ಕಿಚ್ಚ ಸುದೀಪ್ ಅವರ ಪುತ್ರಿ ಸಾನ್ವಿ ಸುದೀಪ್ ಲವ್ ಮತ್ತು ರಿಲೇಷನ್‌ಶಿಪ್ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಅವರು ಆಧುನಿಕ ಸಂಬಂಧಗಳ ಬಗ್ಗೆ ತಮ್ಮ ನಿಲುವುಗಳನ್ನು ಸ್ಪಷ್ಟಪಡಿಸಿದ್ದಾರೆ.
ಸಾನ್ವಿ ಸುದೀಪ್ ಸಂದರ್ಶನಗಳಲ್ಲಿ ಮುಕ್ತವಾಗಿ ಮಾತನಾಡಲು ಇಷ್ಟಪಡುತ್ತಾರೆ. ಯಾವುದೇ ವಿಷಯವಿರಲಿ, ತಮ್ಮ ಅಭಿಪ್ರಾಯಗಳನ್ನು ನೇರವಾಗಿ ಮತ್ತು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಾರೆ. ಯುವ ಪೀಳಿಗೆಯಲ್ಲಿ ಪ್ರಚಲಿತದಲ್ಲಿರುವ ಲವ್ ಮತ್ತು ರಿಲೇಷನ್‌ಶಿಪ್‌ಗಳ ಬಗ್ಗೆ ಅವರಿಗೆ ತಮ್ಮದೇ ಆದ ದೃಢವಾದ ದೃಷ್ಟಿಕೋನವಿದೆ. ಈ ಕುರಿತು ಅವರು ಯಾವುದೇ ಅಳುಕಿಲ್ಲದೆ ಮಾತನಾಡಿದ್ದಾರೆ.
ಸಾನ್ವಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ಪ್ರಸ್ತುತ ರೂಢಿಯಲ್ಲಿರುವ 'ಸಿಚ್ಯುಯೇಷನ್‌ಶಿಪ್' ಮತ್ತು 'ಓಪನ್ ರಿಲೇಷನ್‌ಶಿಪ್' ಬಗ್ಗೆ ಮಾತನಾಡಿದ್ದಾರೆ. ಆದಾಗ್ಯೂ, ಈ ರೀತಿಯ ಸಂಬಂಧಗಳಲ್ಲಿ ತಮಗೆ ನಂಬಿಕೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Titan Maritime Analog Green Dial Men's Watch NM1830KL02/NN1830KL02/NP1830KL02
ನಾನು ಯಾರ ವೃತ್ತಿಜೀವನವನ್ನು ಹಾಳು ಮಾಡಿಲ್ಲ .... ಬಿಗ್ ಬಾಸ್ ವೇದಿಕೆಯಲ್ಲಿ ಸಲ್ಮಾನ್ ಖಾನ್ ಹೇಳಿದ್ದು ಯಾರಿಗೆ?
"ನನಗೆ ಸೆಲ್ಫ್-ರೆಸ್ಪೆಕ್ಟ್ (ಸ್ವಾಭಿಮಾನ) ಮುಖ್ಯ. ನನಗೆ ಸೀರಿಯಸ್ ರಿಲೇಷನ್‌ಶಿಪ್‌ಗಳ ಮೇಲೆ ಮಾತ್ರ ನಂಬಿಕೆಯಿದೆ. ಓಪನ್ ರಿಲೇಷನ್‌ಶಿಪ್‌ಗಳ ಮೇಲೆ ನಂಬಿಕೆಯಿಲ್ಲ" ಎಂದು ಸಾನ್ವಿ ಹೇಳಿದ್ದಾರೆ. "ನಾನು ಒಬ್ಬ ವ್ಯಕ್ತಿಯನ್ನು ಮಾತ್ರ ನಂಬಲು ಇಷ್ಟಪಡುತ್ತೇನೆ.
ಒಮ್ಮೆ ಪ್ರೀತಿಸಿದರೆ, ಇಡೀ ಜೀವನ ಅವರೊಂದಿಗೇ ಇರಲು ಬಯಸುತ್ತೇನೆ" ಎಂದು ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ನಟನೆ ಮತ್ತು ನಿರ್ದೇಶನದ ಬಗ್ಗೆಯೂ ಸಾನ್ವಿಗೆ ಆಸಕ್ತಿಯಿದೆ. ತಂದೆ ಸುದೀಪ್ ಎದುರು ವಿಲನ್ ಪಾತ್ರ ನಿರ್ವಹಿಸುವ ಆಸೆ ಹೊಂದಿದ್ದಾರೆ ಎಂದೂ ಅವರು ಸಂದರ್ಶನಗಳಲ್ಲಿ ತಿಳಿಸಿದ್ದಾರೆ. ರಾಪಿಡ್ ರಶ್ಮಿ ನಡೆಸಿಕೊಡುವ 'ಜೆಸ್ಟ್ ಕ್ಯೂರಿಯಸ್' ಕಾರ್ಯಕ್ರಮದಲ್ಲಿ ಸಾನ್ವಿ ಸುದೀಪ್ ತಮ್ಮ ಈ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.