಿಂ ದರ್ಗಾ, ಮಸೀದಿಗಳನ್ನು ಎಲ್ಲರ ಆಸ್ತಿ ಎಂದು ಹೇಳಿಲ್ಲ, ಹಿಂದೂ ಧರ್ಮದ ಮೇಲೆ ಆಗಾಗ್ಗೆ ಡಿಕೆ. ಶಿವಕುಮಾರ್ ಅವರು ಮನಸೊಇಚ್ಚೆ ವಾಗ್ದಾಳಿ ಮಾಡುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆಯು ಉದ್ಭವಿಸಿದೆ.Safari Flip 32L Casual Printed Backpack, 2 Compartments, Bottle Holder, Front Pocket, School Bag for Boys and Girls, College Bag, Office Bag, Travel Bag for Men and Women
4. ಹೀಗಾಗಿ ಕರ್ನಾಟಕ ಸರ್ಕಾರ ತನ್ನ ಗ್ಯಾರಂಟಿ ಯೋಜನೆಗಳನ್ನು ನಡೆಸಲು ಈಗಾಗಲೇ ಎಲ್ಲಾ ದಿಕ್ಕಿಗೂ ಬೆಲೆ ಏರಿಕೆಯ ಬಿಸಿಯನ್ನು ಮುಟ್ಟಿಸಿದೆ. ಇದನ್ನೇ ಹೊರಲಾರದ ಸಾರ್ವಜನಿಕರು ತತ್ತರಿಸಿ ಹೋಗುತ್ತಿದ್ದಾರೆ. ಇದಾದ ನಂತರ ಹಬ್ಬ ಹರಿದಿನಗಳಲ್ಲೂ ತಮ್ಮ ರಾಜಕೀಯವನ್ನು ಮಾಡುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುತ್ತಿದೆ. ಹಬ್ಬ, ಸಂಪ್ರದಾಯಗಳು ಬರಿ ಒಂದು ದಿನಕ್ಕೆ ಸೀಮಿತವಾಗಿಲ್ಲ, ಅವುಗಳು ಪುರಾತನವಾದ ಸಂಸ್ಕೃತಿಯನ್ನು ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಜವಾಬ್ದಾರಿಯಾಗಿದೆ. ಅಂತಹುದರಲ್ಲಿ ಈ ರೀತಿಯ ಎಡವಟ್ಟುಗಳು ಎಷ್ಟು ಸರಿ ಎಂಬುದು ಚರ್ಚೆಯಾಗುತ್ತಿರುವ ವಿಷಯವಾಗಿದೆ.
ಹೀಗಾಗಿ ಇಷ್ಟೆಲ್ಲಾ ಆದರೂ ಸರ್ಕಾರ ಅನೆ ನಡೆದದ್ದೆ ದಾರಿ ಎನ್ನುತ್ತಿದೆ. ಸರ್ಕಾರದ ಈ ನಡೆಯಿಂದ ಸಾರ್ವಜನಿಕರಿಗೆ ಮುಜುಗರ ಉಂಟಾಗಿರುವುದಂತೂ ಸುಳ್ಳಲ್ಲ.