ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಆತನ ಗೆಳತಿ ಪವಿತ್ರಾ ಗೌಡ, ಮತ್ತು ಇನ್ನಿತರ 17 ಮಂದಿ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಯನ್ನು ಇಂದು ಬೆಂಗಳೂರು ಸತ್ರ ನ್ಯಾಯಾಲಯದಲ್ಲಿ ನಡೆಸಲಾಗುತ್ತಿದೆ.GUESS Stainless Steel Analog Black Dial Men's Watch-W1049G5, Dial_ Golden
ಪೊಲೀಸರ ತನಿಖೆಯ ನಂತರ ದರ್ಶನ್ ಮತ್ತು ಪವಿತ್ರಾ ಗೌಡ ಸೇರಿದಂತೆ ಹಲವು ಮಂದಿಯನ್ನು ಆರೋಪಿಗಳ ಪಟ್ಟಿಗೆ ಸೇರಿಸಲಾಗಿದೆ. ಪ್ರಕರಣದಲ್ಲಿ ಕೊಲೆ, ಅಪಹರಣ, ಮತ್ತು ಸಾಕ್ಷ್ಯ ನಾಶ ಮಾಡುವ ಪ್ರಯತ್ನ ಸೇರಿದಂತೆ ಹಲವು ಆರೋಪಗಳು ದಾಖಲಾಗಿವೆ. ಈ ಪ್ರಕರಣ ರಾಜ್ಯವ್ಯಾಪ್ತಿ ಚರ್ಚೆಗೆ ಕಾರಣವಾಗಿದ್ದು, ಜನಸಾಮಾನ್ಯರು ಮತ್ತು ಅಭಿಮಾನಿಗಳ ಗಮನವೂ ನ್ಯಾಯಾಲಯದ ವಿಚಾರಣೆಯತ್ತ ಹರಿದು ಇದೆ.ಇದನ್ನು ಓದಿ:'ಮನೆ ಒಡೆದುʼ ಮದುವೆ ಆದ್ರಾ ಸಮಂತಾ? ಇಷ್ಟು ದೊಡ್ಡ ಆರೋಪ ಮಾಡಿದ್ದು ಯಾರು ಗೊತ್ತಾ? ಇಲ್ಲಿದೆ ಶಾಕಿಂಗ್ ಮಾಹಿತಿ
ವಿಚಾರಣೆ ಇಂದು ನಡೆಯುತ್ತಿರುವುದರಿಂದ, ನ್ಯಾಯಾಲಯ ಏನೆಲ್ಲ ಹೇಳುತ್ತದೆ ಹಾಗೂ ಮುಂದಿನ ಕ್ರಮ ಏನು ಎನ್ನುವುದರ ಕಡೆ ಎಲ್ಲರ ಕಣ್ಣು ನೆಟ್ಟಿದೆ. ಪ್ರಕರಣದ ಮುಂದಿನ ಬೆಳವಣಿಗೆಗಳನ್ನು ಸಾರ್ವಜನಿಕರು ಕಾತರದಿಂದ ಕಾಯುತ್ತಿದ್ದಾರೆ.