Skip to main content
ವಿಡಿಯೋ
1/3
cinema

ರೇಣುಕಾಸ್ವಾಮಿ ಕೇಸಿನಲ್ಲಿ ಮತ್ತೊಂದು ತಿರುವು: ಏನಾಯಿತು ವಶಪಡಿಸಿಕೊಂಡ ₹82 ಲಕ್ಷ..? ಇಲ್ಲಿದೆ ಮಾಹಿತಿ

By Ram Chethan
ರೇಣುಕಾಸ್ವಾಮಿ ಕೇಸಿನಲ್ಲಿ ಮತ್ತೊಂದು ತಿರುವು: ಏನಾಯಿತು ವಶಪಡಿಸಿಕೊಂಡ ₹82 ಲಕ್ಷ..? ಇಲ್ಲಿದೆ ಮಾಹಿತಿ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ರಿಂದ ವಶಪಡಿಸಿದ ₹82 ಲಕ್ಷವನ್ನು ಆದಾಯ ತೆರಿಗೆ ಇಲಾಖೆಗೆ ನೀಡಲು 57ನೇ ಸಿಸಿಎಚ್ ಕೋರ್ಟ್ ಇಂದು ಆದೇಶಿಸಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್ ಸೇರಿ ಏಳು ಮಂದಿ ಹಾಜರಾಗಿದ್ದು, ಮುಂದಿನ ವಿಚಾರಣೆಯನ್ನು ಕೋರ್ಟ್ ಮಧ್ಯಾಹ್ನಕ್ಕೆ ಮುಂದೂಡಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಕೆಲವು ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ₹82 ಲಕ್ಷ ಹಣವನ್ನು ಆದಾಯ ತೆರಿಗೆ ಇಲಾಖೆ ವಶಕ್ಕೆ ನೀಡುವಂತೆ ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯ ಇಂದು ಆದೇಶ ಹೊರಡಿಸಿದೆ.Reebok Men's Sneakers - Streetcourt Efficient - Casual Sneakers for Men, Stylish Everyday Wear Shoes

ಈ ಮೊತ್ತವನ್ನು ಪೊಲೀಸರೇ ದರ್ಶನ್‌ನಿಂದ ಸಾಕ್ಷ್ಯ ಸಂಗ್ರಹಣೆಯ ವೇಳೆ ವಶಪಡಿಸಿಕೊಂಡಿದ್ದರು. ಬಳಿಕ, ಈ ಹಣ ತಮ್ಮ ವಶಕ್ಕೆ ಬರಬೇಕೆಂದು ಐಟಿ ಇಲಾಖೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಸೆಷನ್ಸ್ ಕೋರ್ಟ್ ಐಟಿ ಇಲಾಖೆಯ ಅರ್ಜಿಯನ್ನು ಅಂಗೀಕರಿಸಿದ್ದು, ಹಣವನ್ನು ಅಧಿಕೃತವಾಗಿ ಅವರ ವಶಕ್ಕೆ ನೀಡಲು ಅನುಮತಿ ನೀಡಿದೆ.ಇದನ್ನು ಓದಿ:ರೇಣುಕಾಸ್ವಾಮಿ ಕೊಲೆ ಪ್ರಕರಣ: ದರ್ಶನ್–ಪವಿತ್ರಾ ಗೌಡ ಸೇರಿ 17 ಮಂದಿಗೆ ಇಂದು ವಿಚಾರಣೆ

ಇಂದು ದರ್ಶನ್ ಸೇರಿ ಏಳು ಮಂದಿ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮುಖಾಂತರ ಕೋರ್ಟ್‌ನಲ್ಲಿ ಹಾಜರಾಗಿದ್ದರು. ಕೋರ್ಟ್‌ನಲ್ಲಿ ಪ್ರಾಥಮಿಕ ವಿಚಾರಣೆ ನಡೆದಿದ್ದು, ರೇಣುಕಾಸ್ವಾಮಿ ಕೊಲೆ ಪ್ರಕರಣದ ಮುಂದಿನ ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದ ಪ್ರತಿಯೊಂದು ಬೆಳವಣಿಗೆಯೂ ಗಮನ ಸೆಳೆಯುತ್ತಿದ್ದು, ಮುಂದಿನ ವಿಚಾರಣೆ ಹೇಗಿರುತ್ತದೆ ಎಂಬುದರ ಕಡೆ ಎಲ್ಲರ ದೃಷ್ಟಿ ನೆಟ್ಟಿದೆ.