‘ಸು ಫ್ರಮ್ ಸೋ’ ಚಲನಚಿತ್ರ ಅಂತಿಮವಾಗಿ ಒಟಿಟಿಯಲ್ಲಿ ಬಿಡುಗಡೆಯಾಗಿದೆ. ಈ ಸಿನಿಮಾವನ್ನು ಥಿಯೇಟರ್‌ನಲ್ಲಿ ನೋಡಲು ಸಾಧ್ಯವಾಗದವರು ಈಗ ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು. ಸೆಪ್ಟೆಂಬರ್ 9 ರಿಂದಲೇ ಸ್ಟ್ರೀಮಿಂಗ್ ಆರಂಭಗೊಂಡಿರುವ ಬಗ್ಗೆ ಜಿಯೋ ಹಾಟ್‌ಸ್ಟಾರ್ ಅಧಿಕೃತವಾಗಿ ಪ್ರಕಟಿಸಿದೆ. ಒಟಿಟಿ ಪ್ರೇಕ್ಷಕರಿಗೆ ಇದು ಸಂತಸದ ಸುದ್ದಿಯಾಗಿದೆ.
ಆದರೆ, ಈ ಸಿನಿಮಾ ಒಟಿಟಿಗೆ ಬಂದಾಗ ಅದರ ಅವಧಿ ಕಡಿಮೆಯಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಥಿಯೇಟರ್‌ನಲ್ಲಿ 2 ಗಂಟೆ 17 ನಿಮಿಷ ಪ್ರದರ್ಶನಗೊಂಡಿದ್ದ ಚಿತ್ರದ ಅವಧಿ ಒಟಿಟಿಯಲ್ಲಿ ಕಡಿಮೆಯಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ. ಈ ಕುರಿತು ಸಿನಿಮಾ ತಂಡ ಸ್ಪಷ್ಟನೆ ನೀಡಿದೆ.
Tommy Hilfiger Quartz Multifunction Blue Dial Leather Strap Watch for Men-NETH1791399
ಚಿತ್ರತಂಡದ ಪ್ರಕಾರ, ಒಟಿಟಿ ಆವೃತ್ತಿಯಲ್ಲಿ ಯಾವುದೇ ದೃಶ್ಯಗಳನ್ನು ಕತ್ತರಿಸಲಾಗಿಲ್ಲ. ಥಿಯೇಟರ್‌ನಲ್ಲಿ ಇರುವ ಎಲ್ಲ ದೃಶ್ಯಗಳು ಒಟಿಟಿಯಲ್ಲೂ ಇವೆ. ಆದರೆ, ಸಿನಿಮಾ ತಂಡವು ಧೂಮಪಾನ ಜಾಹೀರಾತುಗಳ ಬಗ್ಗೆ ವಿವರಿಸಿದೆ. ಥಿಯೇಟರ್‌ಗಳಲ್ಲಿ ಇವುಗಳನ್ನು ಪ್ರದರ್ಶಿಸಲು ಅವಕಾಶವಿದ್ದರೂ, ಒಟಿಟಿಯಲ್ಲಿ ಇವುಗಳನ್ನು ತೆಗೆದುಹಾಕಲಾಗುತ್ತದೆ.
'ಸೀರಿಯಸ್ ಲವ್ ಮಾತ್ರ ಬೇಕು' ಎಂದ ಸುದೀಪ್ ಮಗಳು..ಪ್ರೀತಿ ಬಗ್ಗೆ ಇಂಥಾ ಅಭಿಪ್ರಾಯ ಏಕೆ ಸಾನ್ವಿ ಸುದೀಪ್?
‘ಸು ಫ್ರಮ್ ಸೋ’ ಚಲನಚಿತ್ರವನ್ನು ಥಿಯೇಟರ್‌ಗಳಲ್ಲಿ 24 ಫ್ರೇಮ್‌ಗಳಲ್ಲಿ ಪ್ರದರ್ಶಿಸಲಾಗಿತ್ತು. ಆದರೆ, ಒಟಿಟಿ ಪ್ಲಾಟ್‌ಫಾರ್ಮ್‌ಗಳು 25 ಫ್ರೇಮ್‌ಗಳಲ್ಲಿ ಚಿತ್ರವನ್ನು ನೀಡಲು ಕೋರಿದ್ದವು. ಇದರಿಂದಾಗಿ ಅವಧಿಯಲ್ಲಿ ಸ್ವಲ್ಪ ವ್ಯತ್ಯಾಸ ಉಂಟಾಗಿರಬಹುದು. ಆದರೆ, ಇದು ದೃಶ್ಯಗಳನ್ನು ಕತ್ತರಿಸಿದ ಕಾರಣದಿಂದಲ್ಲ ಎಂದು ತಂಡ ಸ್ಪಷ್ಟಪಡಿಸಿದೆ.
‘ಸು ಫ್ರಮ್ ಸೋ’ ಸಿನಿಮಾ ಬಿಡುಗಡೆಯಾಗಿ 45 ದಿನಗಳು ಕಳೆದಿದೆ. ಜುಲೈ 25 ರಂದು ಈ ಚಿತ್ರವು ಕೇವಲ 75 ಥಿಯೇಟರ್‌ಗಳಲ್ಲಿ ತೆರೆಕಂಡಿತ್ತು. ಆದರೆ, ಎರಡನೇ ಮತ್ತು ಮೂರನೇ ದಿನಗಳಲ್ಲಿ ಥಿಯೇಟರ್‌ಗಳ ಹಾಗೂ ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಾಯಿತು. ಚಿತ್ರದ ಗಳಿಕೆ ಕೂಡ ಏರಿಕೆ ಕಂಡಿತು.
ಮೂರು ದಿನಗಳಲ್ಲಿ ಈ ಚಿತ್ರ 6 ಕೋಟಿ ರೂಪಾಯಿ ಗಳಿಸಿತ್ತು. ಎರಡನೇ ವಾರದಲ್ಲಿ ಮಲಯಾಳಂ ಭಾಷೆಯಲ್ಲೂ, ಮೂರನೇ ವಾರದಲ್ಲಿ ತೆಲುಗು ಭಾಷೆಯಲ್ಲೂ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದಿತ್ತು.